ಕಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಎಡವಟ್ಟು- ಬೀದಿಯಲ್ಲಿ ಶವ ಇಟ್ಟ ಸಿಬ್ಬಂದಿ

ಹುಬ್ಬಳ್ಳಿ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಶತಾಯು ಗತಾಯು ಹೋರಾಟ ನಡೆಸಿರುವ ಕಿಮ್ಸ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು, ಕೋವಿಡ್‍ನಿಂದ ಮೃತಪಟ್ಟಿರುವ ವ್ಯಕ್ತಿ ಶವವನ್ನು ಪ್ಯಾಕ್ ಮಾಡಿ ಆಸ್ಪತ್ರೆಯ ಅಂಗಳದ ಬೀದಿಯಲ್ಲೆ ಬಿಟ್ಟು ಅಮಾನವೀಯತೆ ಪ್ರದರ್ಶನ ಮಾಡಿದ್ದಾರೆ.

ಹೌದು ಕೊರೊನಾ ವೈರಸ್ ಎಲ್ಲೆಡೆಯೂ ಆತಂಕದ ವಾತಾವರಣ ಸೃಷ್ಟಿಸಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕಿಮ್ಸ್ ಸಿಬ್ಬಂದಿ ಕೊವೀಡ್‍ನಿಂದ ಮೃತಪಟ್ಟಿರುವ ವ್ಯಕ್ತಿ ಶವವನ್ನು ಕಿಮ್ಸ್ ಮಲ್ಟಿಸ್ಪೆಷಾಲಿಟಿ ಕಟ್ಟಡ ಎದುರು ಪ್ಯಾಕ್ ಮಾಡಿ ಸ್ಟ್ರೆಚರ್ ಮೇಲೆ ಇಟ್ಟಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಹೀಗೆ ಬಿಟ್ಟಿರುವುದರಿಂದ ವೈರಸ್ ಹರಡುತ್ತದೆ ಎಂದು ಸಾರ್ವಜನಿಕರು ಆತಂಕಗೊಂಡಿದ್ದಾರೆ. ಸಾರ್ವಜನಿಕರೊಬ್ಬರು ಫೋಟೋವನ್ನು ಮಾಧ್ಯಮಕ್ಕೆ ನೀಡಿದ್ದಾರೆ. ಕಿಮ್ಸ್ ಶವಗಾರ ವಿಭಾಗದ ಮುಖ್ಯಸ್ಥರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಶವವನ್ನು ಸ್ಥಳಾಂತರ ಮಾಡುವ ಸಂದರ್ಭದಲ್ಲಿ ಸ್ಟ್ರೆಚರ್ ಮೇಲೆ ಇಡಲಾಗಿದೆ. ಇದನ್ನ ನೋಡಿದ ಸ್ಥಳೀಯರು ಫೋಟೋ ಕ್ಲಿಕ್ಕಿಸಿದ್ದಾರೆ. ಕಿಮ್ಸ್ ವೈದ್ಯರು ಬೀದಿಯಲ್ಲಿ ಶವ ಇಟ್ಟಿಲ್ಲವೆಂದು ಪ್ರತಿಕ್ರಿಯೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *