ಕಾಂಗ್ರೆಸ್ ಶಾಸಕರ ಮನೆ ಧ್ವಂಸ- ಘಟನೆ ಖಂಡಿಸದೆ ಮೌನ ತಾಳಿದ ಕೈ ನಾಯಕರು

ಬೆಂಗಳೂರು: ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಮನೆ ಧ್ವಂಸಗೊಂಡರೂ ಕೈ ನಾಯಕರು ಮೌನ ವಹಿಸಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಹೌದು. ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ವಿರುದ್ಧ ಒಂದು ಸಮುದಾಯದ ಜನ ದಾಂಧಲೆ ನಡೆಸಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಮೌನವಾಗಿದ್ದು, ಈ ಮೂಲಕ ಧರ್ಮ ಸೂಕ್ಷ್ಮ ವಿಚಾರದಲ್ಲಿ ಮಧ್ಯಪ್ರವೇಶ ಮಾಡದೇ ಸುಮ್ಮನಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಕೆ.ಜಿ.ಹಳ್ಳಿ ಗಲಭೆ ಪ್ರಕರಣ – ಪೊಲೀಸರ ಗೋಲಿಬಾರ್‌ಗೆ ಮೂವರು ಬಲಿ, 110 ಮಂದಿ ಅರೆಸ್ಟ್

ದುರ್ಘಟನೆ ಬಗ್ಗೆ ಇದೂವರೆಗೆ ಕೈ ನಾಯಕರು ಚಕಾರ ಎತ್ತಿಲ್ಲ. ಟ್ವೀಟ್ ಮೂಲಕ ಪ್ರತಿಯೊಂದು ವಿಷಯದ ಬಗ್ಗೆಯೂ ಪ್ರಶ್ನೆ ಮಾಡ್ತಿದ್ದ ಕೈ ನಾಯಕರು ಇದೀಗ ಮೌನವಹಿಸಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ. ದಿನೇಶ್ ಗುಂಡೂರಾವ್ ಒಬ್ಬರು ಟ್ವೀಟ್ ಮಾಡಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದು ಬಿಟ್ಟರೆ ಉಳಿದವರು ಘಟನೆ ಖಂಡಿಸದೇ ಮೌನ ತಾಳಿರುವುದು ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ: ಕೆಜಿ ಹಳ್ಳಿ ಗಲಭೆ ಪ್ರಕರಣ – ಎಸ್‍ಡಿಪಿಐ ಮುಖಂಡ ಅರೆಸ್ಟ್

ನಿನ್ನೆ ರಾತ್ರಿ ಗುಂಪೊಂದು ಶಾಸಕರ ಮನೆಗೆ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದೆ. ಘಟನೆಯಿಂದ ಶಾಸಕರ ಮೂರು ಅಂತಸ್ತಿನ ಮನೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಆದರೆ ಈ ವೇಳೆ ಸಾಸಕರು ಮನೆಯಲ್ಲಿ ಇರಲಿಲ್ಲ. ಗಲಭೆಗೂ ಮುನ್ನ ಶಾಸಕರು ತಮ್ಮ ಪುಲಿಕೇಶಿ ನಗರದ ಮನೆ ಖಾಲಿ ಮಾಡಿದ್ದರು. ಹೀಗಾಗಿ ಶಾಸಕಹಾಗೂ ಕುಟುಂಬ ಭಾರೀ ಅನಾಹುತದಿಂದ ಪಾರಾಗಿದೆ. ಇದನ್ನೂ ಓದಿ: ಕಾವಲ್‌ ಭೈರಸಂದ್ರ ಉದ್ವಿಗ್ನ – ಪಕ್ಕಾ ಪ್ಲಾನ್ ಮಾಡಿ ವಿಕೃತಿ ಮೆರೆದ ಪುಂಡರು

Comments

Leave a Reply

Your email address will not be published. Required fields are marked *