ಕಪ್ಪಾಗಿರುವುದರಿಂದ ಡಿಯು ಪಟ್ಟ ಕಷ್ಟಗಳೆಷ್ಟು ಗೊತ್ತಾ?

-ಬಿಳಿಯಷ್ಟೇ ಸುಂದರವಾದ ಬಣ್ಣ ಕಪ್ಪು

ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನ ಕೊನೆಯ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ವೇದಿಕೆ ಮೇಲೆ ಕಪ್ಪು-ಬಿಳುಪಿನ ಬಣ್ಣದ ಬಗ್ಗೆ ಚರ್ಚೆ ನಡೆದಿದೆ. ಈ ವೇಳೆ ಸ್ಪರ್ಧಿಗಳು ತಾವು ಕಪ್ಪಾಗಿರುವುದರಿಂದ ಹಾಗೂ ಬಿಳಿಯಾಗಿರುವುದರಿಂದ ಏನೆಲ್ಲಾ ಕಷ್ಟಪಟ್ಟಿದ್ದಾರೆ ಎಂದು ಬಹಿರಂಗ ಪಡಿಸಿದ್ದಾರೆ.

ಬೆಳ್ಳಗಿರುವವರಿಗೆ ಲೈಫ್‍ನಲ್ಲಿ ತುಂಬಾ ಅಡ್ವಂಟೆಜ್ ಇದೆ ಎಂದು ನಿಮಗೆ ಎಂದಾದರೂ ಅನಿಸಿದ್ಯಾ ಎಂದು ಸುದೀಪ್ ವೈಷ್ಣವಿಯವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ವೈಷ್ಣವಿ ಹಾಗೇ ಎಂದೂ ಇಲ್ಲ. ಆರ್ಟಿಸ್ಟ್ ಅಂತ ಬಂದಾಗ ಲೈಟ್ ಕಡಿಮೆ ಹಾಕುತ್ತಾರೆ. ಕೆಲವೊಮ್ಮೆ ಕ್ಯಾಮೆರಾ ಮೆನ್‍ಗಳು ಹಾಗೂ ಕೆಲವು ಆರ್ಟಿಸ್ಟ್‍ಗಳು ನಿನ್ನಿಂದ ನನಗೂ ಲೈಟ್ ಹಾಕಲಿಲ್ಲ ಎಂದು ಬೈದುಕೊಂಡಿದ್ದಾರೆ. ಆದರೆ ಫೇರ್ ಆಗಿರುವುದು ಒಂದು ರೀತಿ ಅಡ್ವಂಟೆಜ್ ಕೂಡ ಹೌದು ಎಂದಿದ್ದಾರೆ.

ನಂತರ ದಿವ್ಯಾ ಉರುಡುಗ ನಾನು ಚಿಕ್ಕವಳಿದ್ದಾಗಲಿಂದಲೇ ಈ ವಿಚಾರವಾಗಿ ಸ್ವಲ್ಪ ಕಷ್ಟ ಅನುಭವಿಸಿದ್ದೇನೆ. ನನ್ನ ತಂದೆ ಸ್ವಲ್ಪ ಕಪ್ಪು, ನನ್ನ ತಾಯಿ ಬಿಳಿ. ಈಗ ನನ್ನ ಸಂಬಂಧಿಕರೆ ನನ್ನನ್ನು ಕಪ್ಪು ಎನ್ನುವಂತೆ ಮಾತನಾಡುತ್ತಾರೆ. ಹೀಗಾಗಿ ನನಗೆ ಚಿಕ್ಕವಯಸ್ಸಿನಿಂದಲೇ ನಾನು ಕಪ್ಪು ಎಂಬುದು ನನ್ನ ತಲೆಯಲ್ಲಿ ಕುಳಿತುಬಿಟ್ಟಿದೆ. ಚಿಕ್ಕವಯಸ್ಸಿನಲ್ಲಿ ನಾನು ಕಪ್ಪು ಎಂದಾಗ ಬೇಸರವಾಗುತ್ತಿತ್ತು. ಆದರೆ ಈಗ ನಾನು ಕಪ್ಪಾಗಿದ್ದರು ಸರಿ ಎಂದು ಒಪ್ಪಿಕೊಂಡಿದ್ದೇನೆ ಎನ್ನುತ್ತಾರೆ.

ಇನ್ನೂ ಮಂಜು ನಾನು ಕಪ್ಪಾಗಿರುವುದು ಯಾವತ್ತು ನನಗೆ ಸಮಸ್ಯೆ ಅಂತ ಅನಿಸಿಲ್ಲ ಎಂದು ಹೇಳುತ್ತಾರೆ. ಆಗ ಸುದೀಪ್ ಬೆಳ್ಳಗಿರುವವರೆಲ್ಲಾ ಪ್ರಾಮಾಣಿಕರು ಹಾಗೂ ಕಪ್ಪಾಗಿರುವವರೆಲ್ಲರೂ ಕಳ್ಳರು ಎಂದು ಅಂದುಕೊಂಡವರು ತುಂಬಾ ಜನ ಇದ್ದಾರೆ. ಕಂಬಳಿ ಹುಳು ಬೆಳೆದು ಬಣ್ಣಬಣ್ಣದ ಚಿಟ್ಟೆಯಾದರೂ, ಆ ಚಿಟ್ಟೆಯ ಬಣ್ಣಗಳಲ್ಲಿ ಕಪ್ಪು ಕೂಡ ಬಹಳ ಮುಖ್ಯ ಎಂಬುವುದನ್ನು ಮರೆಯಬೇಡಿ. ಬಿಳಿಯಷ್ಟೇ ಒಂದು ಸುಂದರವಾದಂತಹ ಬಣ್ಣ ಕಪ್ಪು ಎಂದು ಅಭಿಪ್ರಾಯ ತಿಳಿಸಿದ್ದಾರೆ.

ಬಳಿಕ ಎಲ್ಲರೂ ಬಿಳಿಯಾಗಿರಬೇಕು ಎಂದು ಇಷ್ಟಪಡುತ್ತಾರೆ. ಆದರೆ ಕೂದಲು ಮಾತ್ರ ಬೆಳ್ಳಗೆಯಾಗುವುದು ಬೇಡ ಅಂತಾರೆ ಎಂದು ಹಾಸ್ಯ ಮಾಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಿಂದ ಶುಭಾ ಪೂಂಜಾ ಔಟ್

Comments

Leave a Reply

Your email address will not be published. Required fields are marked *