ಒಂದ್ಕಡೆ ದೀಪಿಕಾ ಎಂಟ್ರಿ, ಮತ್ತೊಂದ್ಕಡೆ ರಣ್‍ವೀರ್ ಎಕ್ಸಿಟ್

– ಆಯುಷ್ಮಾನ್ ಫುಲ್ ಕನ್ಫ್ಯೂಸ್

ಮುಂಬೈ: ಬಾಲಿವುಡ್ ಕ್ಯೂಟ್ ಜೋಡಿಗಳಲ್ಲೊಂದಾದ ರಣ್‍ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸದಾ ಫನ್ನಿ ವಿಷಯಗಳಿಗೆ ಚರ್ಚೆ ಆಗುತ್ತಿರುತ್ತಾರೆ. ಪತ್ನಿ ದೀಪಿಕಾಗಾಗಿ ನಟ ಆಯುಷ್ಮಾನ್ ಖುರಾನಾ ಜೊತೆಗಿನ ಲೈವ್ ಚಾಟ್‍ನಿಂದ ರಣ್‍ವೀರ್ ಸಿಂಗ್ ಹೊರ ಬಂದಿದ್ದಾರೆ.

ಲಾಕ್‍ಡೌನ್ ಆದಾಗಿನಿಂದ ಹೋಮ್ ಕ್ವಾರಂಟೈನ್ ನಲ್ಲಿರೋ ಸೆಲೆಬ್ರಿಟಿಗಳ ಪೈಕಿ ಬಹುತೇಕರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಲಾಕ್‍ಡೌನ್ ವೇಳೆ ಮನೆಯಲ್ಲಿ ಮಾಡುತ್ತಿರುವ ಕೆಲಸಗಳ ಬಗ್ಗೆ ಅಪ್‍ಡೇಡ್ ನೀಡುತ್ತಿದ್ದಾರೆ. ಅದರಂತೆ ಗುಳಿಕೆನ್ನೆ ಮಸ್ತಾನಿ ಮತ್ತು ಬಾಜೀರಾವ್ ಮನೆಯಲ್ಲಿ ಬಂಧಿಯಾಗಿದ್ದು, ಜೊತೆಯಾಗಿ ಕ್ವಾಲಿಟಿ ಟೈಮ್ ಕಳೆಯುತ್ತಿದ್ದಾರೆ.

ಆಯುಷ್ಮಾನ್ ಖುರಾನಾ ಮತ್ತು ರಣ್‍ವೀರ್ ಸಿಂಗ್ ಇನ್‍ಸ್ಟಾಗ್ರಾಂನಲ್ಲಿ ಲೈವ್ ಚಾಟ್ ಮಾಡುತ್ತಿದ್ದಾರೆ. ಲಾಕ್‍ಡೌನ್ ಸಂಬಂಧ ಕುರಿತ ಚರ್ಚೆಯಲ್ಲಿ ಇಬ್ಬರು ಫುಲ್ ಬ್ಯುಸಿಯಾಗಿದ್ದರು. ಲೈವ್ ಮಧ್ಯೆ ದಿಢೀರ್ ಅಂತ ರಣ್‍ವೀರ್ ಸಿಂಗ್ ಬೈ ಹೇಳಲು ಆರಂಭಿಸಿದ್ರು. ಆಗ ಆಯುಷ್ಮಾನ್ ಯಾರಿಗೆ ಬೈ ಹೇಳ್ತಿದ್ದೀಯಾ ಎಂದು ಪ್ರಶ್ನಿಸಿದರು.

ಆಯುಷ್ಮಾನ ಪ್ರಶ್ನೆಗೆ ಉತ್ತರಿಸಿದ ರಣ್‍ವೀರ್, ನಿಮ್ಮ ಅತ್ತಿಗೆ (ದೀಪಿಕಾ) ಬೈಯುತ್ತಿದ್ದಾಳೆ. ಆಕೆ ಜೂಮ್ ನಲ್ಲಿ ಕರೆ ಮಾಡಿ ಮಾತನಾಡುತ್ತಿದ್ದು, ಕಿರುಚಾಡಬೇಡ ಎಂದು ಹೇಳುತ್ತಿದ್ದಾಳೆ. ಬೈ ಐ ಲವ್ ಯು ಅಂತಾ ಹೇಳಿ ಚಾಟ್‍ನಿಂದ ಹೊರ ಬಂದಿದ್ದಾರೆ. ಒಂದು ಕಡೆ ದೀಪಿಕಾ ಆನ್‍ಲೈನ್‍ಗೆ ಎಂಟ್ರಿಯಾಗುತ್ತಿದ್ದಂತೆ ಪತ್ನಿಗೆ ತೊಂದರೆ ನೀಡಬಾರದು ಅಂತಾ ರಣ್‍ವೀರ್ ತಮ್ಮ ಲೈವ್ ಚಾಟ್ ನಿಂದ ಎಕ್ಸಿಟ್ ಆಗಿದ್ದಾರೆ.

Comments

Leave a Reply

Your email address will not be published. Required fields are marked *