ಒಬ್ಬರ ಲೈಫಲ್ಲಿ ಹೀರೋ ಆಗ್ಬೇಕಂದ್ರೆ, ಇನ್ನೊಬ್ಬರ ಲೈಫಲ್ಲಿ ವಿಲನ್ ಆಗ್ಲೇಬೇಕು- ರಾಬರ್ಟ್ ಮಾಸ್, ಕ್ಲಾಸ್ ಟ್ರೈಲರ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಇಂದು ಡಬಲ್ ಧಮಾಕಾ ಎನ್ನುವಂತಾಗಿದ್ದು, ಒಂದೆಡೆ ನೆಚ್ಚಿನ ನಟನ ಹುಟ್ಟುಹಬ್ಬವಾದರೆ, ಮತ್ತೊಂದೆಡೆ ಉಡುಗೊರೆ ನೀಡಿದ್ದು, ರಾಬರ್ಟ್ ಸಿನಿಮಾದ ಮಾಸ್ ಟ್ರೈಲರ್ ಬಿಡುಗಡೆ ಮಾಡಲಾಗಿದೆ.

ರಣ ರೋಚಕ ಲುಕ್, ಮಾಸ್ ಡೈಲಾಗ್, ಡಿ ಬಾಸ್ ಸ್ಟೈಲ್ ಸೇರಿದಂತೆ ಫುಲ್ ಖದರ್, ಕಡಕ್ ಲುಕ್‍ನ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಡಿ ಬಾಸ್ 44ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅಭಿಮಾನಿಗಳು ಸಹ ಸಿಡಿಪಿ ಮೂಲಕ ಅಷ್ಟೇ ಖುಷಿಯಿಂದ ಹಬ್ಬದಂತೆ ಆಚರಿಸುತ್ತಿದ್ದಾರೆ. ನೇರವಾಗಿ ದರ್ಶನ್ ಅವರೊಂದಿಗೆ ಹುಟ್ಟುಹಬ್ಬ ಆಚರಿಸಲು ಸಾಧ್ಯವಾಗದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಸಿಡಿಪಿ ಮೂಲಕ ಭರ್ಜರಿಯಾಗಿಯೇ ಸದ್ದು ಮಾಡುತ್ತಿದ್ದಾರೆ.

ಇತ್ತ ಟ್ರೈಲರ್ ಬಿಡುಗಡೆ ಮೂಲಕ ಚಿತ್ರ ತಂಡ ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದು, ಫುಲ್ ಖುಷಿಯಾಗಿದ್ದಾರೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ವ್ಯೂವ್ಸ್ ಪಡೆದಿದ್ದು, ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಟ್ರೈಲರ್ ನಲ್ಲಿ ಮಾಸ್, ಕ್ಲಾಸ್ ಹಾಗೂ ಭಾವನಾತ್ಮಕತೆ ಚಿತ್ರಣವನ್ನು ನೀಡಲಾಗಿದ್ದು, ನೀರಿಕ್ಷೆಯಂತೆಯೇ ಡಿ ಬಾಸ್ ಖದರ್, ಫೈಟ್ ಹುಬ್ಬೇರಿಸುವಂತೆ ಮಾಡಿದೆ.

ಟೀಸರ್ ಆರಂಭದಲ್ಲೇ ಡಿ ಬಾಸ್ ಮಾಸ್ ಲುಕ್ ತೋರಿಸಲಾಗಿದ್ದು, ನಂತರ ಖಡಕ್ ಫೈಟ್ ಇದೆ. ಬಳಿಕ ಡೀ ಬಾಸ್ ಸ್ಟೈಲ್ ಆಗಿ ಬಂದು ‘ಒಬ್ಬರ ಲೈಫಲ್ಲಿ ನಾವು ಹೀರೋ ಆಗಬೇಕಂದ್ರೆ, ಇನ್ನೊಬ್ಬರ ಲೈಫಲ್ಲಿ ನಾನು ವಿಲನ್ ಆಗಲೇಬೇಕು ಎಂದು ಮಾಸ್ ಡೈಲಾಗ್ ಹೊಡೆದಿದ್ದಾರೆ. ಬಳಿಕ ಮರಿ ಟೈಗರ್ ವಿನೋದ್ ಪ್ರಭಾಕರ್, ರವಿಶಂಕರ್ ಖಡಕ್, ಖದರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಕೊನೆಗೆ ತೆಲುಗು ನಟ ಜಗಪತಿ ಬಾಬು ಫುಲ್ ಮಾಸ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಮನುಷ್ಯನಿಗೆ ಎರಡು ಸರಿ ಮೈ ನಡುಗುತ್ತೆ, ಒಂದು ತುಂಬಾ ಚಳಿ ಆದಾಗ, ಮತ್ತೊಂದು ಇನ್ನೊಂದು ತುಂಬಾ ಭಯ ಆದಾಗ ಎಂದು ಡೈಲಾಗ್ ಹೊಡೆದಿದ್ದಾರೆ. ಕೊನೆಗೆ ಡಿ ಬಾಸ್, ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು, ರಾವಣನ ಮುಂದೆ ಗೆಲ್ಲೋದು ಗೊತ್ತು, ಕೌಂಟ್‍ಡೌನ್ ಸ್ಟಾಟ್ರ್ಸ್ ಎಂದು ಹೇಳಿದ್ದಾರೆ.

ಇಂದು ಡಿ ಬಾಸ್ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಸೆಲೆಬ್ರೆಟಿಗಳು, ಅಭಿಮಾನಿಗಳು ಸೇರಿದಂತೆ ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಕೋರುತ್ತಿದ್ದಾರೆ. ಅದೇ ರೀತಿ ನಟ ಪುನೀತ್ ರಾಜ್‍ಕುಮಾರ್ ಅವರು ಡಿ ಬಾಸ್ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.

ಡಿ ಬಾಸ್ 44ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳು ಸಿಡಿಪಿ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರುತ್ತಿದ್ದಾರೆ. ಅದೇ ರೀತಿ ನಟ, ನಟಿಯರು ಸಹ ಶುಭ ಕೋರುತ್ತಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟ್ವೀಟ್ ಮಾಡುವ ಮೂಲಕ ಶುಭ ಕೋರಿದ್ದಾರೆ. ಹ್ಯಾಪಿ ಬರ್ತ್ ಡೇ ದರ್ಶನ್ ಎಂದು ಟ್ವೀಟ್ ಮಾಡಿದ್ದಾರೆ. ಅಭಿಮಾನಿಗಳು ಈ ಟ್ವೀಟ್‍ನ್ನು ರೀಟ್ವೀಟ್, ಕಮೆಂಟ್ ಮಾಡುವ ಮೂಲಕ ಸಂಭ್ರಮಿಸುತ್ತಿದ್ದಾರೆ.

ಪ್ರತಿ ವರ್ಷ ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಸಾಗರವೇ ಅವರ ಮನೆ ಮುಂದೆ ನೆರೆದಿರುತ್ತಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಈ ಬಾರಿ ಅಭಿಮಾನಿಗಳೊಂದಿಗೆ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಬದಲಿಗೆ ಬಡವರಿಗೆ, ಅಸಹಾಯಕರಿಗೆ ನೆರವು ನೀಡುವ ಮೂಲಕ ಹುಟ್ಟುಹಬ್ಬ ಆಚರಿಸಿ. ನನ್ನ ಹುಟ್ಟುಹಬ್ಬಕ್ಕಾಗಿ ಅನವಶ್ಯಕವಾಗಿ ಖರ್ಚು ಮಾಡಬೇಡಿ ಎಂದು ದರ್ಶನ್ ಮನವಿ ಮಾಡಿದ್ದರು. ಈ ಹಿನ್ನೆಲೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಕೋರುತ್ತಿದ್ದಾರೆ.

Comments

Leave a Reply

Your email address will not be published. Required fields are marked *