ಐಟಿ ಕಾಯ್ದೆಯ ಸೆಕ್ಷನ್ 66ಎ ಅಡಿಯಲ್ಲಿ ಇನ್ನೂ ಕೇಸ್ ದಾಖಲಿಸುತ್ತಿರುವುದು ಆಘಾತಕಾರಿ – ಸುಪ್ರೀಂಕೋರ್ಟ್

– ಕೇಂದ್ರಕ್ಕೆ ನೋಟಿಸ್ ನೀಡಿದ ಸುಪ್ರೀಂ

ನವದೆಹಲಿ: ಅಸಿಂಧುಗೊಳಿಸಿದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಎ ಅಡಿಯಲ್ಲಿ ಪೊಲೀಸರು ಇನ್ನೂ ಪ್ರಕರಣಗಳನ್ನು ದಾಖಲಿಸುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಆಘಾತ ವ್ಯಕ್ತಪಡಿಸಿದೆ.

2015 ಮಾರ್ಚ್ ನಲ್ಲಿ ಸುಪ್ರೀಂಕೋರ್ಟ್ ಅಸಿಂಧುಗೊಳಿಸಿದ ಕಾನೂನು ಅಡಿ ಪೊಲೀಸರು ದಾಖಲಿಸುತ್ತಿದ್ದ ದೂರುಗಳನ್ನು ಪ್ರಶ್ನಿಸಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಂದು ಆತಂಕ ವ್ಯಕ್ತಪಡಿಸಿತು.

ಈ ಕಾನೂನು ರದ್ದುಪಡಿಸುವ ಮುನ್ನ ದೇಶದ್ಯಾಂತ 687 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಆದರೆ ಈ ಕಾನೂನು ರದ್ದಾದ ಬಳಿಕ ಪೊಲೀಸರು 1,307 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಎನ್‍ಜಿಓ ಪರವಾಗಿ ಸಂಜಯ್ ಪಾರಿಖ್ ವಾದ ಮಂಡಿಸಿದರು.

ವಿಚಾರಣೆ ವೇಳೆ ಮಾಹಿತಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾ. ಆರ್.ಎಫ್.ನಾರಿಮನ್ ನೇತೃತ್ವದ ದ್ವಿ ಸದಸ್ಯ ಪೀಠ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಎ ಅಡಿಯಲ್ಲಿ ದೇಶಾದ್ಯಂತ ಪೊಲೀಸರು ಇನ್ನೂ ಪ್ರಕರಣಗಳನ್ನು ದಾಖಲಿಸುತ್ತಿರುವುದು ಆಘಾತಕಾರಿ, ದುಃಖಕರ ಮತ್ತು ಆಶ್ಚರ್ಯಕರವಾಗಿದೆ ಎಂದು ಹೇಳಿದೆ.

ಇದೇ ವೇಳೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್, ಈ ಕಾನೂನು ಬಳಕೆಯ ಕೆಳಗೆ ಸುಪ್ರೀಂಕೋರ್ಟ್ ಈ ಕಾನೂನು ಅಸಿಂಧುಗೊಳಿಸಿರುವ ಬಗ್ಗೆ ಚಿಕ್ಕದಾದ ಅಡಿ ಟಿಪ್ಪಣಿ ಬರೆದಿರಲಾಗಿರುತ್ತದೆ. ಆದರೆ ಅದನ್ನು ಪೊಲೀಸರು ಗಮನಿಸುವುದಿಲ್ಲ ಎಂದು ಹೇಳಿದ್ದಾರೆ.

ವಾದ ಆಲಿಸಿದ ಬಳಿಕ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ನಾವು ಈ ಬಗ್ಗೆ ಏನಾದರೂ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟರೆ ಪರಿಹಾರ ನೀಡಿ – ಸುಪ್ರೀಂ ಮಹತ್ವದ ಆದೇಶ

ಸಾಮಾಜಿಕ ಜಾಲತಾಣಗಳಲ್ಲಿ ವಿವಾದಿತ ಪೊಸ್ಟ್ ಹಾಕುವ ವ್ಯಕ್ತಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಬಗ್ಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಎ ಕಾನೂನು ಸೂಚಿಸುತ್ತದೆ. ಇದನ್ನೂ ಓದಿ: 18 ವರ್ಷ ಮೇಲ್ಪಟ್ಟವರು ತಮ್ಮ ಧರ್ಮವನ್ನು ತಾವೇ ಆಯ್ಕೆ ಮಾಡಲು ಅರ್ಹರು: ಸುಪ್ರೀಂ ಕೋರ್ಟ್

Comments

Leave a Reply

Your email address will not be published. Required fields are marked *