ಕುಡಿದ ಮತ್ತಿನಲ್ಲಿ ಟಿವಿ ಟವರ್ ಏರಿದ ಯುವಕ

ನವದೆಹಲಿ: ಕುಡಿದ ಅಮಲಿನಲ್ಲಿ 20 ವರ್ಷದ ಯುವಕನೋರ್ವ ಟಿವಿ ಟವರ್ ಏರಿರುವ ಘಟನೆ ದೆಹಲಿಯ ಪುಷ್ಪ್ ವಿಹಾರ್ ಸೆಕ್ಟರ್-3ರಲ್ಲಿ ನಡೆದಿದೆ.

ಬೆಳಗ್ಗೆ 11.30ಕ್ಕೆ ಯುವಕ ಟಿವಿ ಟವರ್ ಏರಿರುವ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕನನ್ನು ಟಿವಿ ಟವರ್‌ನಿಂದ ಕೆಳಗೆ ಇಳಿಯುವಂತೆ ಹೇಳಿದ್ದಾರೆ. ಆದರೆ ಈ ವೇಳೆ ಯುವಕ ಕೆಳಗೆ ಇಳಿಯಲು ನಿರಾಕರಿಸಿದ್ದಾನೆ. ಹೀಗಾಗಿ ಸ್ಥಳಕ್ಕೆ ಅಂಬುಲೆನ್ಸ್ ಹಾಗೂ ಅಗ್ನಿಶಾಮಕ ದಳವನ್ನು ಕೂಡ ಕರೆಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.

ನಂತರ ಸ್ಥಳಕ್ಕೆ ಆಗಮಿಸಿದ ಯುವಕನ ಪೋಷಕರು, ಆತನನ್ನು ಮಹೇಶ್ ಯಾದವ್ ಎಂದು ಗುರುತಿಸಿದ್ದು, ಇವರು ಸೈನಿಕ್ ಫಾಮ್ರ್ಸ್‍ನ ನಿವಾಸಿಯಾಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಯುವಕನ ತಂದೆ ಪ್ರತಿ ದಿನ ಮಹೇಶ್ ಯಾದವ್ ಕುಡಿಯುತ್ತಾನೆ. ಅಲ್ಲದೇ ನಿನ್ನೆ ಸಂಜೆ 5 ಗಂಟೆಗೆ ಮನೆಯಿಂದ ಹೋದವನು ಮತ್ತೆ ಹಿಂದಿರುಗಿಲ್ಲ ಎಂದು ಆರೋಪಿಸಿದ್ದಾರೆ.

ಒಂದು ಗಂಟೆಯ ಬಳಿಕ ಮಹೇಶ್ ಯಾದವ್ ತಾನಾಗಿಯೇ ಟಿವಿ ಟವರ್‌ನಿಂದ ಕೆಳಗೆ ಇಳಿದು ಬಂದಿದ್ದಾರೆ. ಇದೀಗ ಆತನನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಇದನ್ನೂ ಓದಿ:  ತಂಗಿಯ ಮೇಲೆ ಕಣ್ಣು ಹಾಕಿದ ಯುವಕನನ್ನು ಕೊಲೆ ಮಾಡಿದ ಅಣ್ಣ

Comments

Leave a Reply

Your email address will not be published. Required fields are marked *