ಕನ್ನಡದಲ್ಲೇ ಡಾ.ರಾಜ್‍ಕುಮಾರ್ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಆರ್​ಸಿಬಿ

ಬೆಂಗಳೂರು: ಇಂದು ಡಾ.ರಾಜ್‍ಕುಮಾರ್ ಅವರ 92ನೇ ವರ್ಷದ ಹುಟ್ಟುಹಬ್ಬ. ಕನ್ನಡ ಚಿತ್ರರಂಗದ ಬಂಗಾರದ ಮನುಷ್ಯನಾಗಿ ಅದೆಷ್ಟೋ ಉತ್ತಮ ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದ ಕೀರ್ತಿ ಹೆಚ್ಚಿಸಿದ ಅಣ್ಣಾವರ ಹುಟ್ಟುಹಬ್ಬದ ಶುಭಾಶಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕನ್ನಡದಲ್ಲೇ ವಿಶೇಷವಾಗಿ ಟ್ವೀಟ್ ಮಾಡಿದೆ.

ಬೆಂಗಳೂರು ತಂಡದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ‘ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ’ ನಟಸಾರ್ವಭೌಮ ಡಾ. ರಾಜ್‍ಕುಮಾರ್ ಅವರ 92ನೇ ಜನ್ಮಮಹೋತ್ಸವದ ನೆನಪಿನಲ್ಲಿ ಎಂದು ಕನ್ನಡದಲ್ಲೇ ಬರೆದುಕೊಂಡು ಶುಭಕೋರಿದೆ.

ಈ ರೀತಿ ಆರ್​ಸಿಬಿ ತಂಡ ನಟಸಾರ್ವಭೌಮ ಅವರಿಗೆ ವಿಶ್ ಮಾಡುತ್ತಿದ್ದಂತೆ ಆರ್​ಸಿಬಿ ಅಭಿಮಾನಿಗಳು ಹಲವು ಕಮೆಂಟ್ ಹಾಗೂ ಲೈಕ್‍ಗಳನ್ನು ಕೊಟ್ಟು ಆರ್​ಸಿಬಿಯ ಕನ್ನಡ ಪ್ರೇಮವನ್ನು ಕಂಡು ಸಂತೋಷಗೊಂಡಿದ್ದಾರೆ.

ಆರ್​ಸಿಬಿ ತಂಡ 14ನೇ ಆವೃತ್ತಿಯ ಐಪಿಎಲ್‍ನಲ್ಲಿ 4 ಪಂದ್ಯಗಳಲ್ಲಿ ನಾಲ್ಕು ಜಯದೊಂದಿಗೆ ಅಂಕ ಪಟ್ಟಿಯಲ್ಲಿ 8 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದೆ. ಆರ್​ಸಿಬಿ ನಾಳೆ ಮುಂಬೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

Comments

Leave a Reply

Your email address will not be published. Required fields are marked *