ಕರ್ನಾಟಕದಲ್ಲೂ ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿಯಾಗಲಿ: ರಘುಪತಿ ಭಟ್

ಉಡುಪಿ: ದೇಶದಲ್ಲಿ ಜನಸಂಖ್ಯೆ ನಿಯಂತ್ರಿಸಲು ಕುಟುಂಬ ನಿಯಂತ್ರಣಾ ಕಾಯ್ದೆ ಜಾರಿಯಾಗಬೇಕು. ಒಂದು ಬೇಕು, ಎರಡು ಸಾಕು ಎಂಬ ಯೋಜನೆ ಜಾರಿಯಾದರೂ ಭಾರತಕ್ಕೆ ಮತ್ತು ವಿಶ್ವಕ್ಕೆ ಬೇಕಾದ ಮಾನವ ಸಂಪತ್ತು ನಮ್ಮಲ್ಲಿ ಸೃಷ್ಟಿಯಾಗಲಿದೆ. ಉತ್ತರ ಪ್ರದೇಶದಂತೆ ಕರ್ನಾಟಕದಲ್ಲೂ ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿಯಾಗಲಿ ಎಂದು ಉಡುಪಿ ಶಾಸಕ ರಘುಪತಿ ಭಟ್ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿಯಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ರಘುಪತಿ ಭಟ್ ಅವರು, ಭಾರತ ಮಾನವ ಸಂಪತ್ತನ್ನು ಒದಗಿಸುವ ಫ್ಯಾಕ್ಟರಿಯಾಗಿದೆ. ಎಷ್ಟು ಬೇಕಾದ್ರೂ ಜನಸಂಖ್ಯೆ ವೃದ್ಧಿ ಮಾಡಬಹುದು ಎಂಬ ಮನಸ್ಥಿತಿ ಇದ್ದರೆ ಕಷ್ಟ. ಉತ್ತರ ಪ್ರದೇಶದಲ್ಲಿ ಉತ್ತಮ ಕಾನೂನನ್ನು ಮಾಡಿದ್ದಾರೆ. ನಮ್ಮ ರಾಜ್ಯದಲ್ಲೂ ಈ ಕಾನೂನನ್ನು ಜಾರಿಗೆ ತರುವ ಅವಶ್ಯಕತೆ ಇದೆ. ಕಾನೂನು ರೂಪಿಸಲು ರಾಜ್ಯ ಸರ್ಕಾರ ಮುಂದೆ ಬರಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಚೀನಾ ಅಲ್ಲ, ಭಾರತವೇ ಈಗ ವಿಶ್ವದ ಅತೀ ಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರ ಅಂತಿದ್ದಾರೆ ಈ ಸಂಶೋಧಕ

ಜನಸಂಖ್ಯೆ ಅಸಮತೋಲನವಾದರೆ ದೇಶದ ಆರ್ಥಿಕವಾಗಿ ಹೊಡೆತ ಬೀಳುತ್ತದೆ. ಆಗಸ್ಟ್ ಅಧಿವೇಶನದಲ್ಲಿ ಈ ಬಗ್ಗೆ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ಜನಸಂಖ್ಯೆ ನಮ್ಮ ದೇಶದ ಶಕ್ತಿ, ಆದರೆ ಅದು ವಿಪರೀತ ಏರಿಕೆಯಾದರೆ ದೇಶಕ್ಕೆ ಸಮಸ್ಯೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *