ಕುಡಿದ ಅಮಲಿನಲ್ಲಿ ತೆರೆದ ಚರಂಡಿಯಲ್ಲಿ ಮಿಂದೆದ್ದ ಯುವಕ!

ಬಳ್ಳಾರಿ: ಹೋಳಿ ಹಬ್ಬದ ನೆಪದಲ್ಲಿ ಯುವಕನೊಬ್ಬ ಕುಡಿದ ಅಮಲಿನಲ್ಲಿ ತೆರೆದ ಚರಂಡಿಯಲ್ಲಿ ಮಿಂದೆದ್ದ ವಿಚಿತ್ರ ಘಟನೆಯೊಂದು ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ನಡೆದಿದೆ.

ಪ್ರತಿವರ್ಷ ಗಣಿನಾಡು ಬಳ್ಳಾರಿಯಲ್ಲಿ ಹೋಳಿ ಹಬ್ಬವನ್ನ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ, ಮಹಾಮಾರಿ ಈ ಕೊರೊನಾ ಹಿನ್ನಲೆಯಲ್ಲಿ ಅದ್ದೂರಿ ಹೋಳಿ ಹಬ್ಬದ ಆಚರಣೆಗೆ ಈ ಬಾರಿ ಬ್ರೇಕ್ ಹಾಕಲಾಗಿತ್ತು. ಆದರೆ ಗ್ರಾಮೀಣ ಭಾಗದಲ್ಲಿ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ.

Pಈ ವೇಳೆ ಕುಡಿದ ಅಮಲಿನಲ್ಲಿ ಯುವಕನೊಬ್ಬ ಬಣ್ಣ ಎರಚುವುದರ ಬದಲಾಗಿ ಚರಂಡಿಯಲ್ಲಿ ಬಿದ್ದು, ತ್ಯಾಜ್ಯವನ್ನು ಇನ್ನುಳಿದ ಯುವಕರಿಗೆ ಎಸೆದಿದ್ದಾನೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಜೊತೆಗೆ ಚರಂಡಿಯಲ್ಲಿ ಬಿದ್ದು ಹೋಳಿ ಹಬ್ಬವನ್ನು ವಿಚಿತ್ರವಾಗಿ ಆಚರಿಸಿರುವುದಕ್ಕೆ ವ್ಯಾಪಾಕ ಟೀಕೆಯೂ ವ್ಯಕ್ತವಾಗುತ್ತಿದೆ.

ಒಟ್ಟಾರೆ ಯುವಕನೋರ್ವ ಕುಡಿದ ಅಮಲಿನಲ್ಲಿ ತನಗೆ ಅರಿವಿಲ್ಲದಂತೆ ಚರಂಡಿ ತ್ಯಾಜ್ಯದಲ್ಲಿ ಮುಳುಗಿದರೆ, ಇತ್ತ ಉಳಿದ ಯುವಕರಿಗೂ ಎರಚಿದ್ದಾನೆ.

Comments

Leave a Reply

Your email address will not be published. Required fields are marked *