ಕೆಲಸದ ಒತ್ತಡದಿಂದಾಗಿ ವ್ಯಕ್ತಿಗೆ ಖಾಲಿ ಸಿರಿಂಜ್ ಚುಚ್ಚಿದ ನರ್ಸ್..!

ಪಾಟ್ನಾ: ಮಹಾಮಾರಿ ಕೊರೊನಾ ವೈರಸ್ ದೇಶಕ್ಕೆ ವಕ್ಕರಿಸಿದ ಬಳಿಕ ಜನರ ಒಳದಲ್ಲ ಒಮದು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ನರ್ಸ್ ಗಳಂತು ತಮ್ಮ ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಈ ಕೆಲಸದ ಒತ್ತಡ ಜನರನ್ನು ಯಾವ ಮಟ್ಟಕ್ಕೆ ಕರೆದೊಯ್ಯುತ್ತದೆ ಎಂಬುದಕ್ಕೆ ಬಿಹಾರದಲ್ಲಿ ನಡೆದ ಘಟನೆಯೇ ಸಾಕ್ಷಿ.

ಹೌದು. ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಹೋದ ವ್ಯಕ್ತಿಗೆ ನರ್ಸ್ ಒಬ್ಬರು ಖಾಲಿ ಸಿರಿಂಜ್ ಚುಚ್ಚಿದ ಘಟನೆ ಬಿಹಾರದ ಛಪ್ಪರಾ ನಗರದ ವಾರ್ಡ್ ನಂಬರ್ 1ರಲ್ಲಿ ನಡೆದಿದೆ.

ನರ್ಸ್ ಇತರರೊಂದಿಗೆ ಮಾತನಾಡುತ್ತಾ ಸಿರಿಂಹ್ ಓಪನ್ ಮಾಡಿ ಯಾವುದೇ ಲಸಿಕೆಯ ಪ್ರಮಾಣವಿಲ್ಲದೆ ವ್ಯಕ್ತಿಗೆ ಚುಚ್ಚಿದ್ದಾರೆ. ಇದನ್ನು ವ್ಯಕ್ತಿಯ ಗೆಳೆಯ ವೀಡಿಯೋ ಮಾಡಿದ್ದು, ಈ ವೇಳೆ ಖಾಲಿ ಸಿರಿಂಜ್ ಚುಚ್ಚಿರೋದು ಬೆಳಕಿಗೆ ಬಂದಿದೆ. ಸದ್ಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನರ್ಸ್ ವಿರುದ್ಧ ಕಠಿಣ ಕ್ರಮಕ್ಕೆ ಜಾಲತಾಣಿಗರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ವ್ಯಾಕ್ಸಿನ್ ಕೊರತೆ- NO STOCK ಫಲಕ ಹಾಕಿದ ಆಸ್ಪತ್ರೆಗಳು

ಈ ಸಂಬಂಧ ಅಧಿಕಾರಿ ಪ್ರತಿಕ್ರಿಯಿಸಿ, ಪ್ರಕರಣ ನಡೆದಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ನರ್ಸ್ ಚಂದ ಕುಮಾರಿ(48)ಅವರಿಗೆ ನೋಟೀಸ್ ನಿಡಲಾಗಿದೆ. ಅಲ್ಲದೆ 48 ಗಂಟೆಯೊಳಗೆ ಸೂಕ್ತ ಕಾರಣ ನೀಡುವಂತೆ ಸೂಚಿಸಲಾಗಿದೆ. ಅಲ್ಲದೆ ಈಗಾಗಲೇ ನರ್ಸ್ ನ ಅಮಾನತು ಮಾಡಲಾಗಿದೆ ಎಂದರು.

ಲಸಿಕಾ ಕೇಂದ್ರದಲ್ಲಿನ ಕೆಲಸದ ಒತ್ತಡದಿಂದ ನರ್ಸ್ ಈ ರೀತಿ ಮಾಡಿದ್ದಾರೆ. ಮುಂದೆ ಆ ವ್ಯಕ್ತಿ ಆಯ್ಕೆ ಮಾಡಿದ ದಿನ ಲಸಿಕೆ ನೀಡಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರ ನನ್ನೊಂದಿಗೆ ಇದೆಯಾ? ಕುಲದೀಪ್ ಸೆನ್‍ಗರ್ ಜೊತೆ?: ಉನ್ನಾವೋ ಪ್ರಕರಣದ ಸಂತ್ರಸ್ತೆ

Comments

Leave a Reply

Your email address will not be published. Required fields are marked *