ಕಣ್ತಪ್ಪಿಸಿ ಕಳ್ಳ ಹೆಜ್ಜೆ ಇಟ್ಟು ತಡರಾತ್ರಿ ಹೊರ ಬಂದ್ಳು – ಆಕೆಯ ಹಿಂದೆಯೇ ಬಂದ್ರು ಕುಟುಂಬಸ್ಥರು

– ಕತ್ತಲಲ್ಲಿ ತಗ್ಲಾಕೊಂಡ ಜೋಡಿಗೆ ಹಗಲಲ್ಲಿ ಶಿಕ್ಷೆ

ಬೆಳಗಾವಿ: ತಡರಾತ್ರಿ ಕುಟುಂಬಸ್ಥರ ಕಣ್ಣು ತಪ್ಪಿಸಿ ಇನಿಯನನ್ನ ಭೇಟಿಯಾಗಲು ಬಂದಿದ್ದ ವಿವಾಹಿತೆಯನ್ನ ಕುಟುಂಬಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದಿರುವ ಘಟನೆ ರಾಮದುರ್ಗ ತಾಲೂಕಿನ ಮುರುಕಟನಾಳ ಗ್ರಾಮದಲ್ಲಿ ನಡೆದಿದೆ. ಕುಟುಂಬಸ್ಥರನ್ನ ಇಬ್ಬರನ್ನ ಸಾರ್ವಜನಿಕವಾಗಿ ಟ್ರ್ಯಾಕ್ಟರ್ ಗೆ ಕಟ್ಟಿ ಹಾಕಿ ಶಿಕ್ಷೆ ನೀಡಿದ್ದಾರೆ.

ಸರೋಜಿನಿ ಮತ್ತು ಮಹೇಶ್ (ಇಬ್ಬರ ಹೆಸರು ಬದಲಾಯಿಸಲಾಗಿದೆ) ಅಕ್ರಮ ಸಂಬಂಧ ಹೊಂದಿದ ಜೋಡಿ. ಪ್ರಿಯಕರ ಮಹೇಶ್ ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದ ನಿವಾಸಿ. ಶುಕ್ರವಾರ ರಾತ್ರಿ ಸರೋಜಿನಿ ಪತಿ ಹಾಗೂ ಕುಟುಂಬಸ್ಥರು ಕಣ್ಣು ತಪ್ಪಿಸಿ ಕಳ್ಳ ಹೆಜ್ಜೆ ಹಾಕಿ ಮಹೇಶ್ ಭೇಟಿಗೆ ಬಂದಿದ್ದಳು. ಸರೋಜಿನಿಯನ್ನ ಪತಿ ಹಾಗೂ ಕುಟುಂಬಸ್ಥರು ಆಕೆಗೆ ತಿಳಿಯದಂತೆಯೇ ಹಿಂಬಾಲಿಸಿದ್ದಾರೆ. ಸರೋಜಿನಿ ಮತ್ತು ಮಹೇಶ್ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗಲೇ ಹಿಡಿದಿದ್ದಾರೆ.

ನಾಲ್ಕು ಗಂಟೆಗಳ ಕಾಲ ಇಬ್ಬರನ್ನ ಟ್ರ್ಯಾಕ್ಟರ್ ಗೆ ಕಟ್ಟಿ ಹಾಕಿದ್ದಾರೆ. ನಂತರ ಮಹೇಶನಿಗೆ ಮಹಿಳೆಯಿಂದ ದೂರವಿರುವಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Comments

Leave a Reply

Your email address will not be published. Required fields are marked *