ಎಲ್‌ಓಸಿಯಿಂದ ಎಲ್‌ಎಸಿವರೆಗೆ ಪ್ರಶ್ನೆ ಮಾಡಿದವರಿಗೆ ಅವರ ಭಾಷೆಯಲ್ಲೇ ಸರಿಯಾದ ತಿರುಗೇಟು: ಮೋದಿ

ನವದೆಹಲಿ: ಎಲ್‌ಓಸಿ, ಎಲ್‌ಎಸಿ ಬಳಿ ಯಾರು ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸುತ್ತಾರೋ ಅವರಿಗೆ ನಮ್ಮ ಸೈನಿಕರು ಸರಿಯಾಗಿ ತಿರುಗೇಟು ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುವ ಮೂಲಕ ಚೀನಾ ಮತ್ತು ಪಾಕಿಸ್ತಾನಕ್ಕೆ ಬಲವಾದ ಸಂದೇಶ ರವಾನಿಸಿದರು.

74ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ 7ನೇ ಬಾರಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಎಲ್‌ಓಸಿ( ಪಾಕಿಸ್ತಾನ ಬಳಿ ಇರುವ ಗಡಿ ನಿಯಂತ್ರಣ ರೇಖೆ)ಯಿಂದ ಎಲ್‌ಎಸಿ( ಚೀನಾ ಜೊತೆ ಹಂಚಿಕೊಂಡಿರುವ ವಾಸ್ತವಿಕ ನಿಯಂತ್ರಣ ರೇಖೆ)ವರೆಗೆ ಯಾರೂ ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸುತ್ತಾರೋ ಅವರಿಗೆ ನಮ್ಮ ಸೈನಿಕರು ಅವರಿಗೆ ಅರ್ಥವಾಗುವ ಭಾಷೆಯಲ್ಲೇ ಸರಿಯಾದ ತಿರುಗೇಟು  ನೀಡಿದ್ದಾರೆ ಎಂದರು.

ಗಲ್ವಾನ್‌ ಕಣಿವೆಯಲ್ಲಿ ಚೀನಾ ಜೊತೆಗಿ ಘರ್ಷಣೆಯಲ್ಲಿ ಹುತಾತ್ಮರಾದ 20 ಸೈನಿಕರ ತ್ಯಾಗವನ್ನು ಸ್ಮರಿಸಿದ ಮೋದಿ, ನಮ್ಮ ಸೈನಿಕರು ಏನು ಮಾಡಬಹುದು, ದೇಶ ಏನು ಮಾಡಬಹುದು ಎಂಬುದನ್ನು ಲಡಾಖ್‌ ವಿಚಾರದಲ್ಲಿ ವಿಶ್ವಕ್ಕೆ ಗೊತ್ತಾಗಿದೆ. ಆ ಎಲ್ಲ ಧೈರ್ಯಶಾಲಿ ಸೈನಿಕರಿಗೆ ನಾನು ಕೆಂಪುಕೋಟೆಯಲ್ಲಿ ನಿಂತು ನಮಸ್ಕರಿಸುತ್ತೇನೆ ಎಂದು ಹೇಳಿದರು.

ಅದು ಭಯೋತ್ಪಾದನೆಯಾಗಲಿ, ವಿಸ್ತರಣಾವಾದವಾಗಲಿ ಭಾರತ ಎರಡರ ವಿರುದ್ಧವೂ ಹೋರಾಡುತ್ತಿದೆ. ಭಾರತದ ಶಕ್ತಿಯ ಬಗ್ಗೆ ವಿಶ್ವದ ನಂಬಿಕೆ ಬಲಗೊಳ್ಳುತ್ತಿದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *