ಕತ್ತಿ ಹಿಡಿದು ಬೇಟೆಗೆ ಕಾಯ್ತಿರೋ ಅಧೀರನ ಲುಕ್ ಧಗ ಧಗ

ಬೆಂಗಳೂರು: ಕೆಜಿಎಫ್ ಸಿನಿಮಾ ಮೂಲಕ ಚಂದನವನಕ್ಕೆ ಪ್ರವೇಶ ನೀಡಿರುವ ಸಂಜಯ್ ದತ್ ನಟನೆಯ ಅಧೀರನ ಲುಕ್ ಇಂದು ಅನಾವರಣಗೊಂಡಿದೆ.

ಸಂಜಯ್ ದತ್ ಹುಟ್ಟುಹಬ್ಬದ ಹಿನ್ನೆಲೆ ಹೊಂಬಾಳೆ ಫಿಲಂಸ್ ಅಧೀರನ ಪೋಸ್ಟರ್ ಬಿಡುಗಡೆ ಮಾಡಿದೆ. ಕೈಯಲ್ಲಿ ಕತ್ತಿ ಹಿಡಿದು ಏನೋ ಯೋಚಿಸೋ ರೀತಿಯಲ್ಲಿ ಅಧೀರ ಕುಳಿತಿದ್ದು, ಫೋಟೋ ಸೋಶಿಯ್ ಮೀಡಿಯಾದಲ್ಲಿ ಧಗ ಧಗಿಸುತ್ತಿದೆ. ಇದರ ಜೊತೆಗೆ ಕ್ರೂರತನಗಳಿಂದ ಪ್ರಭಾವಿತನಾದ ನಿರ್ಭಿತ ಯೋಧ ಎಂದು ಬರೆಯಲಾಗಿದೆ.

ಎರಡು ದಿನಗಳ ಹಿಂದೆ ಕೆಜಿಎಫ್ ಅಂಗಳದಿಂದ ದೊಡ್ಡ ಸುದ್ದಿ ಹೊರ ಬೀಳುವ ಮುನ್ಸೂಚನೆಯನ್ನು ನಿರ್ದೇಶಕ ಪ್ರಶಾಂತ್ ನೀಲ್ ನೀಡಿದ್ದರು. ರಾಕಿಯ ಜೊತೆಗಿನ ಯದ್ಧ ಅಧೀರನ ಯುದ್ಧ ಬಲುರೋಚಕವಾಗಿರಲಿದೆ ಎಂಬುದನ್ನು ಪೋಸ್ಟರ್ ಹೇಳುತ್ತಿದೆ. ಗರುಡನನ್ನ ಮುಗಿಸುವ ರಾಕಿಯ ಮುಂದಿನ ಯುದ್ಧ ಅಧೀರನೊಂದಿಗೆ ಇರಲಿದೆ. ಸಾವಿರಾರು ಜನರ ನಾಯಕನಾಗಿ ರಾಕಿ ಹೇಗೆ ತನ್ನ ಹೊಸ ಸಾಮ್ರಾಜ್ಯ ಕಟ್ಟಲಿದ್ದಾನೆ ಎಂಬು ಚಾಪ್ಟರ್-2ರಲ್ಲಿ ರಿವೀಲ್ ಆಗಲಿದೆ.

Comments

Leave a Reply

Your email address will not be published. Required fields are marked *