ಕೆಎಸ್‌ಆರ್‌ಟಿಸಿಯ ಮಾಸಿಕ ಬಸ್ ಪಾಸ್ ಅವಧಿ ವಿಸ್ತರಣೆ

ಬೆಂಗಳೂರು: ಕೆಎಸ್‌ಆರ್‌ಟಿಸಿ 2021ರ ಏಪ್ರಿಲ್ ತಿಂಗಳ ಮಾಸಿಕ ಪಾಸ್ ಅವಧಿ ವಿಸ್ತರಿಸಿ ಆದೇಶ ನೀಡಿದೆ.

ಏಪ್ರಿಲ್ ತಿಂಗಳಲ್ಲಿ 15 ದಿನ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು ಹಾಗೂ ಕೊರೋನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ನಿಂದ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ,ಪ್ರಯಾಣಿಕರು ಬಸ್ ಪಾಸ್ ಬಳಸಲು ಅವಕಾಶ ಇರಲಿಲ್ಲ. ಹೀಗಾಗಿ ಏಪ್ರಿಲ್ ತಿಂಗಳ ಬಸ್ ಪಾಸ್ ಅವಧಿಯನ್ನು ಜುಲೈ 8ರವರೆಗೆ ವಿಸ್ತರಿಸಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಆದೇಶ ಹೊರಡಿಸಿದೆ. ಇದನ್ನೂ ಓದಿ: ಅಪಘಾತ ತಪ್ಪಿಸಲು ಸಾರಿಗೆ ಬಸ್ಸುಗಳಲ್ಲಿ ಎಐ ಟೆಕ್ನಾಲಜಿ ಅಳವಡಿಕೆ – ಡಿಸಿಎಂ ಸವದಿ

ಸಾಮಾನ್ಯ ಮಾಸಿಕ ಪಾಸ್ ಹಾಗೂ ಹಿರಿಯ ನಾಗರಿಕರ ಮಾಸಿಕ ಪಾಸ್‍ಗಳ ಮಾನ್ಯತಾ ಅವಧಿಯನ್ನು (ಸಂಸ್ಥೆಯ ಗುರುತಿನ ಚೀಟಿಯೊಂದಿಗೆ) ಜುಲೈ 8ರವರೆಗೆ ವಿಸ್ತರಿಸಿದ್ದು, ಹೆಚ್ಚುವರಿಯಾಗಿ 18 ದಿನ ಓಡಾಡಬಹುದಾಗಿದೆ. ಈ ಸಂಬಂಧ ಪಾಸುದಾರರು ಪಾಸ್ ವಿತರಣೆ ಕೌಂಟರ್ ನಲ್ಲಿ ಸಹಿ ಹಾಗೂ ಮೊಹರು ಹಾಕಿಸಿಕೊಳ್ಳಬೇಕು.

Comments

Leave a Reply

Your email address will not be published. Required fields are marked *