ಒಳ್ಳೆಯದಾಗಲಿ ನಿಮಗೆ ಮತ್ತಷ್ಟು ಶಕ್ತಿ ಬರಲಿ – ಅಶೋಕ್‍ಗೆ ಪರಮೇಶ್ವರ್ ಹಾರೈಕೆ

ತುಮಕೂರು: ಇಂದು ಕೊರಟಗೆರೆ ಕ್ಷೇತ್ರದ ಕಂದಾಯ ಇಲಾಖೆಯ ಉಪನೊಂದಣಿ ಕಚೇರಿಯನ್ನು ಕಂದಾಯ ಸಚಿವ ಆರ್.ಅಶೋಕ್ ಉದ್ಘಾಟಿಸಿದರು.

ಒಟ್ಟು 64 ಲಕ್ಷ ರೂ. ವೆಚ್ಚದಲ್ಲಿ ಕಚೇರಿ ನಿರ್ಮಾಣ ಮಾಡಲಾಗಿದ್ದು, ನಂತರ ಸಭಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಭೆ ಕುರಿತು ಮಾತನಾಡಿದ ಮಾಜಿ ಡಿಸಿಎಂ ಹಾಗೂ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಭಾಷಣದ ಕೊನೆಯಲ್ಲಿ ಆರ್.ಅಶೋಕ್ ಗೆ ಒಳ್ಳೆಯದಾಗಲಿ ನಿಮಗೆ ಮತ್ತಷ್ಟು ಶಕ್ತಿ ಬರಲಿ ಎಂದು ಶುಭ ಹಾರೈಸಿದರು.

ಯಾಕೆಂದರೆ ಎಲ್ಲಾ ಪಾರ್ಟಿಯಲ್ಲೂ ಸಿಎಂ ವಿಚಾರದ ಬಗ್ಗೆ ಚರ್ಚೆ ಆಗುತ್ತಿದೆ. ಈ ಬಗ್ಗೆ ಹೆಚ್ಚಾಗಿ ಮಾತನಾಡುವುದು ಬೇಡ. ಆದರೆ ಸರ್ಕಾರದ ಮಟ್ಟದಲ್ಲಿ ನೀವು ಪ್ರಭಾವಿ ಸಚಿವರಾಗಿದ್ದೀರಿ. ನಿಮಗೂ ಸಿಎಂ ಆಗುವ ಶಕ್ತಿ ಇದೆ ಎಂದು ಪರೋಕ್ಷವಾಗಿ ತಿಳಿಸಿದ ಪರಮೇಶ್ವರ್, ನಿಮಗೆ ಮತ್ತಷ್ಟು ಒಳ್ಳೆಯದಾಗಲಿ ಎಂದು ಶುಭಾಶಯ ಕೋರಿದರು. ಇದನ್ನೂ ಓದಿ: ಕಾಂಗ್ರೆಸ್‍ನವರು ಸಿಎಂ ಆಗುವ ತಿರುಕನ ಕನಸು ಕಾಣುತ್ತಿದ್ದಾರೆ: ಆರ್.ಅಶೋಕ್

Comments

Leave a Reply

Your email address will not be published. Required fields are marked *