ಐಪಿಎಲ್ ಬೆಟ್ಟಿಂಗ್ ದಂಧೆ – 6 ಮಂದಿ ಬಂಧನ, ಆರು ಲಕ್ಷ ವಶಕ್ಕೆ

ಬೆಂಗಳೂರು: ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಆರು ಮಂದಿಯನ್ನು ಬೆಂಗಳೂರು ಕ್ರೈಮ್ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ.

ಪ್ರಪಂಚದ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ ಸೆಪ್ಟೆಂಬರ್ 19ರಿಂದ ಆರಂಭವಾಗಿದೆ. ಈಗಾಗಲೇ ನಾಲ್ಕು ಪಂದ್ಯಗಳು ಮುಗಿದಿವೆ. ಇದರ ಜೊತೆಗೆ ಐಪಿಎಲ್ ಬೆಟ್ಟಿಂಗ್ ದಂಧೆಗಳು ಕೂಡ ಆರಂಭವಾಗಿವೇ. ತಡರಾತ್ರಿ ಐಪಿಎಲ್ ದಂಧೆಯಲ್ಲಿ ತೊಡಗಿದ್ದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ತಡರಾತ್ರಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಆರು ಮಂದಿಯನ್ನು ನಾವು ಬಂಧಿಸಿದ್ದೇವೆ. ಈ ವೇಳೆ ಬೆಟ್ಟಿಂಗ್ ದಂಧೆಗೆ ಬಳಸುತ್ತಿದ್ದ ಆರು ಲಕ್ಷವನ್ನು ನಾವು ವಶಕ್ಕೆ ಪಡೆದಿದ್ದೇವೆ. ಈ ಘಟನೆಗೆ ಸಂಬಂಧಿಸಿದಂತೆ ಬಾನಸವಾಡಿ ಮತ್ತು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಐಪಿಎಲ್ ಕಾವು ಈಗಾಗಲೇ ಹೆಚ್ಚಾಗಿದೆ. ಕೊರೊನಾ ಕಾರಣದಿಂದ ಭಾರತದಲ್ಲಿ ನಡೆಯಬೇಕಿದ್ದ ಐಪಿಎಲ್ ಯುಇಗೆ ಶಿಫ್ಟ್ ಆಗಿದೆ. ಯುಎಇಯ ಮೂರು ಮೈದಾನದಲ್ಲಿ ಐಪಿಎಲ್ ನಡೆಯುತ್ತಿದೆ. ನಿನ್ನೆ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ತಂಡಗಳು ಮುಖಾಮುಖಿಯಾಗಿದ್ದವು, ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ರಾಯಲ್ಸ್ ತಂಡ 16 ರನ್‍ಗಳ ಅಂತರದಲ್ಲಿ ಗೆಲುವನ್ನು ದಾಖಲಿಸಿದೆ. ಇಂದು ಕೋಲ್ಕತ್ತಾ ಮತ್ತು ಮುಂಬೈ ತಂಡ ಐಪಿಎಲ್ 5ನೇ ಪಂದ್ಯವನ್ನು ಆಡಲಿವೆ.

Comments

Leave a Reply

Your email address will not be published. Required fields are marked *