ಕರಾಟೆಯಲ್ಲಿ 56 ಪದಕ ಗೆದ್ದ ರಿಷಬ್ ಶೆಟ್ಟಿ – ಏಷ್ಯನ್ ಬುಕ್ ಆಫ್ ರೆಕಾರ್ಡ್

ಉಡುಪಿ: ಜಿಲ್ಲೆಯ ದೊಂಡೇರಂಗಡಿ ಮೂಲದ ರಿಷಬ್ ಶೆಟ್ಟಿ ಮಾರ್ಷಲ್ ಆರ್ಟ್ಸ್ ನಲ್ಲಿ ವಿಶಿಷ್ಟ ಸಾಧನೆ ಮಾಡಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಮುಂಬೈನಲ್ಲಿ ನೆಲೆಸಿರುವ ರಿಷಬ್ ತನ್ನ ಹದಿಮೂರನೇ ವಯಸ್ಸಿಗೆ ದೇಶ ಮೆಚ್ಚುವ ಕೆಲಸ ಮಾಡಿದ್ದಾನೆ. ರಿಷಬ್ ಕರಾಟೆಯಲ್ಲಿ 56 ಪದಕಗಳನ್ನು ಗೆದ್ದಿದ್ದಾನೆ.

ರಿಷಬ್ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ದೊಂಡೇರಂಗಡಿಯ ವಿಮಲಾ ಮತ್ತು ಅರುಣ್ ಶೆಟ್ಟಿ ದಂಪತಿಯ ಪುತ್ರನಾಗಿದ್ದಾನೆ. ದೇಶಕ್ಕೆ ಹಾಗೂ ಊರಿಗೆ ಹೆಮ್ಮೆ ತಂದಿದ್ದಾನೆ. ಇದೀಗ ಏಷ್ಯಾ ಬುಕ್ ಆಫ್ ರೆಕಾರ್ಡ್ 2021 ಸಾಧನೆಯನ್ನು ಮಾಡಿದ್ದಾನೆ. ಎದುರಾಳಿಗಳನ್ನು ಕೆಲವೇ ಕ್ಷಣಗಳಲ್ಲಿ ಸೋಲಿಸುವ ಚಾಕಚಕ್ಯತೆ ರಿಷಬ್‍ಗಿದೆ. ಚಿಕ್ಕಂದಿನಿಂದ ಮುಂಬೈನಲ್ಲಿ ಬೆಳೆದಿರುವ ಕಾರಣ ಕನ್ನಡ ಆತನಿಗೆ ಗೊತ್ತಿಲ್ಲ.

ನನಗೆ ಚಿಕ್ಕಂದಿನಿಂದಲೇ ಕರಾಟೆ ಮೇಲೆ ಆಸಕ್ತಿ. ತಂದೆ ತಾಯಿ ಬಹಳ ಸಪೋರ್ಟ್ ಮಾಡಿದ್ದಾರೆ. ನನ್ನ ಗುರುಗಳು ಕೂಡಾ ಹೆಚ್ಚು ಮುತುವರ್ಜಿ ವಹಿಸಿದ್ದಾರೆ. ಮುಂದೆ ಇಂಟರ್ ನ್ಯಾಶನಲ್ ಲೆವೆಲ್ ಕಾಂಪಿಟೇಶನ್ ಹೋಗಬೇಕು ಎಂಬ ಆಸೆಯಿದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾನೆ.

ಲಾಕ್‍ಡೌನ್ ಸಂದರ್ಭವನ್ನು ರಿಷಬ್ ಸದುಪಯೋಗಪಡಿಸಿಕೊಂಡಿದ್ದಾನೆ. ದಿನಪೂರ್ತಿ ಕರಾಟೆ ಅಭ್ಯಾಸವನ್ನು ಮಾಡುತ್ತಿದ್ದನು. ಮಾರ್ಷಲ್ ಆರ್ಟ್ಸ್ ವೀಡಿಯೋಗಳನ್ನು ನೋಡೋದು. ತಮ್ಮ ಶಿಕ್ಷಕರ ಜೊತೆ ಅದನ್ನು ಪ್ರ್ಯಾಕ್ಟೀಸ್ ಮಾಡುವುದು. ಆನ್ ಲೈನ್ ಕ್ಲಾಸ್ ಮುಗಿಸಿ ಮನೆಯಲ್ಲೂ ನಿರಂತರ ಶ್ರಮವಹಿಸಿದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ಕುಟುಂಬಸ್ಥರು, ಊರಿನ ಗ್ರಾಮಸ್ಥರು ರಿಷಬ್ ಸಾಧನೆಗೆ ಶುಭ ಹಾರೈಸಿದ್ದಾರೆ.

ದೀಕ್ಷಿತ್ ದೊಂಡೇರಂಗಡಿ ಮಾತಮಾಡಿ, ರಿಷಬ್ ನಮ್ಮ ಊರಿನ ಹೆಮ್ಮೆ. ಏಷ್ಯಾ ಬುಕ್ ರೆಕಾರ್ಡ್ ಮಾಡಿರುವುದು ಸಣ್ಣ ಸಾಧನೆ ಅಲ್ಲ. ನಮ್ಮ ಊರಿನ ಹುಡುಗ ಎಂದು ಹೇಳಲು ಹೆಮ್ಮೆ ಎಂದರು. ಈಗ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಶಿಪ್‍ಗಳಿಗೆ ಪೂರ್ವ ತಯಾರಿಗಳನ್ನು ಮಾಡುತ್ತಿದ್ದಾನೆ. ರಿಷಬ್ ಶೆಟ್ಟಿ ಮತ್ತಷ್ಟು ಪದಕ ಬಾಚಿಕೊಳ್ಳಲಿ ಅನ್ನೋದು ನಮ್ಮ ಆಶಯ.

Comments

Leave a Reply

Your email address will not be published. Required fields are marked *