ಕಚೇರಿಯಲ್ಲೇ ಮಹಿಳಾ ಸಿಬ್ಬಂದಿಗೆ ಕಿಸ್ – ತಹಶೀಲ್ದಾರ್ ಅಮಾನತು

– ಅಧಿಕಾರಿ ವಿರುದ್ಧ ದೂರು ನೀಡಿದ್ದ ಮಹಿಳೆ

ಕೊಪ್ಪಳ: ಕಚೇರಿಯಲ್ಲಿ ತನ್ನ ಮಹಿಳಾ ಸಿಬ್ಬಂದಿಗೆ ಕಿಸ್ ಮಾಡಿದ್ದ ಪ್ರಕರಣದಲ್ಲಿ ತಹಶೀಲ್ದಾರ್ ಕೆ.ಎಂ.ಗುರುಬಸವರಾಜ್‍ನನ್ನು ಅಮಾತನು ಮಾಡಲಾಗಿದೆ.

ಕಳೆದ ಮೂರು ತಿಂಗಳ ಹಿಂದೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿಗೆ ತಹಶೀಲ್ದಾರ್ ಆಗಿದ್ದ ಗುರುಬಸವರಾಜ್ ಕಚೇರಿಯಲ್ಲೇ ತನ್ನ ಸಹದ್ಯೋಗಿಗೆ ಕಿಸ್ ಮಾಡಿದ್ದರು. ಆದರೆ ತಹಶೀಲ್ದಾರ್ ಕಿಸ್ ವಿಡಿಯೋ ಎರಡು ತಿಂಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

ವಿಡಿಯೋ ವೈರಲ್ ಆದ ನಂತರ ಮಹಿಳೆ ತಹಶೀಲ್ದಾರ್ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಐಪಿಸಿ ಕಲಂ 354 (ಸ್ತ್ರೀ ಕಿರಿಕಿರಿ) 354(ಬಿ), 506 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಈ ಪ್ರಕರಣವನ್ನು ಕೂಲಂಕುಶವಾಗಿ ಪರಿಶೀಲಿಸಿದ ಕಂದಾಯ ಇಲಾಖೆ ಆಧೀನ ಕಾರ್ಯದರ್ಶಿ ನಾಗರಾಜು ಎಸ್ ಅವರು, ಗುರುಬಸವರಾಜ್‍ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಬಂದು ನಿಂತಿದ್ದ ಮಹಿಳಾ ಸಿಬ್ಬಂದಿಯನ್ನು ಕಿಸ್ ಮಾಡಿ ಕಚೇರಿಯ ಘನತೆಯನ್ನ ಮಣ್ಣು ಪಾಲು ಮಾಡಿದ್ದಾರೆ ಎಂದು ಕೆಲ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಗುರುಬಸವರಾಜ್ ಕುಷ್ಟಗಿ ತಹಶೀಲ್ದಾರ್ ಆಗಿದ್ದ ಅವಧಿಯಲ್ಲಿ ಈ ಘಟನೆ ನಡೆದಿದ್ದು, ಈ ವಿಡಿಯೋ ವೈರಲ್ ಆಗಿತ್ತು. ಅಲ್ಲಿಂದ ವರ್ಗಾವಣೆಯಾಗಿ ಸದ್ಯ ಗುರುಬಸವರಾಜ್ ಸದ್ಯ ಕೊಪ್ಪಳ ನಗರಾಭಿವೃದ್ಧಿ ಕೋಶದಲ್ಲಿ ತಹಶೀಲ್ದಾರ್ ಆಗಿದ್ದರು.

ಅಲ್ಲಿಂದ ವರ್ಗಾವಣೆಗೊಂಡ ಬಳಿಕ ಅವರ ಕಿಸ್ಸಿಂಗ್ ಸೀನ್ ವೈರಲ್ ಆಗಿತ್ತು. ಉನ್ನತ ಸ್ಥಾನದಲ್ಲಿರುವ ಅಧಿಕಾರಿಯೇ ತಮ್ಮ ಕಚೇರಿಯಲ್ಲಿ ಈ ರೀತಿ ರಾಸಲೀಲೆ ಮಾಡಿ ಹುದ್ದೆಯ ಘನತೆಗೆ ದಕ್ಕೆ ತಂದಿದ್ದಾರೆ ಅಂತ ಅಧಿಕಾರಿಯ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದರು.

Comments

Leave a Reply

Your email address will not be published. Required fields are marked *