ಐಪಿಎಲ್ ಆರಂಭಕ್ಕೂ ಮೊದಲೇ ಆರ್​ಸಿಬಿ ತಂಡದಿಂದ ಆಲ್‍ರೌಂಡರ್ ಔಟ್

ಬೆಂಗಳೂರು: ಕೊರೊನಾದಿಂದಾಗಿ ಮೂಂದೂಡಲ್ಪಟ್ಟ 14ನೇ ಆವೃತ್ತಿಯ ಐಪಿಎಲ್‍ಗೆ ಬಿಸಿಸಿಐ ಈಗಾಗಲೇ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ನಡುವೆ ಆರ್​ಸಿಬಿ  ತಂಡದ ಸ್ಟಾರ್ ಆಲ್‍ರೌಂಡರ್ ಈ ಬಾರಿಯ ಸೆಕೆಂಡ್ ಇನ್ನಿಂಗ್ ಐಪಿಎಲ್‍ನಿಂದ ಹೊರಗುಳಿಯುವುದಾಗಿ ವರದಿಯಾಗಿದೆ.

ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದ ಯುವ ಆಟಗಾರ, ವಾಷಿಂಗ್ಟನ್ ಸುಂದರ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಇದೀಗ ದುಬೈನಲ್ಲಿ ನಡೆಯಲಿರುವ ದ್ವೀತಿಯ ಆವೃತ್ತಿಯ ಐಪಿಎಲ್‍ನಿಂದ ಕೂಡ ಹೊರ ಬಿದ್ದಿದ್ದಾರೆ. ಇದರಿಂದ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಲ್‍ರೌಂಡರ್ ಸೇವೆಯಿಂದ ವಂಚಿತವಾಗಿದೆ.

ಸುಂದರ್, ಭಾರತ ಹಾಗೂ ಕೌಂಟಿ ಇಲೆವೆನ್ ತಂಡಗಳ ನಡುವಿನ ಅಭ್ಯಾಸ ಪಂದ್ಯದಲ್ಲಿ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಬಳಿಕ ಭಾರತಕ್ಕೆ ಮರಳಿದ್ದಾರೆ. ಇದೀಗ ವೈದ್ಯರು ತಿಳಿಸಿರುವಂತೆ 6 ವಾರಕ್ಕೂ ಹೆಚ್ಚು ಕಾಲ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಹಾಗಾಗಿ ಬಿಸಿಸಿಐ, ಸುಂದರ್ ಅವರು ಈ ಬಾರಿ ಐಪಿಎಲ್‍ನ ಮುಂದಿನ ಪಂದ್ಯದಲ್ಲಿ ಆಡದೆ ಇರಲು ಸೂಚಿಸಿದ್ದೇವೆ. ಅವರು ಮುಂದಿನ ಟಿ20 ವಿಶ್ವಕಪ್ ವೇಳೆ ಫಿಟ್ ಆಗಿ ಭಾರತ ತಂಡಕ್ಕೆ ಮರಳಿ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದೆ. ಇದನ್ನೂ ಓದಿ: ಸೆಪ್ಟೆಂಬರ್‌ನಿಂದ ನಡೆಯಲಿವೆ ಮುಂದೂಡಲ್ಪಟ್ಟ ಐಪಿಎಲ್ ಪಂದ್ಯಗಳು- ಬಿಸಿಸಿಐ ಘೋಷಣೆ

ಬಿಸಿಸಿಐ ಈ ನಿರ್ಧಾರದಿಂದ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 15ರವರೆಗೆ ನಡೆಯಲಿರುವ ಐಪಿಎಲ್‍ನಲ್ಲಿ ಆರ್​ಸಿಬಿ ತಂಡ ಸ್ಟಾರ್ ಆಟಗಾರರನ್ನು ಕಳೆದುಕೊಂಡಂತಾಗಿದೆ. ಆರ್​ಸಿಬಿ ಪರ ವಾಷಿಂಗ್ಟನ್ ಸುಂದರ್ 42 ಪಂದ್ಯಗಳಿಂದ 217ರನ್ ಮತ್ತು 27 ವಿಕೆಟ್ ಪಡೆದು ಮಿಂಚಿದ್ದರು. ಆದರೆ ಇದೀಗ ತಂಡದಿಂದ ಹೊರಬಿದ್ದಿರುವುದು ಆರ್​ಸಿಬಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ.

Comments

Leave a Reply

Your email address will not be published. Required fields are marked *