ಒಂದೇ ಗ್ರಾಮದ 2ಮನೆಯಲ್ಲಿ ಕಳ್ಳತನ- 60 ಸಾವಿರ ನಗದು, ಲಕ್ಷಾಂತರೂ ರೂ.‌ಮೌಲ್ಯದ ವಸ್ತು ಕಳವು

ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಹಲಗಣಿ ಗ್ರಾಮದಲ್ಲಿ ಎರಡು ಮನೆಗಳಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ.ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಸೇರಿ 60 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.

ಮಲ್ಲಪ್ಪ ಗುಣದಾಳ ಮನೆಯಲ್ಲಿ ಎರಡು ತೊಲ ಚಿನ್ನ ಹಾಗೂ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿದ್ದು, ರಾಮನ ಗೌಡ ಬಿರಾದಾರ ಮನೆಯಲ್ಲಿ ಒಂದು ತೊಲ ಚಿನ್ನ ಹಾಗೂ 60 ಸಾವಿರ ನಗದು ಕಳ್ಳತನ ಮಾಡಲಾಗಿದೆ.

ಕಳ್ಳರು 2 ಮನೆಯನ್ನು ದೋಚಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಹೊತ್ತು ಪರಾರಿಯಾಗಿದ್ದರೆ. ರಾತ್ರಿ ವೇಳೆ ಮನೆಯ ಮೇಲ್ಛಾವಣಿ ಮೇಲೆ ಮಲಗಿದ ವೇಳೆ ಕಳ್ಳರು ಕೈಚಳಕ ತೋರಿದ್ದು,ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *