ಎಗ್ ರೋಲ್ ಮಾಡಿ ನಾಲಿಗೆ ಚಪ್ಪರಿಸಿ ತಿನ್ನಿ

ಬಾಯಿ ರುಚಿ ಹೆಚ್ಚಿಸುವ, ಹೊಟ್ಟೆ ತುಂಬಿಸುವ ಹೊಸ ರೆಸಿಪಿಗಳನ್ನು ಮಾಡಲು ನಾವು ಬಯಸುತ್ತೇವೆ. ರೋಡ್ ಸೈಡ್ ಸಿಗುವ ಚಾಟ್ಸ್‌ಗಳನ್ನು ತಿಂದು ನಾಲಿಗೆ ಚಪ್ಪರಿಸುತ್ತೇವೆ. ಆದರೆ ಹೊಟ್ಟೆ ಹಾಳುಗುತ್ತದೆ ಎನ್ನುವ ಭಯವು ನಮ್ಮಲ್ಲಿ ಇರುತ್ತದೆ. ಆದರೆ ನಾವೇ ಮನೆಯಲ್ಲಿ ವಿವಿಧ ಬಗೆಯ ತಿಂಡಿಗಳನ್ನು ಮಾಡಿ ನಾಲಿಗೆ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ನೀವು ಸರಳವಾಗಿ ಮನೆಯಲ್ಲಿ ಈ ಎಗ್ ರೋಲ್ ಮಾಡಲು ಟ್ರೈ ಮಾಡ ಬಹುದಾಗಿದೆ.

ಬೇಕಾಗುವ ಸಾಮಗ್ರಿಗಳು:
* ಮೊಟ್ಟೆ- 4
* ಮೈದಾ- 2 ಕಪ್
* ಈರುಳ್ಳಿ-2
* ಹಸಿ ಮೆಣಸಿನಕಾಯಿ 2-3
* ಖಾರದ ಪುಡಿ- 2 ಟೀ ಸ್ಪೂನ್
* ಟೊಮೆಟೊ ಸಾಸ್
* ಚಿಲ್ಲಿ ಸಾಸ್
* ನಿಂಬೆ ರಸ
* ಸೌತೆಕಾಯಿ (ಬೇಕಿದ್ದರೆ ಹಾಕಬಹುದು)
* ಎಣ್ಣೆ- 1ಕಪ್
* ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:
* ಮೈದಾಕ್ಕೆ ಸ್ವಲ್ಪ ನೀರು ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಪರೋಟದ ಹದಕ್ಕೆ ಕಲೆಸಿ. ನಂತರ ಅದರಿಂದ ಮೀಡಿಯಂ ಗಾತ್ರದ ಉಂಡೆಗಳನ್ನು ಮಾಡಿ, ಪರೋಟ ತಟ್ಟಿದಂತೆ ತಟ್ಟಿ.

* ಈಗ ಬಟ್ಟಲಿಗೆ ಮೊಟ್ಟೆ, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಕದಡಿ.

*ಮತ್ತೊಂದು ಪಾತ್ರೆಯಲ್ಲಿ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಸೌತೆಕಾಯಿ, ಟೊಮೆಟೊ ಸಾಸ್, ಚಿಲ್ಲಿ ಸಾಸ್ ಮತ್ತು ನಿಂಬೆ ರಸ ಹಾಕಿ ಮಿಕ್ಸ್ ಮಾಡಿ ಇಡಿ.

*ನಂತರ ತವಾವನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಸವರಿ ಪರೋಟದ ಎರಡೂ ಬದಿಯನ್ನು ಬೇಯಿಸಿ ಪೇಪರ್‌ನಲ್ಲಿ ಹಾಕಿಡಿ.

* ನಂತರ ಅದೇ ತವಾಕ್ಕೆ ಸ್ವಲ್ಪ ಎಣ್ಣೆ ಹಾಕಿ ಆಮ್ಲೇಟ್ ಮಾಡಿ, ಆಮ್ಲೇಟ್ ಬಿಸಿಯಾಗಿರುವಾಗಲೇ ಅದನ್ನು ಬೇಯಿಸಿದ ಪರೋಟದ ಮೇಲೆ ಹಾಕಿ, ಮತ್ತೆ ತವಾದ ಮೇಲೆ 2-1 ನಿಮಿಷ ಬಿಸಿ ಮಾಡಿ, ಈಗ ಆಮ್ಲೇಟ್ ಇರುವ ಕಡೆ ಸಾಸ್ ಮಿಕ್ಸ್ ಮಾಡಿರುವ ತರಕಾರಿ ಹಾಕಿ, ಖಾರದ ಪುಡಿ ಚಿಮುಕಿಸಿ, ರೋಲ್ ರೀತಿ ಮಾಡಿ ಸಿಲ್ವರ್ ಪೇಪರ್ ನಿಂದ ಸುತ್ತಿದರೆ ಎಗ್ ರೋಲ್ ಅವಿಯಲು ಸಿದ್ಧವಾಗುತ್ತದೆ.

Comments

Leave a Reply

Your email address will not be published. Required fields are marked *