ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಮುಂಬೈನಲ್ಲಿ ಮತ್ತೊಂದು ಎಫ್‍ಐಆರ್ ದಾಖಲಾಗಿದೆ. 10 ದಿನಗಳಲ್ಲಿ ರಣಾವತ್ ವಿರುದ್ಧ ಮೂರು ಎಫ್‍ಐಆರ್ ದಾಖಲು ಮಾಡಲಾಗಿದೆ. ಈ ಬಾರಿ ನ್ಯಾಯಾಂಗ ನಿಂದನೆ ಮತ್ತು ನಿಂದನೀಯ ಪೋಸ್ಟ್ ಮಾಡಿರುವ ಆರೋಪಗಳು ಕಂಗನಾ ವಿರುದ್ಧ ಕೇಳಿ ಬಂದಿವೆ. ಮುಂಬೈ ವಕೀಲ ಅಲಿ ಕಾಶಿಫ್ ಖಾನ್ ದೇಶಮುಖ್ ಅಂಧೇರಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾರೆ. ನಟಿ ಧರ್ಮದ ವಿಷಯವಾಗಿ ಸಮುದಾಯಗಳ ನಡುವೆ ಕಲಹ ಮತ್ತು ದ್ವೇಷ ಹುಟ್ಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ದೇಶಮುಖ್ ಅರ್ಜಿಯಲ್ಲೇನಿದೆ?: ನಟಿ ಕಂಗನಾ ರಣಾವತ್ ದೇಶದೊಳಗೆ ವಿಂಗಡನೆ ಮತ್ತು ಕಾನೂನುಗಳನ್ನ ಅಗೌರವದಿಂದ ಕಾಣುತ್ತಿದ್ದಾರೆ. ನ್ಯಾಯಾಲಯದ ಆದೇಶಗಳನ್ನು ಹಾಸ್ಯ ಮಾಡುತ್ತಿದ್ದಾರೆ. ಬಾಂದ್ರಾ ಕೋರ್ಟ್ ಎಫ್‍ಐಆರ್ ದಾಖಲಿಸಲು ಆದೇಶ ನೀಡಿದ್ರೆ, ‘ಪಪ್ಪು ಸೇನಾ’ ಪದದ ಬಳಸುವ ಮೂಲಕ ನ್ಯಾಯಾಲಯದ ವಿರುದ್ಧ ದುರುದ್ದೇಶ ಮತ್ತು ನಿಂದನಾತ್ಮಕ ಟ್ವೀಟ್ ಮಾಡಿದ್ದಾರೆ ಎಂದು ದೇಶ್‍ಮುಖ್ ಅರ್ಜಿಯಲ್ಲಿ ಹೇಳಿದ್ದಾರೆ. ನವೆಂಬರ್ 10ರಂದು ಅಂಧೇರಿಯ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: ಕಂಗನಾ ಕಟ್ಟಡ ನೆಲಸಮಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ: ಶಿವಸೇನೆ

ಸಾಹಿಲ್ ಆಶ್ರಫ್ ಅಲಿ ಸೈಯದ್ ಎಂಬವರು ಕಂಗನಾ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿಯೊಂದನ್ನ ಸಲ್ಲಿಸಿದ್ದರು. ಕಂಗನಾ ರಣಾವತ್ ಕಳೆದ ಕೆಲ ತಿಂಗಳುಗಳಿಂದ ಸ್ವಜನಪಕ್ಷಪಾತ ಮತ್ತು ಫೇವರಿಟಿಸಂ ಹೆಸರಲ್ಲಿ ಬಾಲಿವುಡ್ ನ್ನು ಅವಮಾನಿಸುತ್ತಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆ ಮತ್ತು ಖಾಸಗಿ ವಾಹಿನಿಗಳಿಗೆ ನೀಡಿರುವ ಸಂದರ್ಶನದಲ್ಲಿ ಹಿಂದೂ ಮತ್ತು ಮುಸ್ಲಿಂ ಎಂದು ಕಲಾವಿದರನ್ನ ವಿಂಗಡನೆ ಮಾಡುವ ಮೂಲಕ ಉದ್ಯಮವನ್ನ ಇಬ್ಭಾಗಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಸಾಹಿಲ್ ಅರ್ಜಿಯಲ್ಲಿ ಆರೋಪಿಸಿದ್ದರು. ಇದನ್ನೂ ಓದಿ: ಕೋರ್ಟ್ ಆದೇಶದಂತೆ ತುಮಕೂರಲ್ಲಿ ಕಂಗನಾ ವಿರುದ್ಧ ಎಫ್‍ಐಆರ್

ಕಂಗನಾ ಹಲವು ವಿವಾದಾತ್ಮಕ ಮತ್ತು ಸಮಾಜದ ಸ್ವಾಸ್ಥ್ಯ ಕದಡುವ ರೀತಿಯಲ್ಲಿ ಟ್ವೀಟ್ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಾರೆ. ಇದರ ಜೊತೆ ಬಾಲಿವುಡ್ ನಲ್ಲಿರುವ ಹಲವು ಸಹದ್ಯೋಗಿಗಳ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿರುವ ಸಾಹಿಲ್ ನ್ಯಾಯಾಲಯಕ್ಕೆ ಕಂಗನಾ ಮಾಡಿರುವ ಟ್ವೀಟ್ ಸಾಕ್ಷ್ಯ ಸಲ್ಲಿಸಿದ್ದಾರೆ. ಇದನ್ನೂ ಓದಿ: ಕಂಗನಾ ವಿರುದ್ಧ FIR ದಾಖಲಿಸಲು ಕೋರ್ಟ್ ಆದೇಶ

ಬಾಂದ್ರಾ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಜಯದೇವ್ ವೈ. ಗುಲೆ, ನಟಿ ಕಂಗನಾ ರಣಾವತ್ ವಿರುದ್ಧ ಸಿಆರ್ ಪಿಸಿ 156 (3) ಪ್ರಕಾರ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆದೇಶಿಸಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಂಗನಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ. ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರದ ಬಳಿ ಕ್ಷಮೆ ಕೇಳು: ಕಂಗನಾಗೆ ರಾಖಿ ಸಾವಂತ್ ಆಗ್ರಹ

Leave a Reply