ಕೆಎಎಸ್ ಅಧಿಕಾರಿ ಸುಧಾ ಪುರಾಣ – ಕಮೋಡ್‍ನಲ್ಲಿ ಕೀ ಬಿಸಾಡಿರೋ ಶಂಕೆ

ಬೆಂಗಳೂರು: ಕೆಎಎಸ್ ಅಧಿಕಾರಿ ಡಾ. ಸುಧಾ ಮನೆ ಮೇಲೆ ದಾಳಿ ಮಾಡಿರುವ ಎಸಿಬಿ ಅಧಿಕಾರಿಗಳು ಮನೆಯಲ್ಲಿ ಲಾಕರ್ ತೆರೆಯಲು ಹರಸಾಹಸ ಪಡುತ್ತಿದ್ದು, ಲಾಕರ್ ಕೀ ಗಳನ್ನು ಕಮೋಡ್ ನಲ್ಲಿ ಬಿಸಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಎಸಿಬಿ ಅಧಿಕಾರಿಗಳು ಬಂದ 20 ನಿಮಿಷ ಬಾಗಿಲು ತೆರಯದೇ ಇದ್ದ ಸುಧಾ, ರಂಪಾಟ ಮಾಡಿದ್ದರು. ಸ್ಥಳೀಯ ಪೊಲೀಸರನ್ನು ಕರೆಸುತ್ತೇವೆ, ಈ ವೇಳೆ ನಿಮಗೆ ಅವಮಾನ ಆಗುತ್ತೆ. ಆಗ ಇನ್ನೂ ದೊಡ್ಡ ಕಷ್ಟ ಎದುರಾಗುತ್ತೆ ಎಂದು ಅಧಿಕಾರಿಗಳು ಹೇಳಿದ ಬಳಿಕ ಸುಧಾ ಬಾಗಿಲು ತೆರೆದರು. ಇದಕ್ಕೂ ಮೊದಲು ಕೆಲವೊಂದು ಕೀ ಗಳನ್ನು ಕಮೋಡ್ ಅಲ್ಲಿ ಬಿಸಾಕಿರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಇಂದು ಬೆಳ್ಳಂಬೆಳಗ್ಗೆ ಕೊಡಿಗೇಹಳ್ಳಿಯ ಡಾ, ಸುಧಾ ನಿವಾಸಕ್ಕೆ ದಾಳಿ ಮಾಡಿ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಶಾಕ್ ಆಗಿದೆ. ಸುಧಾ ಮನೆಯಲ್ಲಿ ಕೆ.ಜಿಗಟ್ಟಲೆ ಚಿನ್ನ ಹಾಗೂ ನಗದು ನೋಡಿ ಅಧಿಕಾರಿಗಳೇ ದಂಗಾಗಿದ್ದಾರೆ. ಪತ್ತೆಯಾಗಿರುವ ಚಿನ್ನಾಭರಣ ಎಷ್ಟು ಪ್ರಮಾಣದಲ್ಲಿದೆ ಎಂದು ಅಂದಾಜಿಸುವ ಸಲುವಾಗಿ ಅಕ್ಕಸಾಲಿಗರು ಸುಧಾ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇತ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುವುದನ್ನು ಮುಂದುವರಿಸಿದ್ದಾರೆ.

ಸುಧಾ ಕ್ರಿಯೇಷನ್ ಹೆಸರಲ್ಲಿ ಸುಧಾ ಪತಿ ಸಿನಿಮಾ ಮತ್ತು ಸಿರಿಯಲ್ ನಿರ್ಮಾಣ ಮಾಡುತ್ತಿದ್ದರು. ಪತ್ನಿಯ ಜೊತೆ ಪತಿಯದ್ದು ಹೈ ಪ್ರೊಪೈಲ್ ಜೀವನ ನಡೆಸುತ್ತಿದ್ದು, ಇತ್ತೀಚೆಗೆ ಪತಿ ಮಗನಿಗಾಗಿ ಸಿನಿಮಾ ಪ್ರೊಡ್ಯೂಸ್ ಮಾಡಿದ್ದರು. ಅಲ್ಲದೆ ಮಗ ಅರೂನ್ ನನ್ನು ಇಂಡಸ್ಟ್ರಿಗೆ ಪರಿಚಯಸಿದ್ದರು. ಬಾರ್ಕೂರಿನಲ್ಲಿ ಸುಧಾ ಪತಿಗೆ ಸೇರಿದ ಹಾರ್ಡ್ ವೇರ್ ಶಾಪ್ ಕೂಡ ಇದೆ. ಸುಧಾ ಅವರು 2017-2018 ರಲ್ಲಿ ಬಿಡಿಎ ಭೂಸ್ವಾದೀನ ಅಧಿಕಾರಿಯಾಗಿ ನೇಮಕವಾಗಿದ್ದರು. ಕಳೆದ ಎರಡು ವರ್ಷಗಳಲ್ಲಿ ದಾಖಲೆ ಮಟ್ಟದಲ್ಲಿ ಆಸ್ತಿ ಹೆಚ್ಚಾಗಿದ್ದು, ವಿಲ್ಲಾ ಕೂಡ ಖರೀದಿ ಮಾಡಿದ್ದಾರೆ. ಅಲ್ಲದೆ ಐಷಾರಾಮಿ ಕಾರುಗಳನ್ನ ಖರೀದಿ ಮಾಡಿದ್ದಾರೆ.

ಈ ಹಿಂದೆ ಡೈಮಂಡ್ ನಕ್ಲೆಸ್ಸ್ ಹಾಕಿಕೊಂಡಿದ್ದಕ್ಕೆ ದೊಡ್ದ ರಂಪಾಟ ನಡೆದಿತ್ತು. ಬಿಡಿಎ ಭೂ ಸ್ವಾಧೀನ ಅಧಿಕಾರಿಯಾಗಿದ್ದಾಗ ಮಾರಾಮಾರಿ ಮಾಡಿಕೊಂಡಿದ್ದರು. ನೀವು ಭ್ರಷ್ಟರಾಗಿ ಡೈಮಂಡ್ಸ್ ಹಾಕ್ಕೊಂಡು ಬಂದ್ರೆ ನಮ್ಮನ್ನೂ ಭ್ರಷ್ಟರು ಅಂತಾರೆ ಎಂದು ವೆಂಕಟೇಶ್ ಎಂಬ ಅಧಿಕಾರಿ ಆಕ್ಷೇಪ ವ್ಯಕ್ತಪಡಿಸಿದ್ದರು. ಜನರ ಎದುರು ನಾವು ನಿಮ್ಮಂತೆ ಆಗುತ್ತೆ ಎಂದು ವೆಂಕಟೇಶ್ ಗಲಾಟೆ ಮಾಡಿದ್ದರು. ಈ ಸಂಬಂಧ ಇಬ್ಬರ ನಡುವೆಯೂ ಬಿಡಿಎ ಅಲ್ಲಿ ಮಾರಾಮಾರಿಯಾಗಿತ್ತು.

ಡಾ.ಸುಧಾ ಸರ್ಕಾರಿ ನೌಕರರಾಗಿ ಸೇವೆಗೆ ಸೇರಿದ್ದು 06-06-2007ರಂದು. ಅಂದಿನಿಂದ ಆರಂಭವಾಗಿ ಖಾಸಗಿ ದೂರು ದಾಖಲಿಸುವ ಸಮಯದವರೆಗೆ ಅವರ ಗಳಿಕೆ ಒಟ್ಟು ಸುಮಾರು 1,55,37,600 ರೂ. ಆಗುತ್ತದೆ. ಆದರೆ ಇವರ ಹೆಸರಿನಲ್ಲಿರುವ ಆಸ್ತಿಗಳ ದಾಖಲಾತಿಗಳಲ್ಲಿ ತೋರಿಸಿಕೊಂಡಿರುವಂತೆ ಅವರ ಒಟ್ಟು ಆಸ್ತಿ ಮೌಲ್ಯವೇ 1,83,24,456 ರೂ. ಸದರಿ ಆಸ್ತಿಗಳ ಖರೀದಿ ಸಂದರ್ಭದಲ್ಲಿ ಖರೀದಿ ಪತ್ರದಲ್ಲಿ ತೋರಿಸದೇ ಇರುವ ಮೌಲ್ಯವು ಅಂದರೆ ಕಪ್ಪು ಹಣವು 9,31,10,544 ರೂ. ಆಗಿರುತ್ತದೆ. ಜೊತೆಗೆ ಡಾ.ಸುಧಾರವರು ಅಕ್ರಮ ಬಡ್ಡಿದಂಧೆಯಲ್ಲಿ ತೊಡಗಿಸಿರುವಂತಹ ಹಣದ ಒಟ್ಟು ಮೌಲ್ಯ 1,44,50,000 ರೂ. ಎಂಬುದನ್ನು ದಾಖಲೆ ಸಮೇತ ಲೋಕಾಯುಕ್ತ ನ್ಯಾಯಾಲಯಕ್ಕೆ ಅಬ್ರಹಾಂ ದೂರು ಸಲ್ಲಿಸಿದ್ದರು. ಸುಧಾ ಪತಿ ಕೂಡ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಅವರು ದಲ್ಲಾಳಿಯಂತೆ ವರ್ತಿಸುತ್ತಿದ್ದಾರೆ ಅಂತ ಈ ಹಿಂದೆ ದೂರು ನೀಡಲಾಗಿತ್ತು.

Comments

Leave a Reply

Your email address will not be published. Required fields are marked *