ಬೆಂಗಳೂರು: ಐಪಿಎಲ್ ಎಂದರೆ ಕ್ರಿಕೆಟ್ ಪ್ರೇಮಿಗಳ ಹಬ್ಬ. ಇಲ್ಲಿ ಬೌಲರ್ ಗಿಂತ ಬ್ಯಾಟ್ಸ್ ಮ್ಯಾನ್‍ಗಳು ಹೆಚ್ಚು ಕಾರುಬಾರು ಮಾಡುತ್ತಾರೆ. ಅದೇ ರೀತಿ ಐಪಿಎಲ್‍ನಲ್ಲಿ ರನ್ ಮಳೆ ಸುರಿಸುವ ಆಟಗಾರರನ್ನು ಒಳಗೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಾವುದೇ ತಂಡ ಮಾಡದೆ ಇರುವುವಂತಹ ದಾಖಲೆಯೊಂದನ್ನು ನಿರ್ಮಿಸಿ ಅಭಿಮಾನಿಗಳ ಮನಗೆದ್ದಿದೆ.

ಈಗಾಗಲೇ 13 ಸೀಸನ್‍ಗಳನ್ನು ಕಂಡಿರುವ ಐಪಿಎಲ್ ಅದೇಷ್ಟೋ ದಾಖಲೆಗಳು ನಿರ್ಮಾಣವಾಗಿದೆ. ಅದರಲ್ಲಿ ಒಂದು ತಂಡವೊಂದು ಅತೀ ಹೆಚ್ಚು ಶತಕ ಬಾರಿಸಿದ ಕೀರ್ತಿಗೆ ಪಾತ್ರವಾಗಿದೆ. ಅದೂ ಕೂಡ ಐಪಿಎಲ್‍ನಲ್ಲಿ ಇದುವರೆಗೂ ಕಪ್ ಗೆಲ್ಲದ ಆರ್ಸಿಬಿ ತಂಡ ಶತಕಗಳ ಸಾಧನೆಯಲ್ಲಿ ಎಲ್ಲಾ ತಂಡಗಳಿಗಿಂತ ಮುಂದಿದೆ. ಈ ಮೂಲಕ ಐಪಿಎಲ್‍ನಲ್ಲಿ ಅತೀ ಹೆಚ್ಚು 14 ಶತಕ ಸಿಡಿಸಿ ದಾಖಲೆ ಮಾಡಿದೆ.

2008ರಿಂದ ಪ್ರಾರಂಭವಾದ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಆರ್ಸಿಬಿ ತಂಡ ಒಟ್ಟು 14 ಶತಕ ಸಿಡಿಸಿದೆ. ತಂಡದ ನಾಯಕ ವಿರಾಟ್ ಕೊಹ್ಲಿ ಆರ್ಸಿಬಿ ಪರ 5 ಶತಕ ಸಿಡಿಸಿದರೆ. ಅದೇ ತಂಡದಲ್ಲಿದ್ದ ಕ್ರೀಸ್ ಗೇಲ್ 4 ಶತಕ, ಎಬಿಡಿ ವಿಲಿಯರ್ಸ್ 3 ಶತಕ, ಮನೀಶ್ ಪಾಂಡೆ 1 ಶತಕ ಮತ್ತು ದೇವದತ್ ಪಡಿಕ್ಕಲ್ 1 ಶತಕ ಬಾರಿಸಿ ಒಟ್ಟು 14 ಶತಕ ಬಾರಿಸುವ ಮೂಲಕ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ.

ಶತಕಗಳ ಸಾಧನೆಯಲ್ಲಿ 11 ಶತಕ ಸಿಡಿಸಿರುವ ಪಂಜಾಬ್ ತಂಡ 2ನೇ ಸ್ಥಾನ ಪಡೆದುಕೊಂಡಿದೆ. ಪಂಜಾಬ್ ಪರ ಕ್ರೀಸ್ ಗೇಲ್ ಮತ್ತು ಆಶೀಮ್ ಆಮ್ಲ ತಲಾ 2 ಶತಕ ಬಾರಿಸಿದರೆ, ಶಾನ್ ಮಾರ್ಷ್, ಮಹೇಲಾ ಜಯವರ್ಧನೆ, ಪೌಲ್ ವಾಲ್‍ತಾಟಿ, ಆ್ಯಡಮ್ ಗಿಲ್‍ಕ್ರಿಸ್ಟ್, ಡೇವಿಡ್ ಮಿಲ್ಲರ್, ವಿರೇಂದ್ರ ಸೆಹ್ವಾಗ್, ವೃದ್ದಿಮಾನ್ ಸಹಾ, ಮತ್ತು ಕೆ.ಎಲ್ ರಾಹುಲ್ ತಲಾ ಒಂದು ಶತಕ ಸಿಡಿಸುವ ಮೂಲಕ ಪಂಜಾಬ್ ತಂಡ ಒಟ್ಟು 11 ಶತಕಗಳ ಸಾಧನೆ ಮಾಡಿದೆ.

ಈ ಪಟ್ಟಿಯಲ್ಲಿ 3ನೇ ಸ್ಥಾನವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಡೆದುಕೊಂಡಿದ್ದು, 6 ಆಟಗಾರರು ಚೆನ್ನೈ ಪರ ಶತಕ ಸಿಡಿಸಿದ್ದಾರೆ. ಚೆನ್ನೈ ತಂಡ ಒಟ್ಟು 8 ಶತಕಗಳನ್ನು ಸಿಡಿಸಿ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.
ನಂತರ ಡೆಲ್ಲಿ ತಂಡ 7 ಶತಕ, ರಾಜಸ್ಥಾನ ತಂಡ 6 ಶತಕ, ಮುಂಬೈ ತಂಡ 4 ಶತಕ ಮತ್ತು ಹೈದರಾಬಾದ್ ತಂಡದ ಪರ 3 ಶತಕಗಳು ದಾಖಲಾಗಿದೆ.

Leave a Reply