ಕುಡಿಯಲು ನೀರು ಸಿಗದೆ ಬಾಲಕಿ ಸಾವು

ಜೈಪುರ್: ಜಗತ್ತು ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೆ ಕೆಲವೊಮ್ಮೆ ಮನುಷ್ಯನಿಗೆ ಬೇಕಾದ ಮೂಲಭೂತ ಅಗತ್ಯತೆಗಳೇ ಸಿಗದೇ ಪರದಾಡುವಂತಾಗುತ್ತದೆ. ಹೀಗೆ ನೀರು ಸಿಗದೇ ಬಾಲಕಿ ಸಾವನ್ನಪಿರುವ ಮನಕಲಕುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಅಂಜಲಿ(6) ಮೃತ ಬಾಲಕಿ. ಈಕೆ ಅಜ್ಜಿಯೊಂದಿದೆ ರಾಜಸ್ಥಾನದ ಜೌಲೌರ್ ಜಿಲ್ಲೆಯ ಸುಡುಬಿಸಿಲಿನಲ್ಲಿ ಹತ್ತಾರು ಕಿಲೋಮೀಟರ್ ದೂರ ಕಾಲ್ನಡಿಗೆಯಲ್ಲಿ ಬಂದಿದ್ದಳು. ಕುಡಿಯಲು ನೀರು ಸಿಗದೆ ಮೃತಪಟ್ಟಿರುವ ಘಟನೆ ರಾಣಿವಾಡಾದ ರೋಡಾ ಎಂಬ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ವಿಶ್ವ ಪರಿಸರ ದಿನದಂದು ಗಾಂಜಾ ಗಿಡ ನೆಟ್ಟ ಪುಂಡರು


60 ವರ್ಷ ಸುಖಿ ದೇವಿ, ತಮ್ಮ ಮೊಮ್ಮಗಳು ಅಂಜಲಿಯೊಂದಿಗೆ ಸಿರೋಹಿ ಬಳಿಯ ರಾಯ್‍ಪುರ್‍ದಿಂದ ಮಧ್ಯಾಹ್ನ ರಾಣಿವಾಡ ಪ್ರದೇಶದ ಡುಂಗ್ರಿಯಲ್ಲಿರುವ ತನ್ನ ಮನೆಗೆ ಬರುತ್ತಿದ್ದರು ಎನ್ನಾಗಿದೆ. ಕೊರೊನಾ ಹಿನ್ನೆಲೆ ವಾಹನಗಳು ಲಭ್ಯವಿಲ್ಲದ ಕಾರಣ ಬೇರೆ ದಾರಿಯಿಲ್ಲದೆ ಕಾಲ್ನಡಿಗೆಯಲ್ಲೇ ಬಾಲಕಿ ಹಾಗೂ ಅಜ್ಜಿ ಸುಮಾರು 20 ರಿಂದ 25 ಕಿಲೋಮೀಟರ್ ದೂರ ನಡೆದುಕೊಂಡು ಬಂದಿದ್ದಾರೆ. ಇದನ್ನೂ ಓದಿ: ಬೆಳಗ್ಗಿನ ಟಿಫಿನ್‌ಗೆ ಮಾಡಿ ಬಿಸಿ ಬೇಳೆ ಬಾತ್

ರಾಣಿವಾಡ ತಲುಪಿ ಮರಳಿ ದಿಬ್ಬಗಳ ಬಳಿ ಸಾಗುವ ವೇಳೆಗೆ ಇಬ್ಬರೂ ನಿತ್ರಾಣಗೊಂಡಿದ್ದರು. ಈ ವೇಳೆ 45 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದ ಕಾರಣ ಸುಸ್ತಾಗಿ ಕುಡಿಯಲು ನೀರು ಬೇಕೆಂದು ಹಪಹಪಿಸುತ್ತಿದ್ದರು. ಆದರೆ ಕೊರೊನಾ ಸೋಂಕು ಇರುವ ಕಾರಣ ಆ ಪ್ರದೇಶದಲ್ಲಿ ಜನರ ಓಡಾಟ ವಿರಳವಾಗಿತ್ತು., ಯಾರೂ ಈ ಕಡೆ ಹಾದುಹೋಗಿಲ್ಲ ಎನ್ನಲಾಗಿದೆ. ಕೊನೆಗೆ ವೃದ್ಧೆ ಸುಸ್ತಾಗಿ ಮೂರ್ಛೆ ತಪ್ಪಿದ್ದಾರೆ. ಬಾಲಕಿ ನಿತ್ರಾಣಗೊಂಡು ಕೊನೆಯುಸಿರೆಳೆದಿದ್ದಾಳೆ. ನಂತರ ಅಜ್ಜಿಯ ಸ್ಥಿತಿ ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ವೃದ್ಧೆಗೆ ನೀರು ಕುಡಿಸಿ, ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಬಾಲಕಿಯ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆ ನಡೆದಿದ್ದಾರೆ. ಕುಡಿಯಲು ನೀರು ಸಿಗದಿರುವುದೇ ಬಾಲಕಿಯ ಸಾವಿಗೆ ಕಾರಣ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹೇಳಲಾಗಿದೆ.

Comments

Leave a Reply

Your email address will not be published. Required fields are marked *