ಕೆಜಿಎಫ್ ಸಿನಿಮಾ ಕುರಿತು ಶೀಘ್ರವೇ ಅಪ್‍ಡೇಟ್ ಎಂದ ಪ್ರಶಾಂತ್ ನೀಲ್

ಬೆಂಗಳೂರು: ಕೆಜಿಎಫ್ ಸಿನಿಮಾ ಕುರಿತು ಅಪ್‍ಡೇಟ್ ನೀಡುವ ಸುಳಿವನ್ನು ನಿರ್ದೇಶಕ ಪ್ರಶಾಂತ್ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಕೆಜಿಎಫ್ ಚಾಪ್ಟರ್-2 ಅಪ್‍ಡೇಟ್ ವೆರಿ ವೆರಿ ಸೂನ್ ಎಂದು ಬರೆದಿದ್ದಾರೆ. ಈ ಮೂಲಕ ಶೀಘ್ರವೇ ಸಿನಿಮಾ ಅಪ್‍ಡೇಟ್ ನೀಡುವ ಕುರಿತ ಸುಳಿವು ನೀಡಿದ್ದಾರೆ. ಆದರೆ ಯಾವ ರೀತಿಯ ಅಪ್‍ಡೇಟ್ ಎಂಬುನ್ನು ಅವರು ಬಹಿರಂಗಪಡಿಸಿಲ್ಲ. ಟ್ರೇಲರ್, ಟೀಸರ್ ಅಥವಾ ಸಿನಿಮಾ ಬಿಡುಗಡೆ ಕುರಿತು ಅಪ್‍ಡೇಟ್ ನೀಡುತ್ತಾರಾ ಎಂಬುದು ಅಭಿಮಾನಿಗಳ ಕುತೂಹಲವಾಗಿದೆ.

ಇತ್ತೀಚೆಗಷ್ಟೇ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಿದ ಕುರಿತ ಅಪ್‍ಡೇಟ್ ನೀಡಿದ್ದ ಪ್ರಶಾಂತ್ ನೀಲ್ ಇದೀಗ ಮತ್ತೊಂದು ಅಪ್‍ಡೇಟ್ ನೀಡುವ ಕುರಿತು ಹೇಳಿದ್ದಾರೆ. ಅಲ್ಲದೆ ಇತ್ತೀಚೆಗೆ ನರಾಚಿ ಸೆಟ್‍ನಲ್ಲಿನ ತಮ್ಮ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲವನ್ನು ಹೆಚ್ಚಿಸಿದ್ದಾರೆ. ಹೀಗಾಗಿ ಯಾವ ಅಪ್‍ಡೇಟ್ ನೀಡಲಿದ್ದಾರೆ ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ.

ಕೆಜಿಎಫ್-1 ಧೂಳೆಬ್ಬಿಸಿದ ಬಳಿಕ ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ತಿಳಿಸಿದೆ. ಯಶ್ ಅಭಿನಯದ ಈ ಚಿತ್ರದ ಭಾರೀ ನಿರೀಕ್ಷೆ ಮೂಡಿಸಿದ್ದು, ದೇಶ ವಿದೇಶಗಳಲ್ಲಿ ಚಿತ್ರದ ಕುರಿತು ಕುತೂಹಲ ಹೆಚ್ಚಿದೆ. ಬಾಲಿವುಡ್ ನಟರಾದ ಸಂಜಯ್ ದತ್ ಹಾಗೂ ರವೀನಾ ಟಂಡನ್ ಅವರು ಚಿತ್ರ ತಂಡ ಸೇರಿರುವುದು ಇನ್ನೂ ಕುತೂಹಲಕ್ಕೆ ಕಾರಣವಾಗಿದೆ. ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Comments

Leave a Reply

Your email address will not be published. Required fields are marked *