ಒಂದು ಸಲ ಮದ್ವೆ ಆದ್ಮೇಲೆ ಯಾವತ್ತು ಮೋಸ ಮಾಡಲ್ಲ: ವೈಷ್ಣವಿ

ಬಿಗ್‍ಬಾಸ್ ಫಸ್ಟ್ ಇನ್ನಿಂಗ್ಸ್ ನಿಂದಲೂ ವೈಷ್ಣವಿ ಗೌಡ ದೊಡ್ಮನೆಯಲ್ಲಿ ಸಿಂಗಲ್ ಜರ್ನಿ ನಡೆಸುತ್ತಿದ್ದಾರೆ. ಸದ್ಯ ಸೆಕೆಂಡ್ ಇನ್ನಿಂಗ್ಸ್ ನಲ್ಲಿಯೂ ಅದೇ ಜರ್ನಿ ಮುಂದುವರೆಸಿರುವ ಅವರು, ಮದುವೆಯಾದ ಮೇಲೆ ಯಾವತ್ತು ಮೋಸ ಮಾಡಲ್ಲ ಎಂದಿದ್ದಾರೆ.

ಬಿಗ್ ಮನೆಯಲ್ಲಿ ಆಗಾಗ ವೈಷ್ಣವಿಯವರ ಮದುವೆ ವಿಚಾರ ಹರಿದಾಡುತ್ತಿರುತ್ತದೆ. ಅಲ್ಲದೇ ಮದುವೆ ಬಗ್ಗೆ ಬಹಳಷ್ಟು ಆಸೆ, ಕನಸು, ಒಳ್ಳೆಯ ಅಭಿಪ್ರಾಯ ಹೊಂದಿರುವ ವೈಷ್ಣವಿ ಗೌಡ, ಚಕ್ರವರ್ತಿ ಚಂದ್ರಚೂಡ್ ಅವರೊಂದಿಗೆ ತಮ್ಮ ಮದುವೆ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಚಕ್ರವರ್ತಿಯವರು ಅಡುಗೆ ಮನೆ ಕ್ಲೀನ್ ಮಾಡುವ ವೇಳೆ ನಿಮ್ಮಲ್ಲಿ ಒಂದು ದೈವಿಕ ಶಕ್ತಿ ಇದೆ, ಆದರೆ ಯಾಕೆ ಕೌಟುಂಬಿಕ ವ್ಯವಹಾರಕ್ಕೆ ಬೀಳುತ್ತಿದ್ದೀರಾ ಗೊತ್ತಿಲ್ಲ ಎನ್ನುತ್ತಾರೆ. ಆಗ ವೈಷ್ಣವಿ ಸರ್ ಪ್ಲೀಸ್.. ಹೊರಗಡೆ ಪ್ರಾಮಿಸ್ ಮಾಡಿ ಬಂದಿದ್ದೇನೆ ಈ ಬಾರಿ ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳುತ್ತಾರೆ.

ನಂತರ ಜೀವನದಲ್ಲಿ ಪ್ರತಿಯೊಂದನ್ನು ನೋಡಬೇಕು ಸರ್, ನಾನು ಕೊನೆಯುಸಿರೆಳೆಯುವಾಗ ನಾನು ಇದನ್ನು ಮಾಡಿಲ್ಲ. ಮಿಸ್ ಮಾಡಿಕೊಂಡೇ ಎಂದು ಯಾವುದು ಇರಬಾರದು ಲೈಫ್‍ನಲ್ಲಿ ಎಂದು ಹೇಳುತ್ತಾರೆ. ನೋಡಬೇಕು ಆದರೆ ನಿಮಗೆ ಅದರ ಅವಶ್ಯಕತೆ ಇಲ್ಲ. ಅದಕ್ಕೆ ಮದುವೆಯಾಗಲೇ ಬೇಕು ಎಂದು ಏನಾದರೂ ಇದ್ಯಾ ಎಂದು ಪ್ರಶ್ನಿಸುತ್ತಾರೆ. ಆಗ ಹೌದು ಮದುವೆನೇ ಆಗಬೇಕು ಎಂದು ವೈಷ್ಣವಿಯವರು ಉತ್ತರಿಸುತ್ತಾರೆ. ಸರಿ ನೋಡಿ ಯೋಚನೆ ಮಾಡಿ ಎಂದು ಚಕ್ರವರ್ತಿಯವರು ಹೇಳುತ್ತಿದ್ದಂತೆಯೇ ಮಾತು ಮರೆಸಲು ವೈಷ್ಣವಿಯವರು ನಾಳೆ ಅಡುಗೆಗೆ ಚಿಕನ್ ಮಾಡುತ್ತಿದ್ದಿರಾ ಎಂದು ಕೇಳುತ್ತಾರೆ. ನಾಳೆ ಚಿಕನ್‍ನೇ ಆದರೆ ವೈವಾಹಿಕ ಜೀವನ ನೋಡಿ ಯೋಚನೆ ಮಾಡಿ ಎಂದು ಮತ್ತೊಮ್ಮೆ ಚಕ್ರವರ್ತಿ ಅಣುಕಿಸುತ್ತಾರೆ.

ನಂತರ ನಿಮಗೆ ಚಿಕನ್ ಅಂದರೆ ಇಷ್ಟನಾ ಎಂದು ವೈಷ್ಣವಿ ಕೇಳಿದಾಗ, ನನಗೆ ಒಂದು ಕೋಳಿ ಹಾಗೂ ಕುರಿಗೆ ಹೇಗೆ ಕರುಣೆ ತೋರಿಸುತ್ತಾರೋ ಹಾಗೇ ಒಬ್ಬ ಹುಡುಗನ ಮೇಲೂ ಕೂಡ ಇರಲಿ ಎಂದಷ್ಟೇ ಎಂದು ಚಕ್ರವರ್ತಿ ಹೇಳಿದಾಗ, ವೈಷ್ಣವಿ ಒಂದಂತೂ ಸತ್ಯ ಒಂದು ಸಲ ಮದುವೆಯಾದ ನಂತರ ಬಿಟ್ಟು ಹೋಗುವುದು ಹಾಗೆಲ್ಲಾ ಯಾವತ್ತು ಮೋಸ ಮಾಡಲ್ಲ. ಖಂಡಿತ ಅವನು ಚೆನ್ನಾಗಿರಬೇಕು ನನ್ನಿಂದ, ಅಷ್ಟು ಮಾತ್ರ ನಾನು ನೋಡಿಕೊಳ್ಳುತ್ತೇನೆ ಎಂದಿದ್ದಾರೆ.

ಹಾಗಾದ್ರೆ ಗಂಡು ನೋಡುತ್ತೀದ್ದಾರಾ ನಿಮಗೆ ಎಂದಾಗ, ಯಾಕ್ ಸರ್ ನನ್ನ ಬಾಯಿಯಲ್ಲಿ ಏನೇನೋ ಬರಿಸುತ್ತೀರಾ? ನಾನು ಅದರ ಬಗ್ಗೆ ನಾನು ಮಾತನಾಡಲ್ಲ. ಕಾಲ ಕೂಡಿ ಬಂದಾಗ ಅದು ಆಗುತ್ತದೆ ಎಂದು ಹೇಳುತ್ತಾ ನಗುತ್ತಾರೆ. ಇದನ್ನೂ ಓದಿ: ಸಲಾರ್ ಸಿನಿಮಾಕ್ಕಿದೆ ಮೈಸೂರಿನ ಲಿಂಕ್

Comments

Leave a Reply

Your email address will not be published. Required fields are marked *