ಕುಟುಂಬಸ್ಥರ ಊಟದಲ್ಲಿ ನಶೆ ಮಾತ್ರೆ ಮಿಕ್ಸ್-ರಾತ್ರಿ 22ರ ಯುವಕನಿಂದ 13ರ ಬಾಲಕಿಯ ಮೇಲೆ ರೇಪ್

-ಕುಟುಂಬಸ್ಥರ ಊಟದಲ್ಲಿ ಬಾಲಕಿಯಿಂದಲೇ ಮಾತ್ರೆ ಮಿಕ್ಸ್
-ಮನೆಗೆ ಹೊರಗೆ ಕಾಮುಕ ಗೆಳೆಯನಿಂದ ಕಾವಲು

ಚಂಡೀಗಢ: 13 ವರ್ಷದ ಬಾಲಕಿಯ ಮೇಲೆ 22 ವರ್ಷದ ಅತ್ಯಾಚಾರಗೈದಿರುವ ಘಟನೆ ಹರಿಯಾಣದ ಲಾಖನಮಾಜರಾ ಕ್ಷೇತ್ರದಲ್ಲಿ ನಡೆದಿದೆ. ಯುವಕ ಬಾಲಕಿಯಿಂದಲೇ ಆಕೆಯ ಕುಟುಂಬಸ್ಥರಿಗೆ ಮತ್ತು ಬರುವ ಔಷಧಿ ನೀಡುವಂತೆ ಮಾಡಿದ್ದಾನೆ.

ಕುಟುಂಬಸ್ಥರು ಮತ್ತು ಮಿಶ್ರಿತ ಆಹಾರ ಸೇವಿಸಿ ಗಾಢವಾದ ನಿದ್ದೆಯಲ್ಲಿದ್ದಾಗ ಮನೆಗೆ ನುಗ್ಗಿದ ಯುವಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇತ್ತ ಮನೆಯ ಹೊರಗೆ ಯುವಕನ ಮತ್ತೋರ್ವ ಗೆಳೆಯ ಕಾವಲು ಕಾದಿದ್ದಾನೆ. ಘಟನೆಯ ಬಳಿಕ 22 ವರ್ಷದ ಯುವಕರಿಬ್ಬರು ಗ್ರಾಮದಿಂದ ಕಾಲ್ಕಿತ್ತಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದೇಗೆ?: ನಶೆ ಮಿಶ್ರಿತ ಆಹಾರ ಸೇವಿಸಿದ್ದ ಬಾಲಕಿಯ ಕುಟುಂಬಸ್ಥರಿಗೆ ಬೆಳಗ್ಗೆ ಎಚ್ಚರವಾಗಿದೆ. ಕುಟುಂದ ಎಲ್ಲರನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ ಹೊರಗಿನಿಂದ ಬಾಗಿಲು ಹಾಕಲಾಗಿತ್ತು. ಕೊನೆಗೆ ಕುಟುಂಬಸ್ಥರು ಬಾಗಿಲು ಒಡೆದು ಹೊರಗೆ ಬಂದಿದ್ದಾರೆ. ಎಲ್ಲರಿಗೂ ತಲೆ ಸುತ್ತು ಬಂದ ಹಿನ್ನೆಲೆ ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ವೈದ್ಯರು ನಶೆ ಪದಾರ್ಥ ಸೇವನನೆಯಿಂದಾಗಿ ಗಾಢವಾದ ನಿದ್ರೆ ಜೊತೆ ತಲೆ ಸುತ್ತು ಬಂದಿರುವ ವಿಷಯವನ್ನು ತಿಳಿಸಿದ್ದಾರೆ. ಇನ್ನು ಮನೆಯಲ್ಲಿ ಆರೋಗ್ಯವಾಗಿದ್ದ ಬಾಲಕಿಯ ಮೇಲೆ ಅನುಮಾನಗೊಂಡು ಪೋಷಕರು ಪ್ರಶ್ನಿಸಿದ್ದಾರೆ. ಭಯಗೊಂಡ ಬಾಲಕಿ ನಡೆದ ಘಟನೆಯನ್ನು ವಿವರಿಸಿದ್ದಾಳೆ.

ಯುವಕರ ಮಾತು ನಂಬಿದ ಬಾಲಕಿ: ಶನಿವಾರ ಬೆಳಗ್ಗೆ ಗ್ರಾಮದ ಸಂದೀಪ್ ಮತ್ತು ಪಕ್ಕದೂರಿನ ಮತ್ತೋರ್ವ ಬಾಲಕಿಯನ್ನ ಭೇಟಿಯಾಗಿದ್ದಾರೆ. ಪರಿಚಯಸ್ಥರಾಗಿದ್ದರಿಂದ ಬಾಲಕಿ ಸಹ ಅವರ ಜೊತೆ ಮಾತನಾಡಿದ್ದಾನೆ. ಬಾಲಕಿಯನ್ನ ಪುಸಲಾಯಿಸಿದ ಇಬ್ಬರು ಆಕೆಗೆ ಐದು ನಶೆಯ ಮಾತ್ರೆಗಳನ್ನು ನೀಡಿ ಆಹಾರದಲ್ಲಿ ಬೆರೆಸುವಂತೆ ಹೇಳಿದ್ದಾರೆ. ಮಾತ್ರೆ ಪಡೆದ ಬಾಲಕಿ ಅದನ್ನ ಆಹಾರದಲ್ಲಿ ಬೆರೆಸಿದ್ದಾಳೆ.

ಸದ್ಯ ಕುಟುಂಬಸ್ಥರು ನೀಡಿದ ದೂರಿನ ಆಧಾರದಲ್ಲಿ ಐಪಿಸಿ ಸೆಕ್ಷನ್ 376, 328, 452, 34 ಮತ್ತು ಪೋಕ್ಸೋ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಆರೋಪಿಗಳಿಬ್ಬರು ನಾಪತ್ತೆಯಾಗಿದ್ದು, ಶೀಘ್ರದಲ್ಲಿಯೇ ಬಂಧಿಸಲಿದ್ದೇವೆ ಎಂದು ಲಾಖನಮಾಜರಾ ಠಾಣೆಯ ಹಿರಿಯ ಪೊಲೀಸ್ ರಾಜೇಂದ್ರ ಬುರಾ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *