ಕಾರಿನಲ್ಲಿ ಸಂಚಾರ – ಪಾಸಿಟಿವ್ ವ್ಯಕ್ತಿಯ ಕುಟುಂಬವೇ ಆಸ್ಪತ್ರೆಗೆ ಶಿಫ್ಟ್

– ಒಂದೇ ದಿನ 100 ಕ್ಕೂ ಹೆಚ್ಚು ವಾಹನ ಸೀಜ್ ಮಾಡಿದ ಪೊಲೀಸರು

ಚಿಕ್ಕೋಡಿ: ಕೊರೊನಾ ಪಾಸಿಟಿವ್ ಇದ್ದರೂ ಅನಗತ್ಯವಾಗಿ ಕಾರಿನಲ್ಲಿ ಕುಟುಂಬ ಸಮೇತ ಓಡಾಡುತ್ತಿದ್ದ ವ್ಯಕ್ತಿಯನ್ನು ಪೆÇಲೀಸರುವ ತಡೆದು ಆಸ್ಪತ್ರೆಗೆ ರವಾನಿಸಿದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

ಹುಕ್ಕೇರಿ ಪಟ್ಟಣದ ಕೋರ್ಟ್ ವೃತ್ತದಲ್ಲಿ ಹುಕ್ಕೇರಿ ಸಿಪಿಐ ರಮೇಶ್ ಚಾಯಾಗೋಳ ನೇತೃತ್ವದಲ್ಲಿ ತಪಾಸಣೆ ನಡೆಸುವ ಸಂದರ್ಭದಲ್ಲಿ ಪಾಸಿಟಿವ್ ಇರುವ ವ್ಯಕ್ತಿ ಕುಟುಂಬ ಸಮೇತ ಪರ ಊರಿಗೆ ತೆರಳುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಪಾಸಿಟಿವ್ ಇರುವುದನ್ನ ಸ್ವತಃ ರೋಗಿಯೇ ಹೇಳುತ್ತಿದ್ದಂತೆ ಗರಂ ಆದ ಸಿಪಿಐ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡು ತಕ್ಷಣ ಕುಟುಂಬ ಸಮೇತ ಆಸ್ಪತ್ರೆಗೆ ರವಾನಿಸುವಂತೆ ಸೂಚಿಸಿದರು. ಇದನ್ನು ಓದಿ: ಭಾರತದಲ್ಲಿಯೇ ಮೊಟ್ಟಮೊದಲ ಬಾರಿಗೆ ಚಿತ್ರದುರ್ಗದ ವ್ಯಕ್ತಿಯ ಚರ್ಮದಲ್ಲಿ ಬ್ಲಾಕ್ ಫಂಗಸ್ ಪತ್ತೆ

ಕೊರೊನಾ ಲಾಕ್ ಡೌನ್ ಇದ್ದರೂ ಜನರ ಅನಗತ್ಯ ಓಡಾಟ ನಿಲ್ಲುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅನಗತ್ಯ ಓಡಾಡುವರಿಗೆ ಪೊಲೀಸರು ಬಿಸಿ ಮುಟ್ಟಿಸಿ ಒಂದೇ ದಿನ 100ಕ್ಕೂ ಹೆಚ್ಚು ವಾಹನಗಳನ್ನ ಸೀಜ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಕಲಿ ಕೋವಿಡ್ ಡ್ಯೂಟಿ ಪಾಸ್ ಅಳವಡಿಸಿದ ವ್ಯಕ್ತಿಯ ಕಾರ್ ಸೇರಿದಂತೆ ಮಹಾರಾಷ್ಟ್ರದಿಂದ ಕಳ್ಳ ಮಾರ್ಗದ ಮೂಲಕ ಬಂದವರ ಕಾರನ್ನು ಸೀಜ್ ಮಾಡಿ ಸಿಪಿಐ ರಮೇಶ್ ಚಾಯಾಗೋಳ ತರಾಟೆಗೆ ತೆಗೆದುಕೊಂಡರು. ಹುಕ್ಕೇರಿ ಪಿಎಸ್‍ಐ ಸಿದ್ದರಾಮಪ್ಪ ಉನ್ನದ ಸೇರಿದಂತೆ ಪೊಲೀಸ್ ಸಿಬ್ಬಂದಿ ವಾಹನ ತಪಾಸಣೆಯಲ್ಲಿ ಭಾಗಿಯಾಗಿದ್ದರು.

Comments

Leave a Reply

Your email address will not be published. Required fields are marked *