ಕಲುಷಿತ ನೀರು ಸೇವಿಸಿ ಓರ್ವ ಸಾವು, 10 ಮಂದಿ ಅಸ್ವಸ್ಥ

– ಕಲುಷಿತ ನೀರು ಸೇವಿಸಿ ಪ್ರಾಣಕಳೆದುಕೊಂಡ

ಕೋಲ್ಕತ್ತಾ: ಕಲುಸಿತ ನೀರನ್ನು ಕುಡಿದು ಒರ್ವವ್ಯಕ್ತಿ ಸಾವನ್ನಪ್ಪಿದ್ದು, 10 ಜನರು ಅನಾರೋಗ್ಯದಿಂದ ಬಳಲುತ್ತಿರುವ ಘಟನೆ ಭವಾನಿಪುರದ ಕೆಎಂಸಿ ಲೇಬರ್ ಕ್ವಾರ್ಟರ್ಸ್‍ನಲ್ಲಿ ನಡೆದಿದೆ.

ಭುವನೇಶ್ವರ ದಾಸ್(43) ಕೊಳಚೆನೀರಿನಿಂದ ಕಲುಷಿತವಾದ ನೀರನ್ನು ಕುಡಿದು ಪ್ರಾಣಬಿಟ್ಟಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಲುಷಿತ ನೀರು ಹೇಗೆ ಕುಡಿಯುವ ನೀರಿಗೆ ಮಿಶ್ರಣವಾಯಿತು ಎಂಬುದು ತಿಳಿದು ಬರಬೇಕಿದೆ.

ಕೋಲ್ಕತಾ ಮುನ್ಸಿಪಲ್ ಕಾರ್ಪೋರೇಶನ್‍ನ (ಕೆಎಂಸಿ) ಕಾರ್ಮಿಕರ ಕ್ವಾರ್ಟರ್ಸ್‍ನಲ್ಲಿ ವಾಸವಾಗಿರುವ ಜನರು ಕೊಳಚೆನೀರಿನಿಂದ ಕಲುಷಿತಗೊಂಡ ನೀರನ್ನು ಸೇವಿಸಿ ಸಾವನ್ನಪ್ಪಿದ್ದಾರೆ. ಹಲವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಾವು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ಅಗತ್ಯ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿದೆ. ಆ ಪ್ರದೇಶದಲ್ಲಿ ವಾಸವಾಗಿರುವ ಕುಟುಂಬಗಳಿಗೆ ಕುಡಿಯುವ ನೀರು ಪೂರೈಸುತ್ತಿದ್ದೇವೆ. ಈ ಸಂಬಂಧ ಸಂಬಂಧಿಸಿದ ಇಲಾಖೆಗಳಿಂದ ವರದಿ ಕೋರಿದ್ದೇನೆ ಎಂದು ವಾರ್ಡ್ ಕಾರ್ಪೋರೇಟರ್ ರತನ್ ಮಲಾಕರ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *