ಕಾಲ್ ಸೆಂಟರ್ ಮೇಲೆ ಪೊಲೀಸ್ ದಾಳಿ- 42 ಮಂದಿ ಅರೆಸ್ಟ್

– ವಿದೇಶಿಗರೇ ಇವರ ಟಾರ್ಗೆಟ್

ನವದೆಹಲಿ: ವಿದೇಶಿಗರನ್ನು ವಂಚಿಸಿ ಮೋಸ ಮಾಡುತ್ತಿದ್ದ ದೆಹಲಿ ಮೂಲದ ಕಾಲ್ ಸೆಂಟರ್ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ 42 ಜನರನ್ನು ಬಂಧಿಸಿರುವ ಘಟನೆ ನಡೆದಿದೆ.

ಸೈಬರ್ ಕ್ರೈಂ ಪ್ರಕಾರ ಈ ಕಾಲ್ ಸೆಂಟರ್ ನಲ್ಲಿರುವವರು ಫಾರಿನ್‍ನಲ್ಲಿರುವ ವಿದೇಶಿಗರನ್ನು ಟಾರ್ಗೆಟ್ ಮಾಡುತ್ತಿದ್ದರು. ಈಗಾಗಲೇ 3,500 ಜನರಿಗೆ ವಂಚಿಸಿದ್ದಾರೆ. ಸರಿಸುಮಾರು 70 ಕೋಟಿ ರೂಪಾಯಿಗಳಷ್ಟು ವಂಚಿಸಿದ್ದಾರೆ.

ಈ ವಿಚಾರ ತಿಳಿದ ಪೊಲೀಸ್ ತಂಡ ಸ್ಥಳಕ್ಕೆ ತಲುಪಿದಾಗ, ನಕಲಿ ಕಾಲ್ ಸೆಂಟರ್ ಮಾಲೀಕ ಮತ್ತು 42 ಜನರು ಕಾಲ್ ಸೆಂಟರ್‍ನಲ್ಲಿದ್ದರು. ಅದರಲ್ಲಿ 26 ಪುರುಷರು, 16 ಮಹಿಳೆಯರನ್ನು ಬಂಧಿಸಲಾಗಿದೆ. ಜೊತೆಗೆ 9 ಎಲೆಕ್ಟ್ರಾನಿಕ್ ಡಿವೈಸ್ ಹಾಗೂ 4.5 ಲಕ್ಷ ರೂಪಾಯಿಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಅನೀಶ್ ರಾಯ್ ಹೇಳಿದ್ದಾರೆ.

ವಿಚಾರಣೆ ವೇಳೆ, ವಿವಿಧ ಕಾನೂನು ಜಾರಿ ಸಂಸ್ಥೆಗಳು ಮತ್ತು ಸಾಮಾಜಿಕ ಭದ್ರತಾ ಆಡಳಿತ, ಡ್ರಗ್ ಎನ್‍ಫೋರ್ಸ್‍ಮೆಂಟ್ ಅಡ್ಮಿನಿಸ್ಟ್ರೇಷನ್ (ಡಿಇಎ) ಮತ್ತು ಯುಎಸ್ ಮಾರ್ಷಲ್ಸ್ ಸೇವೆಯಂತಹ ಇತರ ಸರ್ಕಾರಿ ಸಂಸ್ಥೆಗಳ ಸಿಬ್ಬಂದಿಯಂತೆ ನಟಿಸಿ ವಿದೇಶಿ ಪ್ರಜೆಗಳನ್ನು ಸಂಪರ್ಕಿಸಿ ಅವರಿಂದ ಹಣದ ರೂಪದಲ್ಲಿ ಬಿಟ್ ಕಾಯಿನ್‍ಗಳನ್ನು ಕೊಡಲು ಒತ್ತಾಯಿಸುತ್ತಿದ್ದರು. ಇಲ್ಲವಾರೆ ಕಾನೂನು ಕ್ರಮ ಕೈ ಗೊಳ್ಳುತ್ತೇವೆ ಎಂದು ಬೆದರಿಕೆ ಒಡ್ಡಿ ಸುಲಭವಾಗಿ ಹಣ ವಸೂಲಿ ಮಾಡುತ್ತಿದ್ದರು ಎಂದು ಆರೋಪಿಗಳು ಬಹಿರಂಗಪಡಿಸಿದ್ದಾರೆ ಎಂದಿದ್ದಾರೆ.

Comments

Leave a Reply

Your email address will not be published. Required fields are marked *