ಕನ್ನಡ ಸಿನಿಮಾ ಕಳಪೆ ಎಂದ ನೆಟ್ಟಿಗ – ಚೇತನ್ ಬೆಂಬಲ, ರಕ್ಷಿತ್ ಶೆಟ್ಟಿ ಕಿಡಿ

ಬೆಂಗಳೂರು: ಕನ್ನಡ ಚಿತ್ರರಂಗ ಕಳಪೆ ಎಂದು ಟ್ವೀಟ್ ಮಾಡಿದ್ದ ವ್ಯಕ್ತಿಯೊಬ್ಬನಿಗೆ ನಟ ಚೇತನ್‍ರವರು ಬೆಂಬಲ ನೀಡಿದ್ದರೆ, ನಟ ರಕ್ಷಿತ್ ಖಡಕ್ ಉತ್ತರ ನೀಡಿದ್ದಾರೆ.

 

ದಕ್ಷಿಣ ಭಾರತದ ಕೆಟ್ಟ ಚಿತ್ರೋದ್ಯಮ ಕನ್ನಡ ಚಿತ್ರರಂಗದಲ್ಲಿ ಕೊನೆಗೂ ಭರವಸೆ ಮೂಡಿದೆ. ಮರುಭೂಮಿಯಂತಿರುವ ಕನ್ನಡ ಚಿತ್ರರಂಗದಲ್ಲಿ ಚೇತನ್ ಅಹಿಂಸಾರವರು ಮಳೆಯಂತಿದ್ದಾರೆ ಎಂದು ವ್ಯಕ್ತಿ ಟ್ವೀಟ್ ಮಾಡಿದ್ದರು.

ಇದಕ್ಕೆ ನಟ ಚೇತನ್ ಅಹಿಂಸಾರವರು ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದ. ಬೇರೆ ಸಿನಿಮಾಗಳಂತೆ ಕೆಜಿಎಫ್ ತರಹದ ಅನೇಕ ಉತ್ತಮ ಸಿನಿಮಾಗಳನ್ನು ನಾವು ಮಾಡಿದ್ದೇವೆ. ನೀವು ಆಡಿದ ಮಾತು ಕಟುವಾಗಿದ್ದರೂ ಅದನ್ನು ರಚನಾತ್ಮಕ ಪ್ರತಿಕ್ರಿಯೆ ಎಂದು ಪರಿಗಣಿಸುತ್ತೇವೆ ಎಂದು ರೀ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಜನ್ರಿಗೆ ಒಳ್ಳೆಯದು ಮಾಡೋಕೆ ಕಾರ್ ಮಾರಲು ತಯಾರಾಗಿದ್ರು ವಿಜಯ್: ಜಗ್ಗೇಶ್

ಈ ಎರಡು ಟ್ವೀಟ್‍ಗಳನ್ನು ಗಮನಿಸಿದ ರಕ್ಷಿತ್ ಶೆಟ್ಟಿ, ಈ ಚಿತ್ರರಂಗ ನನಗೆ ಹಾಗೂ ಅನೇಕರಿಗೆ ಒಂದು ವೇದಿಕೆ ನೀಡಿದೆ. ಈ ವೇದಿಕೆಯನ್ನು ನನಗಿಂತ ಮುನ್ನ ಅನೇಕ ದಿಗ್ಗಜರು ಕಟ್ಟಿದ್ದಾರೆ. ನಿಮಗೆ ಅವರ ಬಗ್ಗೆ ತಿಳಿದಿಲ್ಲ ಎಂಬುವುದು ನನಗೆ ಗೊತ್ತಿದೆ. ಏನೂ ಇಲ್ಲವಾಗಿದ್ದಾಗ ನನಗೆ ಈ ಚಿತ್ರರಂಗ ಜೀವನ ನೀಡಿದೆ. ಇಲ್ಲಿ ಕೆಲಸ ಮಾಡುವ ಸಾವಿರಾರು ಜನಕ್ಕೆ ಜೀವನ ನೀಡಿದೆ ಎಂದು ಖಾರವಾಗಿ ಉತ್ತರಿಸಿದ್ದಾರೆ. ಇದನ್ನೂ ಓದಿ: ವಿಜಯ ಕುಮಾರ್ ಮುಂದೆ ‘ಸಂಚಾರಿ’ ಬಂದಿದ್ದು ಹೇಗೆ?

ಚೇತನ್‍ರವರೇ ನಿಮ್ಮ ಕೆಲಸಗಳಿಂದ ನಾನು ನಿಮ್ಮನ್ನು ಗೌರವಿಸುತ್ತೇನೆ. ಆದರೆ ನೀವು ನಿಮ್ಮ ಆಲೋಚನೆಗಳನ್ನು ಸರಿಮಾಡಿಕೊಳ್ಳಬೇಕು. ಕೆಟ್ಟದ್ದನ್ನು ಬಿತ್ತಿದ ಕಡೆ ಕೆಡುಕು ಬೆಳೆಯುತ್ತದೆ ಎಂದು ಟ್ವೀಟ್ ಮಾಡುವ ಮೂಲಕ ತಿಳಿ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *