ಕೋಲಾರ: ಮಂಡ್ಯ ರಾಜಕಾರಣ ಸೇರಿದಂತೆ ಸಂಸದೆ ಸುಮಲತಾ ಕುರಿತು ಪ್ರತಿಕ್ರಿಯೆ ನೀಡಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿರಾಕರಿಸಿದ ಸನ್ನಿವೇಶ ಕೋಲಾರದಲ್ಲಿ ನಡೆಯಿತು.
ಕೋಲಾರಕ್ಕೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದ ವೇಳೆ ಹೊರ ವಲಯದ ಕೊಂಡರಾಜನಹಳ್ಳಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಗಣಿಗಾರಿಕೆ ವಿಚಾರ ಹಾಗೂ ಮಂಡ್ಯದಲ್ಲಿ ಇಂದು ನಡೆದ ದಿಶಾ ಸಭೆಯಲ್ಲಿ ಸಂಸದೆ ಸುಮಲತಾ ಗಣಿಗಾರಿಕೆ ಬಗ್ಗೆ ಪ್ರಸ್ತಾಪಿಸಿದ ವೇಳೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ಬಾಡಿಗೆ ತಾಯ್ತನದ ಆಲೋಚನೆ ಮಾಡಿದ್ದೆನು: ಕರೀನಾ

ಸುದ್ದಿಗಾರರ ಪ್ರಶ್ನೆಗೆ ಉತ್ತರಸಿದ ಅವರು ಆ ಹೆಣ್ಣು ಮಗಳ ಬಗ್ಗೆ ನಾನೇನೆ ಮಾತಾನಾಡಿದರೂ ತಿರುಚುವಂತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಅಕ್ರಮ ಗಣಿಗಾರಿಕೆ ನಡೀತಿದ್ದರೆ ಸರ್ಕಾರ ಕ್ರಮ ಜರುಗಿಸಲಿ. ಇನ್ನೂ ಮೈಸೂರು, ಬೆಂಗಳೂರು ರಸ್ತೆ ಕಾಮಗಾರಿ ಬಗ್ಗೆ ಸುಮಲತ ಟೀಕೆ ಮಾಡಿದ್ದಾರೆ ಎಂಬ ಪ್ರಶ್ನೆಗೆ ಅವರು ತಾಂತ್ರಿಕ ತಜ್ಞರು ಇರಬಹುದು, ನಾನು ಸಾಮಾನ್ಯ ವ್ಯಕ್ತಿ ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ಭಗವತ್ ಖೂಬಾ ಅವರನ್ನ ಬಂದೂಕು ಮೂಲಕ ಸ್ವಾಗತ ಕೋರಿದ ಬಿಜೆಪಿಗರ ನಡೆಗೆ ಟಾಂಗ್ ನೀಡಿದ ಅವರು, ದೇಶ ಯಾವ ದಿಕ್ಕಿಗೆ ಹೋಗುತ್ತಿದೆ ಎನ್ನುವುದು ಇಲ್ಲಿ ಗೊತ್ತಾಗುತ್ತಿದೆ. ನಮ್ಮ ಸಂಸ್ಕøತಿಯತ್ತ ಸಾಗುತ್ತಿದೆ ಎಂದಿದ್ದಾರೆ. ಎತ್ತಿನಹೊಳೆ ಯೋಜನೆಯು ಹಣ ಹೊಡೆಯುವ, ಹಣ ಕೊಳ್ಳೆ ಹೊಡೆಯುವ ಕಾರ್ಯಕ್ರಮವಾಗಿದ್ದು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಎತ್ತಿನ ಹೊಳೆ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಲಪಾಟಿಯಿಸಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.

ಮೂರು ವರ್ಷಗಳಲ್ಲಿ ಎತ್ತಿನ ಹೂಳೆ ಹರಿಸುವುದಾಗಿ ಹೇಳಿದ್ದಾರೆ. ಆದರೆ 10 ವರ್ಷ ಆಗಿದೆ, ನೀರು ಬಂದಿಲ್ಲ. ರಮೇಶ್ ಕುಮಾರ್ ಅವರು ರಾಜ್ಯದಲ್ಲಿ ಯಾರು ಮಾಡದೆ ಇರುವ ಕೆಲಸವನ್ನು ಮಾಡಿಲ್ಲ. ಕೆ.ಸಿ.ವ್ಯಾಲಿ ಕೊಳಚೆ ನೀರು ಕೊಟ್ಟು ಭಗೀರಥ ಸ್ವಘೋಷಿತ ನಾಯಕರಾಗಿದ್ದಾರೆ. ಕೋಲಾರದಲ್ಲಿ ರಮೇಶ್ ಕುಮಾರ್ ಮತ್ತು ಶ್ರೀನಿವಾಸಗೌಡರ ಸಂಬಂಧ ನನಗೆ ಗೊತ್ತಿಲ್ಲ, ಅವರಿಬ್ಬರದ್ದ ವೈಯಕ್ತಿಕ ಸಂಬಂಧವಿರಬಹುದು ಎಂದಿದ್ದಾರೆ.

Leave a Reply