ಕನ್ನಡದ ಚಿತ್ರರಂಗ ಕಲಾವಿದರಿಂದ ಅಯೋಧ್ಯೆ ರಾಮ ಮಂದಿರಕ್ಕೆ ನಿಧಿ ಸಮರ್ಪಣೆ

ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕೆ ದೇಶದ್ಯಾಂತ ಹಣ ಸಂಗ್ರಹಿಸಲಾಗುತ್ತಿದೆ. ಈ ಮಧ್ಯೆ ಕನ್ನಡ ಚಿತ್ರರಂಗ ಕಲಾವಿದರು ಭಕ್ತಿಯಿಂದ ತಮ್ಮ ತಮ್ಮ ನಿಧಿಯನ್ನು ಶ್ರೀರಾಮನಿಗೆ ಸಮರ್ಪಿಸಿದ್ದಾರೆ.

ನಿಧಿ ಸ್ವೀಕರಿಸಿ ಮಾತನಾಡಿದ ಸಂಘದ ಹಿರಿಯರು ಮತ್ತು ಅಭಿಯಾನದ ಪ್ರಮುಖರಾದ ನಾ. ತಿಪ್ಪೇಸ್ವಾಮಿ ಜಿ, ಶ್ರೀರಾಮ ಪ್ರತಿಯೊಬ್ಬರ ಆದರ್ಶ ಪುರುಷ. ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಇಡೀ ದೇಶಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬಡವ, ಶ್ರೀಮಂತ ಎನ್ನುವ ಭೇದ, ಭಾವ ಇಲ್ಲದೆ ಪ್ರತಿಯೊಬ್ಬರೂ ಇದು ನಮಗೆ ಸಿಕ್ಕಿದ ಆಜನ್ಮ ಪುಣ್ಯ ಎಂದು ತಿಳಿದು ತಮ್ಮ ಪಾಲಿನ ನಿಧಿ ಸಮರ್ಪಿಸುತ್ತಿದ್ದಾರೆ ಎಂದು ಹೇಳಿದರು.

ನಿಧಿ ಸಮರ್ಪಣೆ ಬಗ್ಗೆ ಮಾತನಾಡಿದ ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷರಾದ ಸುನಿಲ್ ಪುರಣಿಕ್, ಕಲಾವಿದರು ಮುಕ್ತ ಮನಸ್ಸಿನಿಂದ ಶ್ರೀರಾಮ ಕಾರ್ಯ ಮಾಡಲು ಸಿದ್ಧರಾಗಿದ್ದಾರೆ. ಇದು ಮೊದಲ ಸುತ್ತು ಇನ್ನು ಬಹಳಷ್ಟು ಜನ ಕೊಡುವವರಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಖ್ಯಾತ ನಿರ್ದೇಶಕ ಪವನ್ ಒಡೆಯರ್, ರೂಪ ಐಯ್ಯರ್, ಪ್ರಮೀಳಾ ಸುಬ್ರಹ್ಮಣ್ಯ, ಅನಿರುದ್ಧ ಬಾಲಾಜಿ, ಮಾಲತಿ ದೇಶಪಾಂಡೆ, ಸ್ವಾತಿ, ಯಮುನಾ, ಭಾಸ್ಕರ್, ಬಿರಾದಾರ್, ಶಿವಕುಮಾರ್ ಆರಾಧ್ಯ ಎಲ್ಲರೂ ನಿಧಿ ಸಮರ್ಪಣೆ ಮಾಡಿದರು.

Comments

Leave a Reply

Your email address will not be published. Required fields are marked *