ಎರಡು ದಿನ ಮೈಸೂರಿನ ನ್ಯಾಯಾಲಯ ಸೀಲ್‍ಡೌನ್

ಮೈಸೂರು: ವಕೀಲರೊಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೈಸೂರಿನ ಜಿಲ್ಲಾ ನ್ಯಾಯಾಲಯ ಎರಡು ದಿನ ಸೀಲ್‍ಡೌನ್ ಮಾಡಲಾಗಿದೆ.

ಇಂದು ಮತ್ತು ನಾಳೆ ಎರಡು ದಿನ ನ್ಯಾಯಾಲಯ ಕಾರ್ಯ ಕಲಾಪಕ್ಕೆ ಬ್ರೇಕ್ ಹಾಕಲಾಗಿದೆ. ಎರಡು ದಿನ ನ್ಯಾಯಾಲಯದಲ್ಲಿ ಸ್ಯಾನಿಟೈಸ್ ಮಾಡುವ ಹಿನ್ನೆಲೆಯಲ್ಲಿ ಯಾರು ನ್ಯಾಯಾಲಯಕ್ಕೆ ಬರದಂತೆ ಮನವಿ ಮಾಡಲಾಗಿದೆ. ಸಂಬಂಧಪಟ್ಟ ಪ್ರಕರಣಗಳನ್ನು ಮುಂದಿನ ದಿನಾಂಕಕ್ಕೆ ಮುಂದೂಡಲಾಗಿದೆ.

ಮೈಸೂರು ಮಹಾನಗರ ಪಾಲಿಕೆ ನ್ಯಾಯಾಲಯ ಸ್ಯಾನಿಟೈಸ್ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಮೈಸೂರಿನಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಿನ್ನೆ ಒಂದೇ ದಿನ ಮೈಸೂರಿನಲ್ಲಿ 49 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 528ಕ್ಕೆ ಏರಿಕೆಯಾಗಿದೆ. 528ರಲ್ಲಿ 210 ಸಕ್ರಿಯ ಪ್ರಕರಣಗಳಿದ್ದು , 306 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

Comments

Leave a Reply

Your email address will not be published. Required fields are marked *