ಕಾನ್‍ಸ್ಟೇಬಲ್ ಆಗಿ ಆಯ್ಕೆಗೊಂಡ 13 ಮಂದಿ ಟ್ರಾನ್ಸ್‌ಜೆಂಡರ್

ರಾಯ್ಪುರ: 13 ಮಂದಿ ಮಂಗಳಮುಖಿಯರನ್ನು ಕಾನ್‍ಸ್ಟೇಬಲ್‍ಗಳಾಗಿ ನೇಮಕ ಮಾಡಿಕೊಳ್ಳುವ ಮೂಲಕವಾಗಿ ತೃತೀಯಲಿಂಗದವರಿಗೆ ಒಂದು ಅವಕಾಶವನ್ನು ಛತ್ತೀಸ್‍ಘಡ್ ಪೊಲೀಸರು ನೀಡಿದ್ದಾರೆ.

ಟ್ರಾನ್ಸ್‌ಜೆಂಡರ್‌ಗಳನ್ನು ಕಾನ್‍ಸ್ಟೇಬಲ್‍ಗಳಾಗಿ ನೇಮಿಸಿಕೊಂಡು ಅವರನ್ನು ಅವರು ಸಾಬೀತು ಪಡಿಸಿಕೊಳ್ಳಲು ಒಂದು ಮುಖ್ಯವಾದ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಸಮಾಜದಲ್ಲಿ ಅವರಿಗೂ ಒಂದು ಸ್ಥಾನ ಮಾನ ದೊರೆಯಲು ಈ ಒಂದು ನಿರ್ಧಾರ ಮುಖ್ಯವಾಗಿದೆ.

ಇದು ನಮಗೆ ಸಿಕ್ಕಿರುವ ದೊಡ್ಡ ಅವಕಾಶವಾಗಿದೆ. ನಾವು ಪೊಲೀಸ್ ಇಲಾಖೆಗೆ ಧನ್ಯವಾದ ಹೇಳಲು ಬಯಸುತ್ತೇವೆ. ಈ ನಿರ್ಧಾರ ಜನರು ನಮ್ಮ ಸಮುದಾಯವನ್ನು ನೋಡುವ ರೀತಿಯಲ್ಲಿ ಬದಲಾವಣೆಯನ್ನು ತರುತ್ತದೆ. ಕಾನ್‍ಸ್ಟೇಬಲ್ ಆಗಿ ನೇಮಕಗೊಂಡ ಟ್ರಾನ್ಸ್‌ಜೆಂಡರ್‌ರಲ್ಲಿ ಒಬ್ಬರಾದ ಸೋನಿಯಾ ಅವರು ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಕರ್ನಾಟಕದಲ್ಲಿ ಇದೇ ರೀತಿಯ ಘಟನೆ ವರದಿಯಾಗಿದೆ. ತೃತೀಯಲಿಂಗ ಮಹಿಳೆಯನ್ನು ಗ್ರಾಮ ಪಂಚಾಯ್ತಿಯ ಮುಖ್ಯಸ್ಥನಾಗಿ ಆಯ್ಕೆ ಮಾಡಿದೆ. ದೇವಿಕಾ ಅವರು ಮೈಸೂರು ಜಿಲ್ಲೆಯ ಜಿಪಿಯ ಅವಿರೋಧ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

Comments

Leave a Reply

Your email address will not be published. Required fields are marked *