ಕಮರ್ಷಿಯಲ್ ಪೈಲಟ್ ಆದ ಕೇರಳದ ಮೊದಲ ಮಹಿಳೆ – ಶಶಿ ತರೂರ್ ಶ್ಲಾಘನೆ

ತಿರುವನಂತಪುರಂ: ಕೇರಳದಲ್ಲಿ ಕಮರ್ಷಿಯಲ್ ಪೈಲಟ್ ಆದ ಮೊದಲ ಮಹಿಳೆ ಜೆನಿ ಜೆರೊಮ್, ಈಕೆ ನಿಜವಾದ ಸ್ಫೂರ್ತಿ ಎಂದು ತಿರುವನಂತಪುರಂ ಸಂಸದ ಮತ್ತು ಕಾಂಗ್ರೆಸ್ ನೇತಾರ ಶಶಿ ತರೂರ್ ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.

ಜೆನಿ ಅವರಿಗೆ ಅಭಿನಂದನೆ, ಅವಳು ಇಂದಿನ  @airarabiagroup ವಿಮಾನವನ್ನು ಶಾರ್ಜಾದಿಂತ ತಿರುವನಂತಪುರಂಗೆ ಹಾರಿಸಿದ್ದಾರೆ. ಇದು ಒಂದು ಸಣ್ಣ ಮೀನುಗಾರಿಕಾ ಕುಗ್ರಾಮದಿಂದ ವಾಣಿಜ್ಯ ಪೈಲಟ್ ಆಗಬೇಕೆಂಬ ಹುಡುಗಿಯ ಬಾಲ್ಯದ ಕನಸಿನ ಸಾಕ್ಷಾತ್ಕಾರವಾಗಿದೆ. ಇದು ನಿಜವಾದ ಸ್ಫೂರ್ತಿಯಾಗಿದೆ ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

ಶಾರ್ಜಾದಿಂದ ತಿರುವನಂತಪುರಂಗೆ ಸಹ ಪೈಲಟ್ ಆಗಿ ಏರ್ ಅರೇಬಿಯಾ ಜಿ 9 449 ವಿಮಾನವನ್ನು ಹಾರಾಟ ನಡೆಸಬೇಕೆಂದು ತಿಳಿದಾಗ 23 ವರ್ಷದ ಜೆನಿ ಜೆರೋಮ್‍ಗೆ ಕನಸು ನನಸಾದಗಳಿಗೆಯಾಗಿದೆ. ತಿರುವನಂತಪುರಂನ ಕರಾವಳಿ ಗ್ರಾಮವಾದ ಕೊಚ್ಚುತ್ತುರ ಮೂಲದ ಜೆನಿ ಪ್ರಸ್ತುತ ಅಜ್ಮಾನ್ ನಲ್ಲಿ ತಮ್ಮ ಹೆತ್ತವರೊಂದಿಗೆ ವಾಸವಾಗಿದ್ದಾರೆ. ವಿಮಾನ ಹಾರಾಟ ನಡೆಸಬೇಕೆಂಬುದು ಜೆನಿ ಅವರ ಆಸೆಯಾಗಿತ್ತು. ಕೊನೆಗೂ ಸಹ ಪೈಲಟ್ ಆಗಿ ತನ್ನ ಊರು ತಿರುವನಂತಪುರಂಗೆ ಬಂದಾಗ ನಾಡಿನ ಜನರು ಪ್ರೀತಿಯಿಂದ ಬರ ಮಾಡಿಕೊಂಡರು. ಸಾಮಾಜಿಕ ಮಾಧ್ಯಮಗಳಲ್ಲಿ ಜೆನಿ ಅವರ ಕನಸು ನನಸಾಗಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕೇರಳದ ಹೆಮ್ಮೆಯಾಗಿ ಮಾರ್ಪಟ್ಟ ಜೆನಿ ಜೆರೋಮ್‍ಗೆ ಅಭಿನಂದನೆಗಳು. ತಿರುವನಂತಪುರಂ ಜಿಲ್ಲೆಯ ಕರಾವಳಿ ಹಳ್ಳಿಯಾದ ಕೊಚ್ಚುತುರಾ ಮೂಲದ ಜೆನಿ ಕೇರಳದ ಹೆಮ್ಮೆಯಾಗಿದ್ದಾರೆ. ಪರಿಸ್ಥಿತಿಗಳೊಂದಿಗದೆ ಹೋರಾಡಿ ತನ್ನ ಕನಸನ್ನು ನನಸಾಗಿಸಿದ ಜೆನಿಯ ಜೀವನ ಮಹಿಳೆಯರಿಗೆ ಮತ್ತು ಸಾಮಾನ್ಯ ಜನರಿಗೆ ದೊಡ್ಡ ಪ್ರೇರಣೆಯಾಗಿದೆ. ಇದು ಲಿಂಗ ಸಮಾನತೆಯ ಸಾಮಾಜಿಕ ಅರಿವನ್ನು ಸಹ ಸೃಷ್ಟಿಸುತ್ತದೆ. ಜೆನಿಯ ಆಶಯಗಳನ್ನು ಬೆಂಬಲಿಸಿದ ಕುಟುಂಬವು ಸಮುದಾಯಕ್ಕೆ ಆದರ್ಶಪ್ರಾಯವಾಗಿದೆ. ಬಾಲಕಿಯರಿಗೆ ಬೆಂಬಲ ನೀಡುವುದಕ್ಕೆ ಒಟ್ಟಾರೆ ಸಮುದಾಯ ಸಿದ್ಧರಾಗಿರಬೇಕು. ಜೆನಿ ಇನ್ನೂ ಹೆಚ್ಚಿನ ಸಾಧೆನೆಗೈಯ್ಯಲಿ ಎಂದು ನಾನು ಪ್ರಾಮಾಣಿಕವಾಗಿ ನಾನು ಹಾರೈಸುತ್ತೇನೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಫೇಸ್‍ಬುಕ್ ನಲ್ಲಿ ಬರೆದಿದ್ದಾರೆ.

Comments

Leave a Reply

Your email address will not be published. Required fields are marked *