ಕುಂದಾಪುರ ಆಕ್ಸಿಜನ್ ಪ್ಲ್ಯಾಂಟ್ ಕಾಮಗಾರಿ ವೀಕ್ಷಿಸಿದ ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ: ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ 500 ಲೀಟರ್ ಸಾಮರ್ಥ್ಯದ ಆಕ್ಸಿಜನ್ ಘಟಕ ಕಾಮಗಾರಿಯನ್ನು ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಪರಿಶೀಲಿಸಿದರು.

ಸಿವಿಲ್ ಕಾಮಗಾರಿ ತಾಂತ್ರಿಕ ಅಡಚಣೆಯಿಂದ ವಿಳಂಬವಾಗಿದೆ. ಈ ಕಾರಣಕ್ಕಾಗಿ ಕಾಮಗಾರಿಯ ಉಸ್ತುವಾರಿಯನ್ನು ಜಿಲ್ಲಾಡಳಿತಕ್ಕೆ ವಹಿಸಲಾಗಿದೆ. ಶೀಘ್ರ ಕಾಮಗಾರಿ ಪೂರ್ಣ ಆಗಬೇಕು ಎಂದು ಪ್ರಾಜೆಕ್ಟ್ ಇಂಜಿನಿಯರ್ ಗಳಿಗೆ ಸಂಸದೆ ಸೂಚನೆ ನೀಡಿದರು.

ಒಟ್ಟು 5 ಲಕ್ಷ ರೂ ವೆಚ್ಚದ ಕಾಮಗಾರಿಗೆ ಸಂಸದರ ನಿಧಿಯಿಂದ ಮೂರು ಲಕ್ಷ ರೂಪಾಯಿಗಳ ಅನುದಾನವನ್ನು ನೀಡಲು ನಿರ್ದೇಶನ ನೀಡಲಾಗಿದೆ. ಉಳಿದ ಎರಡು ಲಕ್ಷ ರೂಪಾಯಿಗಳನ್ನು ಐಎಂಎಯವರು ನೀಡಲಿದ್ದಾರೆ ಎಂದು ಶೋಭಾ ಕರಂದ್ಲಾಜೆ ವಿವರಿಸಿದರು.

ಹದಿನೈದು ದಿನಗಳೊಳಗೆ ಘಟಕ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗಲಿದೆ ಅಗತ್ಯದ ಯಂತ್ರೋಪಕರಣಗಳು ಡಿ.ಆರ್.ಡಿ.ಓ ಸಂಸ್ಥೆ ಒದಗಿಸಲಿದೆ ಎಂದು ಮಧ್ಯಮಗಳಿಗೆ ಮಾಹಿತಿ ಕೊಟ್ಟರು.

https://twitter.com/ShobhaBJP/status/1397164588622172161

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಪುರಸಭೆ ಸದಸ್ಯ ಮೋಹನ್ ದಾಸ್ ಶೆಣೈ ಉಪಸ್ಥಿತರಿದ್ದರು.

https://twitter.com/ShobhaBJP/status/1397230880381353990

Comments

Leave a Reply

Your email address will not be published. Required fields are marked *