ಎಲ್ಲರನ್ನೂ ಯಾಮಾರಿಸಿಕೊಂಡು ಬಂದಿದ್ದೀರಿ- ಶುಭಾಗೆ ಕಿಚ್ಚ ಹೀಗಂದಿದ್ಯಾಕೆ..?

ಬಿಗ್‍ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಹೊಲಿಸಿದರೆ ಶುಭಾ ತುಂಬಾ ಕ್ಯೂಟ್ ಆಗಿ ನಡೆದುಕೊಳ್ಳುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರು ಮನೆ ಮಂದಿಗೆ ಇಟ್ಟಿರುವ ಹೆಸರು ಮಾತ್ರ ಸಖತ್ ಕ್ಯೂಟ್ ಆಗಿದೆ ಎಂದು ಸುದೀಪ್ ಹೇಳಿದ್ದಾರೆ.

ಚಿಂಪು ಎಂದು ಮಂಜು ಅವರನ್ನು ಕರೆಯುತ್ತೀರಿ. ಹೇಗೆ ಈ ಹೆಸರು ಹುಟ್ಟಿಕೊಂಡಿತು, ಸ್ವಲ್ವ ವಿವರವಾಗಿ ಹೇಳಿ ಎಂದು ಸುದೀಪ್ ಕೇಳಿದ್ದಾರೆ. ಆಗ ಶುಭಾ, ನಾನು ಮಂಜುನನ್ನು ಕ್ಯೂಟ್ ಚಿಂಪಾಂಜಿ ಎಂದು ಕರೆಯುತ್ತಿದ್ದೆ. ಆದರೆ ಆಮೇಲೆ ದಿನಕಳೆದಂತೆ ಅದು ಚಿಂಪು ಆಯಿತ್ತು. ಬಳಿಕ ಅವರ ಅಮ್ಮ ನನಗೆ ನನ್ನ ಮಗನನ್ನು ಹೀಗೆ ಕರೆಯುತ್ತೀಯಾ ಅಂತ ಬೈದರೆ ಅಂದ್ಕೊಂಡು ನಾನು ಅವನನ್ನು ಚಂಪು ಎಂದು ಕರೆಯಲು ಪ್ರಾರಂಭಿಸಿದೆ ಎಂದು ಹೇಳಿದರು.

ನಾನು ಮತ್ತೆ ದಿವ್ಯಾ ಉರುಡುಗ ಸಂಬಂಧ ಈ ಮನೆಯಲ್ಲಿ ಅಕ್ಕ ತಂಗಿಯ ಹಾಗೆ. ನನ್ನ ಕಸಿನ್ ಹೆಸರು ದಿವ್ಯಾ, ಅವಳನ್ನು ನಾನು ‘ಬಿಟ್ಟು’ ಎನ್ನುತ್ತೇನೆ. ಹೀಗೆ ದಿವ್ಯಾ ಅವರು ನನ್ನ ಕಸಿನ್‍ಗೆ ತುಂಬಾ ಹೋಲಿಕೆ ಇದ್ದಾರೆ. ಹೀಗಾಗಿ ನಾನು ಅವರನ್ನು ‘ಬಿಟ್ಟು’ ಎಂದು ಕರೆಯುತ್ತೇನೆ ಎಂದು ಹೇಳಿದ್ದಾರೆ.

ಅವರನ್ನು ಬಿಟ್ಟು ಇವರನ್ನು ಬಿಟ್ಟು ಎಂದು ಕರೆಯುವ ಅರ್ಥದಲ್ಲಿ ಇರುತ್ತದೆ. ಮಂಜು, ದಿವ್ಯಾ ಅವರಿಗೆ ಶುಭಾ ಹೀಗೆ ಕರೆಯುವುದು ಓಕೆನಾ ಎಂದು ಕೇಳಿದಾಗ. ಮಂಜು ಓಕೆ ಇಲ್ಲಾಂದ್ರ ಓಕೆ ಎಂದು ಹೇಳಿದ್ದಾರೆ. ನನಗೆ ಶುಭಾಕ್ಕ ಹಾಗೇ ಕರೆಯುವುದು ನನಗೂ ಓಕೆ ಸರ್ ಅಂತ ಇತ್ತ ದಿವ್ಯಾ ಉರುಡುಗ ಕೂಡ ಹೇಳಿದ್ದಾರೆ.

ಶುಭಾ ಅವರನ್ನು ಅವರು ಕ್ಯೂಟ್ ಕ್ಯೂಟ್ ಎಂದು ಹೇಳಿ ಯಾರು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿಲ್ಲ. ಅವರನ್ನು ಬಿಟ್ಟು.. ಇವರನ್ನು ಬಿಟ್ಟು ಎನ್ನುವ ಹಾಗೇ ಇದೆ ಎಂದು ಸುದೀಪ್ ಹೇಳುತ್ತಾ ತಮಾಷೆ ಮಾಡಿದ್ದಾರೆ. ಆಗ ಶುಭಾ ಇಲ್ಲ ಸರ್ ನಾನು ಹಾಗೇ ಹೇಳಿಲ್ಲ ಎಂದು ಕ್ಯೂಟ್ ಆಗಿ ಹೇಳಿದ್ದಾರೆ. ಹೀಗೆ ಹೇಳಿ ಹೇಳಿನೇ ನೀವು ಇಲ್ಲಿಯವರೆಗೆ ಎಲ್ಲರನ್ನೂ ಯಾಮಾರಿಸಿಕೊಂಡು ಬಂದಿದ್ದೀರಿ ಎಂದು ಸುದೀಪ್ ತಮಾಷೆ ಮಾಡಿದ್ದಾರೆ.

</p>

Comments

Leave a Reply

Your email address will not be published. Required fields are marked *