ಓಂ ನಮಃ ಶಿವಾಯ ಮಂತ್ರ ಪಠಿಸಿದ ಇಸ್ರೇಲಿಗರು

ಜೆರುಸಲೇಮ್: ಕೊರೊನಾ ಸಂಕಷ್ಟದಲ್ಲಿ ಭಾರತದ ಪರಮಾಪ್ತ ಗೆಳೆಯ ಇಸ್ರೆಲ್ ಭಾರತ ನೆರವಿಗೆ ಬಂದಿದೆ. ಇಸ್ರೇಲ್ ಪ್ರಜೆಗಳು ಓಂ ನಮಃ ಶಿವಾಯ ಮಂತ್ರ ಪಠಿಸುವ ಮೂಲಕವಾಗಿ ಭಾರತ ಕೊರೊನಾ ವಿರುದ್ಧದ ಯುದ್ಧದಲ್ಲಿ ಬಹುಬೇಗ ಗೆಲ್ಲಬೇಕು ಎಂದು ಪ್ರಾರ್ಥಿಸಿದ್ದಾರೆ.

 

View this post on Instagram

 

A post shared by Pawan K Pal ???????? (@pawank90)

ಇಸ್ರೇಲ್ ಟೆಲ್ ಅವಿದ್ ನಗರದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಒಂದೆಡೆ ಸೇರಿದ್ದ ಇಸ್ರೇಲ್ ಪ್ರಜೆಗಳು ಭಾರತ ಬಹುಬೇಗ ಚೇತರಿಸಿಕೊಳ್ಳಲಿ ಎಂದು ಹಾಡುಗಳನ್ನು ಹಾಡುವ ಮೂಲಕವಾಗಿ ಪ್ರಾರ್ಥನೆ ಮಾಡಿದ್ದಾರೆ. ಇದೇ ವೇಳೆ ಓಂ ನಮಃ ಶಿವಾಯ ಮಂತ್ರ ಪಠಣೆಯನ್ನು ಮಾಡಿದ್ದಾರೆ. ಈ ಕುರಿತಂತೆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಕಳೆದವಾರ ಇಸ್ರೇಲ್ ಭಾರತಕ್ಕೆ ಕೊರೊನಾ ವಿರುದ್ಧ ಹೋರಾಟ ಮಾಡಲು ಅಗತ್ಯ ಇರುವ ವೈದ್ಯಕೀಯ ಉಪಕರಣ ಸೇರಿದಂತೆ ಔಷಧಿ, ಪಿಪಿಇ ಕಿಟ್, ಮಾಸ್ಕ್‌ಗಳನ್ನು ಕಳುಹಿಸಿಕೊಟ್ಟಿತ್ತು. ನಿನ್ನೆಯಷ್ಟೇ ಇಸ್ರೇಲ್‍ನಿಂದ 2ನೇ ಹಂತದಲ್ಲಿ ಅಗತ್ಯ ವಸ್ತುಗಳು ಭಾರತವನ್ನು ತಲುಪಿಸಿದ್ದವು. ಈ ಕುರಿತಂತೆ ಇಸ್ರೇಲ್ ರಾಯಭಾರಿ ಕಚೇರಿಯಿಂದ ಮಾಹಿತಿ ನೀಡಿದೆ.

Comments

Leave a Reply

Your email address will not be published. Required fields are marked *