ಏಳು ದಿನಗಳ ವಿಭಿನ್ನ, ಕಠಿಣ ಲಾಕ್‍ಡೌನ್ ಹೇಗಿರುತ್ತೆ?

ಬೆಂಗಳೂರು: ಲಾಕ್‍ಡೌನ್‍ನಿಂದ ಯಾರಿಗೂ ತೊಂದರೆ ಆಗಬಾರದು ಎಂಬ ಕಾರಣಕ್ಕೆ ನಾಳೆ ಮತ್ತು ನಾಡಿದ್ದು ಸಂಜೆಯವರೆಗೂ ಬೆಂಗಳೂರು ಮಂದಿಗೆ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು, ಊರಿಗೆ ಹೋಗೋರಿದ್ರೆ ಹೋಗಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

ಬೆಂಗಳೂರಿಗೆ ಬರೋರಿಗೆ, ಬೆಂಗಳೂರಿಂದ ಹೋಗೋರಿಗೆ ಯಾವುದೇ ಅಡ್ಡಿ ಮಾಡಲ್ಲ. ಆದರೆ ಲಾಕ್‍ಡೌನ್ ಶುರುವಾದ ನಂತರ ಓಡಾಟ ಇರಬಾರದು. ಜನ ಮನೆಯಲ್ಲೇ ಇರಬೇಕು ಎಂದು ಸಚಿವ ಅಶೋಕ್ ಸರ್ಕಾರದ ಪರವಾಗಿ ಮನವಿ ಮಾಡಿಕೊಂಡಿದ್ದಾರೆ. ನಾಳೆ ಸಂಜೆ ಹೊತ್ತಿಗೆ ಲಾಕ್‍ಡೌನ್ ಮಾರ್ಗಸೂಚಿಯನ್ನು ಪ್ರಕಟಿಸಲು ಸರ್ಕಾರ ತೀರ್ಮಾನಿಸಿದೆ. ಮುಂದಿನ ಏಳು ದಿನಗಳ ಕಾಲ ಲಾಕ್ ಡೌನ್ ಸಂಪೂರ್ಣ ವಿಭಿನ್ನ ಹಾಗೂ ಕಠಿಣವಾಗಿರುತ್ತೆ ಎಂದು ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಎಂದು ಸ್ಪಷ್ಟಪಡಿಸಿದ್ದಾರೆ.

ಲಾಕ್‍ಡೌನ್ ಮಾರ್ಗಸೂಚಿಯಲ್ಲಿ ಹೊಸ ಅಂಶ ಏನಿರಬಹುದು?

ಸಾಧ್ಯತೆ 1: ತುರ್ತು, ಅಗತ್ಯ ಸಂದರ್ಭಗಳಲ್ಲಿ ಓಡಾಡಲು ಪಾಸ್ ಬೇಕಿಲ್ಲ. ಅಗತ್ಯ ವಸ್ತುಗಳ ಸಾಗಾಟಕ್ಕೂ ಸರ್ಕಾರದ ಪಾಸ್ ಇಲ್ಲ. ಐಡಿ ಕಾರ್ಡ್ ತೋರಿಸಿ ಬೆಂಗಳೂರಿಗೆ ಎಂಟ್ರಿ ಆಗಬಹುದು
ಸಾಧ್ಯತೆ 2: ಲಾಕ್‍ಡೌನ್ ಅವಧಿಯಲ್ಲಿ ವೈದ್ಯಕೀಯ ಉತ್ಪನ್ನ, ಔಷಧಿ ಕಾರ್ಖಾನೆ ತೆರೆಯಲು ಅವಕಾಶ. ದೈನಂದಿನ, ಅಗತ್ಯ ಆಹಾರ ವಸ್ತುಗಳ ಉತ್ಪಾದನಾ ಘಟಕಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಸಾಧ್ಯತೆ 3: ಅಗತ್ಯ ವಸ್ತು ಖರೀದಿಸಲು ಪ್ರತ್ಯೇಕ ಸಮಯ ನಿಗದಿ ಮಾಡಬಹುದು. ಮನೆಯಿಂದ 1 ಕಿ.ಮೀ ವ್ಯಾಪ್ತಿಯಲ್ಲಿ ಖರೀದಿಗೆ ಅವಕಾಶ ನೀಡಬಹುದು.
ಸಾಧ್ಯತೆ 4: ಅನಗತ್ಯವಾಗಿ ಓಡಾಡಿದ್ರೆ ಎನ್‍ಡಿಎಂಎ ಕಾಯ್ದೆಯಡಿ ಕೇಸ್ ಹಾಕಲು ಪ್ಲಾನ್. ಲಾಕ್‍ಡೌನ್ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ರೆ ವಾಹನ ಸೀಜ್ ಮಾಡೋದು ಬಹುತೇಕ ಪಕ್ಕಾ.

Comments

Leave a Reply

Your email address will not be published. Required fields are marked *