ಬೆಳಗಾವಿ/ಚಿಕ್ಕೋಡಿ: ಎಣ್ಣೆ ಬೇಕು ಎಣ್ಣೆ ಎಂದು ಬಿಜೆಪಿ ಮುಖಂಡ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಚಿಕ್ಕೋಡಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಬಾರ್ ಬಂದ್ ಮಾಡದಂತೆ ಮದ್ಯ ಪ್ರಿಯರ ಜೊತೆಗೆ ಗ್ರಾಮ ಪಂಚಾಯತಿ ಸದಸ್ಯ ಪ್ರತಿಭಟನೆ ನಡೆಸಿದ್ದಾರೆ. ಬಾರ್ ಎದುರೇ ಗುಂಪು ಕಟ್ಟಿಕೊಂಡು ಎಣ್ಣೆ ಬೇಕು ಎಣ್ಣೆ ಎಂದು ಪ್ರೊಟೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳ ರ‍್ಯಾಗಿಂಗ್- ಆರು ಮಂದಿ ಬಂಧನ

ಸಂಬರಗಿ ಗ್ರಾಮ ಪಂಚಾಯತ ಸದಸ್ಯ ಅಶೋಕ್ ಭಾನುದಾಸೆ ಮಾನೆ ಹಾಗೂ ಕೆಲವು ಕುಡುಕರು ಸಂಬರಗಿ ಗ್ರಾಮದಲ್ಲಿರುವ ಬಾರ್ ಬಂದ್ ಮಾಡುವಂತೆ ರೈತ ಸಂಘಟನೆ ಹಾಗೂ ಸ್ಥಳೀಯರ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆ ಸ್ಥಳೀಯರಿಗೆ ವಿರೋಧವಾಗಿ ಗ್ರಾಮ ಪಂಚಾಯತ ಸದಸ್ಯ ಅಶೋಕ್ ಭಾನುದಾಸೆ ಮಾನೆ ಹಾಗೂ ಕುಡುಕರು ಪ್ರತಿಭಟನೆ ನಡೆಸಿದ್ದಾರೆ.


Leave a Reply