5 ವರ್ಷದ ಬಾಲಕನಿಗೆ ಮಠದ ಉತ್ತರಾಧಿಕಾರಿ ಪಟ್ಟ

ಕಲಬುರಗಿ: ಕಾಳಗಿ ಸಂಸ್ಥಾನ ಮಠದ ಹೀರೆಮಠದ ಶಿವಬಸವ ಶಿವಾಚಾರ್ಯ ಸ್ವಾಮೀಜಿ ಅವರ ಪೀಠಕ್ಕೆ ಐದು ವರ್ಷದ ಬಾಲಕನನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಲಾಗಿದೆ.

ಕಾಳಗಿ ಪಟ್ಟಣದಲ್ಲಿರುವ ಮಠದ ಈ ಹಿಂದಿನ ಪೀಠಾಧಿಪತಿಗಳಾದ ಶಿವಬಸವ ಶಿವಾಚಾರ್ಯ ಸ್ವಾಮೀಜಿ ಮಂಗಳವಾರ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದರು. ಹೀಗಾಗಿ ಮಠದ ಪೀಠಾಧಿಪತಿಯ ಉತ್ತರಾಧಿಕಾರಿ ಸ್ಥಾನ ಖಾಲಿ ಬಿಡುವಂತಿಲ್ಲ. ಹೀಗಾಗಿ ಲಿಂಗೈಕ್ಯರಾಗಿರುವ ಸ್ವಾಮೀಜಿ ಅವರ ಪೂರ್ವಾಶ್ರಮದ ಸಹೋದರನ ಪುತ್ರನಾದ ಐದು ವರ್ಷದ ನೀಲಕಂಠಯ್ಯಸ್ವಾಮಿ ಹಿರೇಮಠರನ್ನು ಮಠದ ಪೀಠಾಧಿಪತಿಯಾಗಿ ನೇಮಕ ಮಾಡಲಾಗಿದೆ. ಇದನ್ನೂ ಓದಿ : ಹೆಣ್ಣು ಮಗು ಹುಟ್ಟಿದ್ದಕ್ಕೆ ದೇವಸ್ಥಾನದಲ್ಲೇ ಬಿಟ್ಟು ಹೋದ್ರು!

ಅನೇಕ ಸ್ವಾಮೀಜಿಗಳ ಸಮ್ಮುಖದಲ್ಲಿ ಉತ್ತರಾಧಿಕಾರಿ ಪಟ್ಟದ ಪ್ರಕ್ರಿಯೆ ನಡೆಯಿತು. ಎಲ್ಲಾ ಕಾರ್ಯಕ್ರನಗಳ ನಂತರ ಬಾಲಕನನ್ನು ಮಠದ ಉತ್ತರಾಧಿಕಾರಿ ಮಾಡಿರುವುದಾಗಿ ಸ್ವಾಮೀಜಿಗಳು ಅಧಿಕೃತವಾಗಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *