ಕಾಂಡೋಮ್ ವಿನ್ಯಾಸಿತ ಬಟ್ಟೆ ಧರಿಸಿದ ಚಿರಂಜೀವಿ ಸೊಸೆ- ಸುಸ್ಥಿರತೆ ಪಾಠ

ಹೈದರಾಬಾದ್: ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ಸ್ಟಾರ್ ಪತ್ನಿಯರಲ್ಲಿ ಉಪಾಸನಾ ಕಮಿನೇನಿ ಕೋನಿಡೇಲಾ ಸಹ ಒಬ್ಬರು. ತೆಲುಗು ಸೂಪರ್ ಸ್ಟಾರ್ ರಾಮ್‍ಚರಣ್ ತೇಜಾ ಅವರ ಅವರ ಪತ್ನಿ ಅವರು ಹಲವು ಉದ್ಯಮಗಳಲ್ಲಿ ತೊಡಗಿಕೊಂಡಿದ್ದು, 30 ವರ್ಷದವರಾದ ಉಪಾಸನಾ ಪ್ರಸಿದ್ಧ ಆಸ್ಪತ್ರೆ ಸಿಎಸ್‍ಆರ್‍ನ ಉಪಾಧ್ಯಕ್ಷೆಯಾಗಿದ್ದಾರೆ. ಅಲ್ಲದೆ ಪ್ರಸಿದ್ಧ ಆರೋಗ್ಯ ಮ್ಯಾಗಜಿನ್‍ನ ಪ್ರಧಾನ ಸಂಪಾದಕಿ ಕೂಡ ಆಗಿದ್ದಾರೆ. ತಮ್ಮದೇಯಾದ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತಾರೆ ಸಹ. ಆದರೂ ಆರೋಗ್ಯ ಸಂಬಂಧಿ ಹಾಗೂ ಸುಸ್ಥಿರತೆ ಕುರಿತು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿರುತ್ತಾರೆ.

ತಮ್ಮ ಅಭಿಮಾನಿಗಳಿಗಾಗಿ ಉಪಾಸನಾ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ವೈಯಕ್ತಿಕ ಹಾಗೂ ತಮ್ಮ ವೃತ್ತಿ ಬದುಕಿನ ಕುರಿತು ಹಲವು ಅಪ್‍ಡೇಟ್‍ಗಳನ್ನು ನೀಡುತ್ತಿರುತ್ತಾರೆ. ಇದೀಗ ಕ್ವಾರಂಟೈನ್ ದಿನಗಳನ್ನು ಈ ದಂಪತಿ ಸಖತ್ ಆಗಿ ಎಂಜಾಯ್ ಮಾಡುತ್ತಿದ್ದು, ವಿವಿಧ ಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಓದುವುದು, ಅಡುಗೆ ಮಾಡುವುದು, ವರ್ಕೌಟ್ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇದೇ ಸಂದರ್ಭದಲ್ಲಿ ಇದೀಗ ಫೋಟೋ ಒಂದನ್ನು ಹಂಚಿಕೊಂಡಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಹೌದು ಸುಸ್ಥಿರತೆಯ ಕುರಿತು ಅರಿವು ಮೂಡಿಸಲು ಉಪಾಸನಾ ಕೋನಿಡೇಲಾ ಅವರು ಡಿಫೆಕ್ಟೆಡ್ ಕಾಂಡೋಮ್‍ನಿಂದ ತಯಾರಿಸಿದ ಬಟ್ಟೆಯನ್ನು ಧರಿಸಿದ ಫೋಟೋವನ್ನು ಟ್ವೀಟ್ ಮಾಡಿದ್ದು, ಈ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಫೋಟೋ ಟ್ವೀಟ್ ಮಾಡಿ ಸಾಲುಗಳನ್ನು ಬರೆದಿರುವ ಅವರು, ಸಸ್ಟೇನೆಬಲ್ ಫ್ಯಾಷನ್ ನಮ್ಮ ಮುಂದಿನ ಭವಿಷ್ಯವಾಗಿದೆ. ಕೊರೊನಾ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ಸ್ಕ್ರ್ಯಾಪ್‍ಗಳನ್ನು ಧರಿಸುವ ಧೈರ್ಯ ನಿಮಗಿದೆಯೇ ಎಂದು ಪ್ರಶ್ನಿಸಿದ್ದಾರೆ.

ಆರ್ಗಾಂಝಾ ಟಾಪ್‍ನ್ನು ಸ್ಥಳೀಯ ವಿನ್ಯಾಸಕಾರರು ತಿರಸ್ಕರಿಸಿದ ಹಾಗೂ ಹಳೆ ಬಟ್ಟೆಗಳಿಂದ ತಯಾರಿಸಲಾಗಿದೆ. ಲ್ಯಾಟೆಕ್ಸ್ ಸ್ಕರ್ಟ್‍ನ್ನು ಡ್ಯಾಮೇಜ್ ಆಗಿದ್ದ ಕಾಂಡೋಮ್‍ಗಳಿಂದ ತಯಾರಿಸಲಾಗಿದೆ. ಈ ಕ್ರಿಯೇಟಿವಿಟಿಯನ್ನು ಕ್ಯಾನ್ಸಲ್ಡ್ ಪ್ಲ್ಯಾನ್ಸ್ ಕ್ಲಬ್ ಹಾಗೂ ಮಲ್ಲಿಕಾ ರೆಡ್ಡಿಯವರಿಂದ ತಯಾರಿಸಲಾಗಿದೆ. ಅಲ್ಲದೆ ಮೇಡ್ ಫ್ರಮ್ ವೇಸ್ಟ್ ಎಂದು ಹ್ಯಾಶ್ ಟ್ಯಾಗ್‍ನೊಂದಿಗೆ ಬರೆದುಕೊಂಡಿದ್ದಾರೆ.

ಉಪಾಸನಾ ಅವರ ಟ್ವೀಟ್‍ಗೆ ಅಭಿಮಾನಿಗಳು ಕಮೆಂಟ್ ಮಾಡಿದ್ದು, ನಿಜವಾದ ಪಾತ್ ಬ್ರೇಕರ್, ಅತ್ಯದ್ಭುತ ಶಕ್ತಿ ನಿಮ್ಮಲ್ಲಿದೆ. ಅನೇಕರ ಜೀವನದಲ್ಲಿ ವಿಚಾರಗಳಿಗೆ ನೀವು ಪ್ರಭಾವ ಬೀರಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿ, ದಿನದಿಂದ ದಿನಕ್ಕೆ ನಿಮ್ಮ ಬಗ್ಗೆ ನಾನು ಇಂಪ್ರೆಸ್ ಆಗುತ್ತಿದ್ದೇನೆ ಎಂದಿದ್ದಾರೆ.

ಅಂದಹಾಗೆ ತೆಲುಗು ಸೂಪರ್ ಸ್ಟಾರ್ ರಾಮ್‍ಚರಣ್ ಹಾಗೂ ಉಪಾಸನಾ ಅವರು ಕಾಲೇಜು ದಿನಗಳಿಂದಲೂ ಸ್ನೇಹಿತರು. ತುಂಬಾ ದಿನಗಳ ಕಾಲ ಸ್ನೇಹಿತರಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ತುಂಬಾ ಕ್ಲೋಸ್ ಫ್ರೆಂಡ್ಸ್ ಆಗಿ ನಂತರ ಡೇಟಿಂಗ್ ತೆರಳಿದ್ದರು. ಇವರ ಸ್ನೇಹವನ್ನು ಅರಿತ ಮನೆಯವರು, ಇವರಿಬ್ಬರ ವಿವಾಹ ಮಾಡಲು ನಿರ್ಧರಿಸಿದರು. ನಂತರ 2012ರಲ್ಲಿ ವಿವಾಹವಾದರು.

Comments

Leave a Reply

Your email address will not be published. Required fields are marked *