ಕಲಬುರಗಿಯಲ್ಲಿ ಧಾರಕಾರ ಮಳೆ- ಸುಪ್ರಸಿದ್ಧ ರಾವೂರ ಮಠ ಜಲಾವೃತ

ಕಲಬುರಗಿ: ಜಿಲ್ಲೆಯಲ್ಲಿ ಇಂದು ಸಂಜೆಯಿಂದ ಗುಡುಗು ಸಹಿತ ಧಾರಕಾರ ಮಳೆಯಾಗುತ್ತಿದ್ದು, ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದಲ್ಲಿರುವ ಸುಪ್ರಸಿದ್ದ ಸಿದ್ದಲಿಂಗೇಶ್ವರ ಮಠ ಸಂಪೂರ್ಣ ಜಲಾವೃತವಾಗಿದೆ. ಸುಮಾರು ಮೂರು ಅಡಿಯಷ್ಟು ನೀರು ಮಠದ ಆವರಣದಲ್ಲಿ ತುಂಬಿಕೊಂಡಿದೆ.

ನಗರದಲ್ಲಿ ಸಹ ಬಿಟ್ಟೂ ಬಿಡದೆ ಮಳೆ ಆರ್ಭಟಿಸಿದೆ. ಪರಿಣಾಮ ಬಹುತೇಕ ವಾಹನ ಸವಾರರು ಪರದಾಡುವಂತಾಗಿದೆ. ಭಾರೀ ಮಳೆಯಿಂದಾಗಿ ಕಲಬುರಗಿಯಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು, ಜನ ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಇದನ್ನೂ ಓದಿ: ಇಂದಿನಿಂದ ಜುಲೈ 13 ರವರೆಗೆ ರಾಜ್ಯದ ಹಲವೆಡೆ ಭಾರೀ ಮಳೆ

ಜೂಲೈ 15ರ ವರೆಗೆ ಜಿಲ್ಲೆಯಲ್ಲಿ ಧಾರಕಾರ ಮಳೆಯಾಗಲಿದೆ ಎಂದು ಯಲ್ಲೋ ಅಲಟ್9 ಸಹ ಘೋಷಿಸಲಾಗಿದೆ. ನದಿ ಪಾತ್ರದ ಜನ ಹಾಗೂ ತಗ್ಗು ಪ್ರದೇಶದಲ್ಲಿ ಮನೆ ಹೊಂದಿರುವವರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಲಬುರಗಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *