ಕಚೇರಿಯಲ್ಲೇ ಕಿಸ್ಸಿಂಗ್ ಪ್ರಕರಣ- ತಹಶೀಲ್ದಾರ್ ವಿರುದ್ಧ ಮಹಿಳೆ ದೂರು

ಕೊಪ್ಪಳ: ಸರ್ಕಾರಿ ಕಚೇರಿಯಲ್ಲೇ ತನ್ನ ಸಿಬ್ಬಂದಿಗೆ ಕಿಸ್ ಮಾಡಿದ್ದ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ನೊಂದ ಮಹಿಳೆ ಈಗ ತಹಶೀಲ್ದಾರ್ ಗುರುಬಸವರಾಜ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಎರಡು ದಿನಗಳ ಹಿಂದೆ ಕೊಪ್ಪಳದ ಕುಷ್ಟಗಿಯ ತಹಶೀಲ್ದಾರ್ ಆಗಿದ್ದ ಅವಧಿಯಲ್ಲಿ ತನ್ನ ಮಹಿಳಾ ಸಿಬ್ಬಂದಿಯೊಂದಿಗೆ ಕಿಸ್ ಮಾಡಿದ್ದ ವಿಡಿಯೋ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಬಿತ್ತರವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ನೊಂದ ಮಹಿಳೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಗುರುಬಸವರಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದನ್ನು ಓದಿ: ಕಚೇರಿಯಲ್ಲೇ ತಹಶೀಲ್ದಾರ್ ಕಿಸ್ಸಿಂಗ್ – ವಿಡಿಯೋ ವೈರಲ್

ಕುಷ್ಟಗಿಯ ಗ್ರಾಮ ಲೆಕ್ಕಾಧಿಕಾರಿಯಾಗಿರುವ ನೊಂದ ಮಹಿಳೆ ದೂರು ದಾಖಲಿಸಿದ್ದು ನ್ಯಾಯ ದೊರಕಿಸಿಕೊಡುವಂತೆ ಬೇಡಿಕೊಂಡಿದ್ದಾರೆ. ಗುರುಬಸವರಾಜ್ ಕುಷ್ಟಗಿ ತಹಶೀಲ್ದಾರ್ ಆಗಿ ಬಂದಾಗಿನಿಂದ ನನ್ನೊಂದಿಗೆ ಅಸಭ್ಯ ವರ್ತನೆ ತೋರುತ್ತಿದ್ದನು. ಪ್ರತಿನಿತ್ಯ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದ ಎಂದು ನೊಂದ ಮಹಿಳೆ ಪ್ರಕರಣದಲ್ಲಿ ದಾಖಲಿಸಿದ್ದಾರೆ.

ದೂರು ದಾಖಲಿಸಿ ಕೊಂಡ ಕುಷ್ಟಗಿ ಪೊಲೀಸರು ಐಪಿಸಿ ಕಲಂ 354(ಸ್ತ್ರೀ ಕಿರಿಕಿರಿ) 354(ಬಿ), 506 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಂಡಿದ್ದಾರೆ.

Comments

Leave a Reply

Your email address will not be published. Required fields are marked *