ಕೆಜಿಎಫ್ ಅಂಗಳದಲ್ಲಿ ಹೊಸ ಸಂಚಲನದ ಪಥ

-ಕ್ರೂರ ದಾರಿಯಲ್ಲಿ ರಾಕಿ ಪಯಣ ಆರಂಭ

ಬೆಂಗಳೂರು: ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನೊಂದಿಗೆ ತೆರೆಕಂಡ ಚಿತ್ರ ಕೆಜಿಎಫ್. ಈ ಸಿನಿಮಾ ಮಾಡಿದ್ದ ಸದ್ದು ಇಂದಿಗೂ ಮಾರ್ದನಿಸುತ್ತಿದೆ. ಕೆಜಿಎಫ್ ಮೊದಲ ಭಾಗದಲ್ಲಿ ನೋಡುಗರನ್ನು ಸೆರೆ ಹಿಡಿದಿರೋ ನಿರ್ದೇಶಕ ಪ್ರಶಾಂತ್ ನೀಲ್ ಇಂದಿಗೂ ಅವರನ್ನು ಉಳಿಸಿಕೊಳ್ಳುವದರ ಜೊತೆಗೆ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಸಿನಿಮಾ ಬಗ್ಗೆ ಹೊಸ ಹೊಸ ಅಪಡೇಟ್ ಗಳನ್ನು ನೀಡುತ್ತಾ ಬಂದಿದ್ದಾರೆ. ಇಂದು ಪೋಸ್ಟರ್ ಹಂಚಿಕೊಂಡಿರುವ ಪ್ರಶಾಂತ್ ನೀಲ್, ಇರೋದು ಕ್ರೂರ ಮಾರ್ಗ ಒಂದೇ ಎಂದು ಹೇಳಿದ್ದಾರೆ.

https://twitter.com/prashanth_neel/status/1287606283223183360

ಸಿನಿಮಾದ ಪ್ರತಿಯೊಂದು ಮಾಹಿತಿಯನ್ನು ಅತ್ಯಂತ ಅಚ್ಚುಕಟ್ಟಾಗಿ ಹೊಸತನದೊಂದಿಗೆ ಪ್ರಶಾಂತ್ ನೀಲ್ ನೀಡುತ್ತಾ ಬಂದಿದ್ದಾರೆ. ಅಂಧಕಾರದಲ್ಲಿ ಧಗ ಧಗಿಸುತ್ತಿರೋ ಜ್ವಾಲೆ, ಮುಂದೊಂದು ಯುದ್ಧಕ್ಕೆ ಬಾ ಅನ್ನುವಂತೆ ಬಿಂಬಿಸುವ ಕತ್ತಿಯುಳ್ಳ ಕೆಜಿಎಫ್ ಹೊಸ ಲುಕ್ ಅನಾವರಣಗೊಂಡಿದೆ. ಪೋಸ್ಟರ್ ಮೇಲೆ ಕ್ರೂರ ಮಾರ್ಗದ ಅನಾವರಣ ಜುಲೈ 29 ಬೆಳಗ್ಗೆ 10 ಗಂಟೆಗೆ ಎಂಬ ಸಾಲುಗಳನ್ನು ಬರೆಯಲಾಗಿದೆ.

ಈ ಪೋಸ್ಟರ್ ಮೂಲಕ ಬುಧವಾರ ಕೆಜಿಎಫ್ ಅಭಿಮಾನಿಗಳಿಗೆ ಮತ್ತೊಂದು ಗಿಫ್ಟ್ ಸಿಗಲಿದೆ ಎಂಬುದನ್ನು ಚಿತ್ರತಂಡ ಹೇಳಿಕೊಂಡಿದೆ.

ಕೆಜಿಎಫ್ ಮೊದಲ ಭಾಗದಲ್ಲಿ ಗರುಡನ ರುಂಡವನ್ನ ಚೆಂಡಾಡುವ ರಾಕಿ ಬಾಯ್ ಮುಂದಿನ ಜೀವನ ಹೇಗಿರುತ್ತೆ? ಬಂಗಾರದ ಗಣಿಯಲ್ಲಿ ರಾಕಿ ಹೇಗೆ ತನ್ನ ಸಾಮ್ರಾಜ್ಯ ಕಟ್ಟಿಕೊಳ್ಳುತ್ತಾನೆ? ರಾಕಿ ಸಾಗುವ ದಾರಿ ಹೇಗಿರುತ್ತೆ ಎಂಬಿತ್ಯಾದಿ ಪ್ರಶ್ನೆಗಳ ಉತ್ತರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

Comments

Leave a Reply

Your email address will not be published. Required fields are marked *