ಎಷ್ಟು ದಿನ ಅಂತ ನಾನು ಮುಖವಾಡ ಹಾಕಿಕೊಳ್ಳಲಿ: ಅರವಿಂದ್

ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಡುವ ಸ್ಪರ್ಧಿಗಳಲ್ಲಿ ಕೆಲವರು ಮುಖವಾಡ ಹಾಕಿಕೊಂಡು ನಟಿಸಿದರೆ, ಇನ್ನೂ ಕೆಲವರು ತಾವು ಇದ್ದಂತೆಯೇ ಸಹಜ ರೀತಿಯಲ್ಲಿ ವರ್ತಿಸುತ್ತಾರೆ. ಸದ್ಯ ಬಿಗ್‍ಬಾಸ್ ಮನೆಯಲ್ಲಿ ಅರವಿಂದ್ ತಾವು ಮುಖವಾಡ ಧರಿಸಿರುವುದರ ಬಗ್ಗೆ ಬಹಿರಂಗವಾಗಿ ಕ್ಯಾಮೆರಾ ಮುಂದೆ ಹೇಳಿದ್ದಾರೆ.

ಗಾರ್ಡನ್ ಏರಿಯಾದಲ್ಲಿ ಶುಭಾ ಪೂಂಜಾ, ಮಂಜು, ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್ ಕುಳಿತುಕೊಂಡು ಮಾತನಾಡುತ್ತಿರುತ್ತಾರೆ. ಈ ವೇಳೆ ಶುಭಾ ಮಂಜುಗೆ ನೀನು ಗೋಂಗ್ರು ಕಪ್ಪೆ ತರ ಇದ್ಯಾ ಎನ್ನುತ್ತಾರೆ. ಆಗ ದಿವ್ಯಾ ಉರುಡುಗ ನಮ್ಮ ಊರಿನಲ್ಲಿ ಅದನ್ನು ಡೋಂಕ್ರು ಕಪ್ಪೆ ಎಂದು ಕರೆಯುತ್ತಾರೆ ಎಂದು ಹೇಳಿತ್ತಾರೆ.

ಈ ವೇಳೆ ಸ್ವಿಮಿಂಗ್ ಪೂಲ್‍ನಲ್ಲಿ ಈಜುತ್ತಿದ್ದ ಅರವಿಂದ್‍ಗೆ ಶುಭಾ, ಇಲ್ಲಿ ನೋಡು ಅರವಿಂದ್ ನಾನು ಏನಾದರೂ ಹೇಳಿದರೆ ನಮ್ಮ ಊರಿನಲ್ಲಿ ಹೀಗೆ, ಹಾಗೆ ಅಂತಾಳೆ ಎಂದು ಕಂಪ್ಲೇಂಟ್ ಮಾಡುತ್ತಾರೆ. ನಿಜವಾಗಿಯೂ ನಮ್ಮ ಕಡೆ ದಪ್ಪಗಿರುವ ಕಪ್ಪೆಗೆ ಡೋಂಕ್ರು ಕಪ್ಪೆ ಎಂದು ಕರೆಯುತ್ತಾರೆ. ಸರಿ ಕಪ್ಪೆ ಇನ್ನೂ ಚಿಕ್ಕದಾಗಿರುವಾಗ ಅದಕ್ಕೆ ಏನೆಂದು ಕರೆಯುತ್ತಾರೆ ಎಂದು ದಿವ್ಯಾ ಉರುಡುಗ ಮಂಜುಗೆ ಕೇಳುತ್ತಾರೆ.

ಇದಕ್ಕೆ ಮಂಜು ನಮ್ಮ ಕಡೆ ಆ ಕಪ್ಪೆಗೆ ದಿವ್ಯಾ ಉರುಡುಗ ಎಂದು ಕರೆಯುತ್ತೇವೆ ಎನ್ನುತ್ತಾರೆ. ಈ ವೇಳೆ ಅರವಿಂದ್ ಚಪ್ಪಾಳೆ ತಟ್ಟುತ್ತಾ ನಗುತ್ತಾರೆ. ಆಗ ದಿವ್ಯಾ ಉರುಡುಗ ನನ್ನನ್ನು ಕಪ್ಪೆ ಅಂದಿದ್ದಕ್ಕೆ ಸೆಲೆಬ್ರೆಟ್ ಮಾಡುತ್ತಿದ್ದಾರಾ ಎಂದಾಗ ಮಂಜು, ಸತ್ಯ ಹೇಳಿದರೆ ನಮ್ಮ ಹುಡುಗ ತುಂಬಾ ಎಕ್ಸೈಟ್ ಆಗಿಬಿಡುತ್ತಾನೆ. ಸತ್ಯ ಅವನ ಮನಸ್ಸಿನಲ್ಲಿಯೂ ಇಟ್ಟುಕೊಳ್ಳುವುದಕ್ಕೆ ಆಗುವುದಿಲ್ಲ. ಅವನು ಎಷ್ಟು ದಿನ ಅಂತ ಕಂಟ್ರೋಲ್ ಮಾಡುತ್ತಾನೆ. 107 ದಿನಗಳಲ್ಲಿ ಇಷ್ಟು ಯಾವತ್ತು ಅರವಿಂದ್ ನಕ್ಕಿರಲಿಲ್ಲ ಎಂದು ಮಂಜು ಹೇಳುತ್ತಾರೆ.

ಈ ವೇಳೆ ಅರವಿಂದ್ ಎಷ್ಟು ದಿನ ಅಂತ ನಾನು ಮುಖವಾಡ ಹಾಕಿಕೊಳ್ಳಲಿ ಎಂದು ಹೇಳುತ್ತಾರೆ. ಈ ವೇಳೆ ಎಲ್ಲರೂ ಜೋರಾಗಿ ನಕ್ಕರೆ, ದಿವ್ಯಾ ಉರುಡುಗ, ಓ ಮೈ ಗಾಡ್ ಎಂದು ಹೇಳಿ ನಗುತ್ತಾರೆ. ನಂತರ ಮಂಜು ನೀನು ‘ಕೆ’ ಎಂದು ಕರೆಯುವುದು ಕಪ್ಪೆ ಅಂತ ನಾ, ಅಯ್ಯೋ ನನಗೆ ಇಷ್ಟು ದಿನ ಗೊತ್ತೆ ಆಗಲಿಲ್ವಾಲ್ಲ, ಒ.. ಕೆ… ಕಪ್ಪೆ ಎಂದು ದಿವ್ಯಾ ಅವರನ್ನು ಅಣುಕಿಸುತ್ತಾರೆ.

Comments

Leave a Reply

Your email address will not be published. Required fields are marked *