ಐಪಿಎಲ್ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಆಟಗಾರರು ಆಡುವುದು ಕನ್ಫರ್ಮ್

ಲಂಡನ್: ದುಬೈನಲ್ಲಿ ನಡೆಯಲಿರುವ 14ನೇ ಆವೃತ್ತಿಯ ಸೆಕೆಂಡ್ ಇನ್ನಿಂಗ್ಸ್ ಐಪಿಎಲ್‍ನಲ್ಲಿ ಇಂಗ್ಲೆಂಡ್ ಆಟಗಾರರು ಆಡುವುದು ಖಚಿತಗೊಂಡಿದೆ.

ಕೊರೊನಾದಿಂದಾಗಿ ಮುಂದೂಡಲ್ಪಟ್ಟ 2021ರ ಐಪಿಎಲ್‍ನ್ನು ದುಬೈನಲ್ಲಿ ನಡೆಸಲು ಬಿಸಿಸಿಐ ಡೇಟ್ ಫಿಕ್ಸ್ ಮಾಡಿದೆ. ಈ ನಡುವೆ ಕೆಲ ವಿದೇಶಿ ಆಟಗಾರರು ಭಾಗವಹಿಸುವುದು ಅನುಮಾನವಾಗಿತ್ತು. ಆದರೆ ಇದೀಗ ಇಂಗ್ಲೆಂಡ್‍ನ ಆಟಗಾರರು ಭಾಗವಹಿಸುವುದು ಖಚಿತಗೊಂಡಿದೆ ಎಂದು ಬಿಸಿಸಿಐ ತಿಳಿಸಿದೆ. ಇದನ್ನೂ ಓದಿ: ಕೆಪಿಎಲ್‍ನಲ್ಲಿ ಆಡದಂತೆ ಬಿಸಿಸಿಐ ನನಗೆ ಬೆದರಿಕೆ ಹಾಕುತ್ತಿದೆ: ಹರ್ಷಲ್ ಗಿಬ್ಸ್ ಆರೋಪ

ಐಪಿಎಲ್‍ನ ಮುಂದಿನ ಪಂದ್ಯಾಟಗಳು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಯುಎಇನಲ್ಲಿ ನಡೆಯಲಿದೆ. ಈ ಹಿಂದೆ ಇತರ ದೇಶಗಳ ಆಟಗಾರರು ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆಡುವ ಕಾರಣ ಟೂರ್ನಿಯಲ್ಲಿ ಕಾಣಿಸಿಕೊಳ್ಳುವುದು ಅನುಮಾನವಾಗಿತ್ತು. ಆದರೆ ಇದೀಗ ನ್ಯೂಜಿಲೆಂಡ್, ಇಂಗ್ಲೆಂಡ್ ತಂಡದ ಆಟಗಾರರು ಬರುವುದು ಕನ್ಫರ್ಮ್ ಆಗಿದೆ. ಉಳಿದಂತೆ ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶದ ಆಟಗಾರರು ಭಾಗವಹಿಸುವ ಬಗ್ಗೆ ಅನುಮಾನಗಳಿದೆ.

ಸೆಪ್ಟೆಂಬರ್ 19ರಂದು ಟೂರ್ನಿ ಆರಂಭವಾಗಲಿದ್ದು, ಅಕ್ಟೋಬರ್ 15ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಸಿಎಸ್‍ಕೆ ಮತ್ತು ಮುಂಬೈ ತಂಡಗಳು ಕಾದಾಡಳಿದೆ.

Comments

Leave a Reply

Your email address will not be published. Required fields are marked *